Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾಗಲಕೋಟೆಯಲ್ಲಿ ಟ್ರೇಡಿಂಗ್ ಹೆಸರಲ್ಲಿ 1.20 ಕೋಟಿ ವಂಚನೆ ತನಿಖೆ ವೇಳೆ, 1296 ಮ್ಯೂಲ್ ಅಕೌಂಟ್ ಪತ್ತೆ, ಆರೋಪಿ ಅರೆಸ್ಟ್!

21/03/2026 11:05 AM

BIG NEWS : ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಇಲಾಖಾ ಹಂತದಲ್ಲೇ ಮುಗಿಯಬೇಕು : ಹೈಕೋರ್ಟ್ ಅಭಿಪ್ರಾಯ

21/03/2026 10:59 AM

ಎಸ್‌ಬಿಐಗೆ ಐಟಿ ಶಾಕ್: 6,337 ಕೋಟಿ ರೂ. ತೆರಿಗೆ ಪಾವತಿಗೆ ನೋಟಿಸ್ | SBI

21/03/2026 10:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಯಾದ ಸಿಎಂ ಸಿದ್ದರಾಮಯ್ಯ : ರಾಜ್ಯದ ಪರವಾಗಿ ಮಂಡಿಸಲಾದ ಪ್ರಮುಖ ಪ್ರಸ್ತಾವನೆಗಳು ಹೀಗಿವೆ
KARNATAKA

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಯಾದ ಸಿಎಂ ಸಿದ್ದರಾಮಯ್ಯ : ರಾಜ್ಯದ ಪರವಾಗಿ ಮಂಡಿಸಲಾದ ಪ್ರಮುಖ ಪ್ರಸ್ತಾವನೆಗಳು ಹೀಗಿವೆ

By kannadanewsnow5729/06/2024 11:57 AM

ನವದೆಹಲಿ : ನಿನ್ನೆ ಸಂಜೆ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರನ್ನು ಭೇಟಿಯಾಗಿ ರಾಜ್ಯದ ಪೊಲೀಸ್‌ ಪಡೆಯ ಬಲವರ್ಧನೆಗೆ ಸಂಬಂಧಿಸಿದ ವಿವಿಧ ಪ್ರಸ್ತಾವನೆಗಳ ಮಂಜೂರಾತಿಗೆ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಅಗತ್ಯವಿರುವ ನೆರವಿನ ಕುರಿತ ಹಲವು ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

ರಾಜ್ಯದ ಪರವಾಗಿ ಮಂಡಿಸಲಾದ ಪ್ರಮುಖ ಪ್ರಸ್ತಾವನೆಗಳು ಹೀಗಿವೆ:

ಭಾರತ ಸರ್ಕಾರವು 80 ಕೋಟಿ ರೂ. ವೆಚ್ಚದಲ್ಲಿ India Reserve Battalion ಸ್ಥಾಪನೆಗೆ ಅನುಮೋದನೆ ನೀಡಿದ್ದು, ಹೆಚ್ಚುವರಿಯಾಗಿ ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಎರಡು ಬೆಟಾಲಿಯನ್‌ ಸ್ಥಾಪನೆಗೆ ಅನುಮೋದನೆ ನೀಡುವುದು.

ನಿರ್ಭಯಾ ನಿಧಿಯಡಿಯಲ್ಲಿ ಬೆಂಗಳೂರು ನಗರದಂತೆಯೇ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ನಗರಗಳಲ್ಲಿ ಸೇಫ್‌ ಸಿಟಿ ಯೋಜನೆಯನ್ನು ತಲಾ 200 ಕೋಟಿ ರೂ. ಗಳಂತೆ ಒಟ್ಟು 1,000 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ಅನುಮೋದನೆ ನೀಡುವುದು.

ಹೈಕೋರ್ಟಿನ ಆದೇಶದಂತೆ ಬಂಧಿಸುವ ಅಧಿಕಾರ ಹೊಂದಿರುವ ಸಿಬ್ಬಂದಿಗೆ Body worn camera ಕಡ್ಡಾಯವಾಗಿರುವುದರಿಂದ ರಾಜ್ಯದಲ್ಲಿ ಇನ್ನೂ 175 ಕೋಟಿ ರೂ. ವೆಚ್ಚದಲ್ಲಿ 58,546 Body worn camera ಖರೀದಿಸುವ ಅಗತ್ಯವಿದ್ದು, 100 ಕೋಟಿ ರೂ. ನೆರವು ನೀಡುವುದು.

ಪ್ರಸಕ್ತ ಸಾಲಿನಲ್ಲಿ ಬಾಡಿಗೆ ಕಟ್ಟದಲ್ಲಿರುವ / ಶಿಥಿಲಾವಸ್ಥೆಯಲ್ಲಿರುವ 100 ಪೊಲೀಸ್‌ ಠಾಣೆಗಳಿಗೆ ಹೊಸ ಕಟ್ಟಡವನ್ನು ತಲಾ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 300 ಕೋಟಿ ರೂ. ಅಗತ್ಯವಿದೆ. ಇದಕ್ಕೆ ನೆರವು ಒದಗಿಸುವುದು.

