Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರ ಜಿಲ್ಲಾ ಹೋರಾಟಕ್ಕೆ ಬೆಂಬಲ ಘೋಷಿಸಿದ ದೂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಫಯಾಸ್ ಅಹಮದ್

13/09/2025 10:08 PM

ಸಿದ್ಧತೆ ಆರಂಭಿಸಿ, ವಿಶ್ವ ಶಕ್ತಿಗಳು ಪಾಕ್’ನಲ್ಲಿ ಒಟ್ಟುಗೂಡಲಿವೆ ; 2027ರ ‘SCO ಶೃಂಗಸಭೆ’ ಆಯೋಜಿಸುವುದಾಗಿ ‘ಷರೀಫ್’ ಘೋಷಣೆ

13/09/2025 9:41 PM

VIDEO : ‘ಕೆಲವ್ರು ಹಸುವನ್ನ ಪ್ರಾಣಿ ಎಂದು ಪರಿಗಣಿಸೋಲ್ಲ’ ; ಪ್ರಾಣಿ ಪ್ರಿಯರ ಕುರಿತು ‘ಪ್ರಧಾನಿ ಮೋದಿ’ ಹಾಸ್ಯಮಯ ಹೇಳಿಕೆ ವೈರಲ್

13/09/2025 9:25 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸ್ಥಳೀಯ ಕುಶಲಕರ್ಮಿಗಳು, ನೇಕಾರರ ಉತ್ತೇಜನಕ್ಕೆ ‘ಜಿಯೋಮಾರ್ಟ್’ನಿಂದ ಮತ್ತೊಂದು ಮಹತ್ವದ ಘೋಷಣೆ | Jio Mart
INDIA

ಸ್ಥಳೀಯ ಕುಶಲಕರ್ಮಿಗಳು, ನೇಕಾರರ ಉತ್ತೇಜನಕ್ಕೆ ‘ಜಿಯೋಮಾರ್ಟ್’ನಿಂದ ಮತ್ತೊಂದು ಮಹತ್ವದ ಘೋಷಣೆ | Jio Mart

By kannadanewsnow0924/06/2024 7:09 PM

ಮುಂಬೈ : ರಿಲಯನ್ಸ್ ರೀಟೇಲ್ ನ ಇ-ಮಾರ್ಕೆಟ್ ಪ್ಲೇಸ್ ಅಂಗವಾದ ಜಿಯೋಮಾರ್ಟ್ ನಿಂದ ಸೋಮವಾರ (ಜೂನ್ 24) ಮಹತ್ತರವಾದ ಸಹಭಾಗಿತ್ವವನ್ನು ಘೋಷಣೆ ಮಾಡಲಾಗಿದೆ. ಸಣ್ಣ- ಪ್ರಮಾಣದ ಮಾರಾಟಗಾರರು, ಕುಶಲಕರ್ಮಿಗಳು ಹಾಗೂ ಸಾಂಪ್ರದಾಯಿಕರರು ಒಳಗೊಂಡಂತೆ ಅವರ ಬೆಳವಣಿಗೆಗೆ ಸಹಕರಿಸಬೇಕು ಹಾಗೂ ಅವರನ್ನು ಸಬಲಗೊಳಿಸಬೇಕು ಎಂಬ ದೃಷ್ಟಿಕೋನದ ಹಿನ್ನೆಲೆಯಲ್ಲಿ JASCOLAMPF ಹಾಗೂ JHARCRAFT ಜೊತೆಗೆ ಸಹಭಾಗಿತ್ವ ವಹಿಸಲಾಗಿದೆ.

ಅಂದ ಹಾಗೆ ಮೊದಲನೆಯದು ಜಾರ್ಖಂಡ್ ನ ರಾಜ್ಯ ಸರ್ಕಾರಿ ಎಂಪೋರಿಯಂ ಹಾಗೂ ಎರಡನೆಯದು ಜಾರ್ಖಂಡ್ ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವಂಥದ್ದು. ಜಾರ್ಖಂಡ್ ನಲ್ಲಿನ ಕುಶಲಕರ್ಮಿಗಳ ಬದುಕಿನಲ್ಲಿ ಬಹುದೊಡ್ಡ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಈ ಜಂಟಿ ಉಪಕ್ರಮವು ಬಹಳ ದೊಡ್ಡ ಮೈಲುಗಲ್ಲಾಗಿದೆ. ಮತ್ತು ಇದರೊಂದಿಗೆ ಜಿಯೋಮಾರ್ಟ್ ಮೂಲಕ ದೇಶದಾದ್ಯಂತ ತಲುಪುವುದಕ್ಕೆ ಅನುಕೂಲ ಆಗುತ್ತದೆ.

