ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಟಿಟಿ 20 ವಿಶ್ವಕಪ್ ಫೈನಲ್ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾಗೆ ದೇಶಾದ್ಯಂತ ಶುಭಾಶಯಗಳ ಸುರಿಮಳೆ ಹರಿದುಬರುತ್ತಿವೆ. ಈ ನಡುವೆ ಉತ್ತರ ಪ್ರದೇಶದ ಪೊಲೀಸರು ಟೀಂ ಇಂಡಿಯಾಗೆ ವಿಶಿಷ್ಟ ರೀತಿಯಲ್ಲಿ ಶುಭ ಕೋರಿದ್ದಾರೆ.
ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ ಟ್ವೀಟ್ ಮಾಡಿರುವ ಉತ್ತರ ಪ್ರದೇಶದ ಪೊಲೀಸರು, ದಕ್ಷಿಣ ಆಫ್ರಿಕಾದ ಹೃದಯಗಳನ್ನು ಮುರಿದ ಭಾರತೀಯ ಬೌಲರ್ಗಳು ತಪ್ಪಿತಸ್ಥರು ಎಂದು ಕಂಡುಬಂದ ನಂತರ ಅವರ ವಿರುದ್ಧ “ಶಿಕ್ಷೆ” ಘೋಷಿಸಲಾಗಿದೆ. ಶಿಕ್ಷೆಯು “ಶತಕೋಟಿ ಅಭಿಮಾನಿಗಳಿಂದ ಆಜೀವ ಪ್ರೀತಿ”. ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ಈ ಪೋಸ್ಟ್ ಭಾರೀ ವೈರಲ್ ಆಗಿದೆ.
ಎಕ್ಸ್ ನಲ್ಲಿ ಯುಪಿ ಪೊಲೀಸ್, “ಬ್ರೇಕಿಂಗ್ ನ್ಯೂಸ್: ದಕ್ಷಿಣ ಆಫ್ರಿಕಾದ ಹೃದಯವನ್ನು ಮುರಿದ ಭಾರತೀಯ ಬೌಲರ್ಗಳು ತಪ್ಪಿತಸ್ಥರು ಎಂದು ಸಾಬೀತಾಗಿದೆ. ಶಿಕ್ಷೆ: ಶತಕೋಟಿ ಅಭಿಮಾನಿಗಳಿಂದ ಜೀವಮಾನದ ಪ್ರೀತಿ!” ಎಂದು ಪೋಸ್ಟ್ ಮಾಡಿದೆ.
𝑩𝒓𝒆𝒂𝒌𝒊𝒏𝒈 𝑵𝒆𝒘𝒔: Indian bowlers found guilty of breaking South African hearts.
𝑺𝒆𝒏𝒕𝒆𝒏𝒄𝒆: Lifelong love from a billion fans! ❤️🏏 #INDvSAFinal#T20WorldCupFinal pic.twitter.com/UPaCzgf6vm
— UP POLICE (@Uppolice) June 29, 2024
ಭಾರತವು ಟಿ 20 ವಿಶ್ವಕಪ್ ಗೆದ್ದಾಗ ದೇಶಾದ್ಯಂತ ತಡರಾತ್ರಿ ಸಂಭ್ರಮಾಚರಣೆಗಳು ಮುಗಿಲು ಮುಟ್ಟಿದ್ದವು, ಅಭಿಮಾನಿಗಳು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಬೀದಿಗಳಲ್ಲಿ ನೆರೆದಿದ್ದರು. ‘ಟೀಂ ಇಂಡಿಯಾ’ ಹುರಿದುಂಬಿಸಲು ದೇಶದ ವಿವಿಧ ಭಾಗಗಳಲ್ಲಿ ಜನಸಮೂಹ ಜಮಾಯಿಸುತ್ತಿದ್ದಂತೆ ‘ಇಂಡಿಯಾ, ಇಂಡಿಯಾ’ ಎಂಬ ಘೋಷಣೆಗಳು ಪ್ರತಿಧ್ವನಿಸಿದವು. ಜಮ್ಮು, ಹೈದರಾಬಾದ್, ಬೆಂಗಳೂರು, ಪಾಟ್ನಾ. ಪುಣೆ ಸೇರಿದಂತೆ ದೇಶಾದ್ಯಂತ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.