ಪೊಲೀಸ್‌ ಕ್ಯಾಂಟೀನ್‌ ಸೌಲಭ್ಯ ಮಾದರಿಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿಗೂ ಕ್ಯಾಂಟೀನ್‌ ಸ್ಥಾಪನೆಗೆ ಅಗತ್ಯ ಅನುಮತಿಗಳನ್ನು ಒದಗಿಸುವುದು, ಪೊಲೀಸ್‌ ವಸತಿ ಗೃಹಗಳ ನಿರ್ಮಾಣಕ್ಕೆ ನೆರವು, ವಿಧಿವಿಜ್ಞಾನ ಪ್ರಯೋಗಾಲಯಗಳ ಆಧುನೀಕರಣಕ್ಕೆ ನೆರವು ಮತ್ತಿತರ ವಿಷಯಗಳ ಕುರಿತು ಸಹ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯದ ಗೃಹ ಸಚಿವ DR. G Parameshwara, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮೊದಲಾದವರು ಉಪಸ್ಥಿತರಿದ್ದರು.

Cm Siddaramaiah meets Union Home Minister Amit Shah: Here are the key proposals presented on behalf of the state ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಯಾದ ಸಿಎಂ ಸಿದ್ದರಾಮಯ್ಯ : ರಾಜ್ಯದ ಪರವಾಗಿ ಮಂಡಿಸಲಾದ ಪ್ರಮುಖ ಪ್ರಸ್ತಾವನೆಗಳು ಹೀಗಿವೆ
Share. Facebook Twitter LinkedIn WhatsApp Email

Related Posts

ಬಾಗಲಕೋಟೆಯಲ್ಲಿ ಟ್ರೇಡಿಂಗ್ ಹೆಸರಲ್ಲಿ 1.20 ಕೋಟಿ ವಂಚನೆ ತನಿಖೆ ವೇಳೆ, 1296 ಮ್ಯೂಲ್ ಅಕೌಂಟ್ ಪತ್ತೆ, ಆರೋಪಿ ಅರೆಸ್ಟ್!

21/03/2026 11:05 AM1 Min Read

BIG NEWS : ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಇಲಾಖಾ ಹಂತದಲ್ಲೇ ಮುಗಿಯಬೇಕು : ಹೈಕೋರ್ಟ್ ಅಭಿಪ್ರಾಯ

21/03/2026 10:59 AM1 Min Read

ಚಿಕ್ಕಮಗಳೂರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಸರ್ಕಾರಿ ಬಸ್ : 8 ಪ್ರಯಾಣಿಕರಿಗೆ ಗಾಯ, ಆಸ್ಪತ್ರೆಗೆ ದಾಖಲು!

21/03/2026 10:27 AM1 Min Read
Recent News

ಬಾಗಲಕೋಟೆಯಲ್ಲಿ ಟ್ರೇಡಿಂಗ್ ಹೆಸರಲ್ಲಿ 1.20 ಕೋಟಿ ವಂಚನೆ ತನಿಖೆ ವೇಳೆ, 1296 ಮ್ಯೂಲ್ ಅಕೌಂಟ್ ಪತ್ತೆ, ಆರೋಪಿ ಅರೆಸ್ಟ್!

21/03/2026 11:05 AM

BIG NEWS : ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಇಲಾಖಾ ಹಂತದಲ್ಲೇ ಮುಗಿಯಬೇಕು : ಹೈಕೋರ್ಟ್ ಅಭಿಪ್ರಾಯ

21/03/2026 10:59 AM

ಎಸ್‌ಬಿಐಗೆ ಐಟಿ ಶಾಕ್: 6,337 ಕೋಟಿ ರೂ. ತೆರಿಗೆ ಪಾವತಿಗೆ ನೋಟಿಸ್ | SBI

21/03/2026 10:57 AM

UNI ಕಚೇರಿಗೆ ಬೀಗ: ಭೂ ಮಂಜೂರಾತಿ ರದ್ದತಿ ಎತ್ತಿಹಿಡಿದ ಹೈಕೋರ್ಟ್; ದೆಹಲಿ ಪೊಲೀಸರಿಂದ ಕಚೇರಿ ಸೀಲ್

21/03/2026 10:49 AM
State News
KARNATAKA

ಬಾಗಲಕೋಟೆಯಲ್ಲಿ ಟ್ರೇಡಿಂಗ್ ಹೆಸರಲ್ಲಿ 1.20 ಕೋಟಿ ವಂಚನೆ ತನಿಖೆ ವೇಳೆ, 1296 ಮ್ಯೂಲ್ ಅಕೌಂಟ್ ಪತ್ತೆ, ಆರೋಪಿ ಅರೆಸ್ಟ್!

By kannadanewsnow0521/03/2026 11:05 AM KARNATAKA 1 Min Read

ಬಾಗಲಕೋಟೆ : ಟ್ರೆಡಿಂಗ್ ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಇದೀಗ ಬಾಗಲಕೋಟೆ ಸೆನ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ…

BIG NEWS : ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಇಲಾಖಾ ಹಂತದಲ್ಲೇ ಮುಗಿಯಬೇಕು : ಹೈಕೋರ್ಟ್ ಅಭಿಪ್ರಾಯ

21/03/2026 10:59 AM

ಚಿಕ್ಕಮಗಳೂರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಸರ್ಕಾರಿ ಬಸ್ : 8 ಪ್ರಯಾಣಿಕರಿಗೆ ಗಾಯ, ಆಸ್ಪತ್ರೆಗೆ ದಾಖಲು!

21/03/2026 10:27 AM

BREAKING : ಗ್ಯಾಸ್ ಇಲ್ಲದೆ ಕಂಗಾಲಾದ ಜನರಿಗೆ ಕಳ್ಳರ ಕಾಟ : ಬೆಂಗಳೂರಲ್ಲಿ ಯುಗಾದಿ ಹಬ್ಬದಂದೆ ಸಿಲಿಂಡರ್ ಕದ್ದ ಖದೀಮರು!

21/03/2026 10:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.