ನವದೆಹಲಿ : ಭಾರತವನ್ನ ಟೀಕಿಸುವ 2023ರ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್’ನ ವರದಿಯು ‘ತೀವ್ರ ಪಕ್ಷಪಾತ’ ಮತ್ತು ವೋಟ್ ಬ್ಯಾಂಕ್ ಪರಿಗಣನೆಗಳಿಂದ ಪ್ರೇರಿತವಾಗಿದೆ ಎಂದು ಭಾರತ ಶುಕ್ರವಾರ ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಸಚಿವಾಲಯದ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸಾಪ್ತಾಹಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, “ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ 2023 ರ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವರದಿಯನ್ನ ಬಿಡುಗಡೆ ಮಾಡಿರುವುದನ್ನ ನಾವು ಗಮನಿಸಿದ್ದೇವೆ. ಹಿಂದಿನಂತೆ, ವರದಿಯು ತೀವ್ರ ಪಕ್ಷಪಾತದಿಂದ ಕೂಡಿದೆ, ಭಾರತದ ಸಾಮಾಜಿಕ ರಚನೆಯ ಬಗ್ಗೆ ತಿಳುವಳಿಕೆಯನ್ನ ಹೊಂದಿಲ್ಲ ಮತ್ತು ವೋಟ್ ಬ್ಯಾಂಕ್ ಪರಿಗಣನೆಗಳು ಮತ್ತು ಪೂರ್ವನಿರ್ಧಾರಿತ ದೃಷ್ಟಿಕೋನದಿಂದ ಪ್ರೇರಿತವಾಗಿದೆ ” ಎಂದು ಹೇಳಿದರು.
BIG NEWS: ಲೋಕಸಭಾ ಚುನಾವಣೆಯಲ್ಲಿ ‘ಡಿ.ಕೆ ಸುರೇಶ್’ ಸೋಲಿಸಿದ್ದೇ ‘ಸಿಎಂ ಸಿದ್ಧರಾಮಯ್ಯ’: ಆರ್.ಅಶೋಕ್ ಸ್ಪೋಟಕ ಹೇಳಿಕೆ
ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ, ವಾಲ್ಮೀಕಿ ನಿಗಮದ ಹಗರಣ CBI ತನಿಖೆಗೆ ಸಿ.ಟಿ.ರವಿ ಆಗ್ರಹ
BREAKING : ಭೂ ಹಗರಣ ಕೇಸ್ ; 5 ತಿಂಗಳ ಬಳಿಕ ಜೈಲಿನಿಂದ ಹೊರಬಂದ ಜಾರ್ಖಂಡ್ ಮಾಜಿ ಸಿಎಂ ‘ಹೇಮಂತ್ ಸೊರೆನ್’