ಬೆಂಗಳೂರು: ಸಂಗ್ರಹವಾಗುತ್ತಿರುವ ಹೆಚ್ಚಿನ ಹಾಲನ್ನು ಹೇಗೆ ಹೊರಗೆ ಚೆಲ್ಲುವುದಕ್ಕೆ ಸಾಧ್ಯ ಅಂಥ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ಅವರು ಇಂದು ನಂದಿನ ಹಾಲು ಬೆಲೆ ಏರಿಕೆಗೆ ಸಂಬಂಧಪಟ್ಟಂಥೆ ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೇ ಅವರು ಮಾತನಾಡಿ ನಾವು ಬೆಲೆ ಏರಿಕೆಯನ್ನು ಮಾಡಿಲ್ಲ ಬದಲಿಗೆ 50ಎಂಎಲ್ ಅನ್ನು ಹೆಚ್ಚಳ ಮಾಡಿ ಅದಕ್ಕೆ ಬೆಲೆ ನಿಗದಿ ಮಾಡಲಾಗಿದೆ ಅಂಥ ತಿಳಿಸಿದರು. ಇನ್ನೂ ಬೆಲೆ ಏರಿಕೆ ಬಗ್ಗೆ ಹೋಟೆಲ್ ಗ್ರಾಹಕರು ಹೊರೆಯಾಗುತ್ತಿದೆ ಎನ್ನುವುದನ್ನು ಆರೋಪಿಸಿದ್ದು, ತಮ್ಮ ಹೋಟೆಲ್ ಬೆಲೆಯ ಪದಾರ್ಥಗಳನ್ನು ಹೆಚ್ಚಳ ಮಾಡುವುದರ ಬಗ್ಗೆ ಸೂಚನೆ ನೀಡಿದ್ದಾರೆ ಅಂಥ ಸಿಎಂಗೆ ಮಾಧ್ಯಮದವರು ಮಾಹಿತಿ ನೀಡಿದ ವೇಳೆಯಲ್ಲಿ ಹಾಲಿನ ಬೆಲೆಯನ್ನು ಹೆಚ್ಚಳ ಮಾಡಿಲ್ಲ ಅಂತ ಅವರು ಮಾಹಿತಿ ನೀಡಿದರು.