ಜಾರ್ಖಂಡ್ ನ ಪಟ್ಟಣ ಮತ್ತು ನಗರಗಳಾದ ಗುಮ್ಲಾ, ಸರೈಕೆಲಾ ಹಾಗೂ ಪಲಮೌ ಸೇರಿದಂತೆ ಇತರೆಡೆಗಳಿಂದ ಅಪಾರ ಸಂಖ್ಯೆಯ ಕುಶಲಕರ್ಮಿಗಳನ್ನು ಜಿಯೋಮಾರ್ಟ್ ವೇದಿಕೆಗೆ ಕರೆತರುವಲ್ಲಿ ಈ ಸಹಯೋಗ ನೆರವಾಗಿದೆ. ಇದೀಗ ಈ ಕುಶಲಕರ್ಮಿಗಳು ತನ್ನ ಅದ್ಭುತ ಕರಕುಶಲ ವಸ್ತುಗಳನ್ನು ಪ್ರದರ್ಶಿಸುವುದಕ್ಕೆ ಮಾತ್ರವಲ್ಲ, ಅದರ ಜತೆಗೆ ದೇಶದಾದ್ಯಂತ ಇರುವಂಥ ಗ್ರಾಹಕರನ್ನು ತಲುಪುವುದಕ್ಕೆ ಮತ್ತು ತಮ್ಮ ವ್ಯಾಪಾರ- ವ್ಯವಹಾರವನ್ನು ವಿಸ್ತರಿಸುವುದಕ್ಕೆ ಸಹಾಯ ಆಗುತ್ತದೆ.

ಜಾರ್ಖಂಡ್ ನ ರಾಜ್ಯ ಸರ್ಕಾರದ ಎಂಪೋರಿಯಂ ಅನ್ನು JASCOLAMPF ಎಂದು ಕರೆಯಲಾಗುತ್ತದೆ. ತಮ್ಮ ವ್ಯವಹಾರವನ್ನು ಆರಂಭಿಸುವುದಕ್ಕೆ ಯಾವುದೇ ಸಮಸ್ಯೆ ಆಗದಂಥ, ಗ್ರಾಹಕರಿಗೆ ಸಂಪೂರ್ಣ ಪಾರದರ್ಶಕವಾದಂಥ ಹಾಗೂ ಜತೆಗೆ ಮೀಸಲು ಇರಿಸಿದಂಥ ಮಾರ್ಕೆಟಿಂಗ್ ಬೆಂಬಲದೊಂದಿಗೆ ಇನ್ನು ಲಭ್ಯವಿರುತ್ತದೆ. ಈ ಸಹಯೋಗದ ಮೂಲಕ ಜಿಯೋಮಾರ್ಟ್ ನ ಲಕ್ಷಾಂತರ ಸಂಖ್ಯೆಯ ಗ್ರಾಹಕರು ಜಿಐ- ಟ್ಯಾಗ್ ಆದಂಥ ಮರದ ಉತ್ಪನ್ನಗಳು, ಬಿದಿರಿನ ವಸ್ತುಗಳು, ಧೋಕ್ರಾ ಕಲಾಕೃತಿಗಳು, ಟೆರಾಕೋಟಾ ವಸ್ತುಗಳು, ಲ್ಯಾಕ್ ಬಳೆಗಳು, ಹತ್ತಿ ಕೈಮಗ್ಗ, ಅಪ್ಲಿಕ್ ವರ್ಕ್, ಝರ್ಡೋಜಿ ವರ್ಕ್, ತಸರ್ ಕೈ ಮಗ್ಗ ಸೀರೆಗಳು, ಪುರುಷರ ಅಂಗಿಗಳು, ಹೊಲಿಗೆ ಹಾಕಿರದಂಥ ಡ್ರೆಸ್ ಮಟಿರೀಯಲ್ ಗಳು, ಕರಕುಶಲ ಬ್ಯಾಗ್, ಬೆಡ್ ಶೀಟ್ ಗಳು, ಪೇಂಟಿಂಗ್ ಗಳು, ಗೃಹಾಲಂಕಾರ ವಸ್ತುಗಳು, ಮತ್ತು ಇನ್ನೂ ಹಲವು ಕೈಯಿಂದ ಸಿದ್ಧಪಡಿಸಲಾದ ಹಲವು ವಿಧದ ಕಲಾ ವಸ್ತುಗಳು ದೊರೆಯುತ್ತವೆ.

ಇದರಿಂದಾಗಿ ಕೇವಲ ಸ್ಥಳೀಯ ಕರಕುಶಲತೆ ಜತೆಗೆ ನಿಕಟ ಬಂಧವನ್ನು ಮಾತ್ರ ಸೃಷ್ಟಿಸುವುದಲ್ಲದೆ “ವೋಕಲ್ ಫಾರ್ ಲೋಕಲ್” ಎಂಬ ಸ್ಥಳೀಯ ವಸ್ತುಗಳಿಗೆ ಉತ್ತೇಜನ ನೀಡಬೇಕು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್ ದೃಷ್ಟಿಕೋನದೊಂದಿಗೆ ಸಾಗುತ್ತದೆ.

ಜಾರ್ಖಂಡ್ ಸ್ಟೇಟ್ ಕೋ-ಆಪರೇಟಿವ್ ಲ್ಯಾಕ್ ಮಾರ್ಕೆಟಿಂಗ್ ಅಂಡ್ ಪ್ರೊಕ್ಯೂರ್‌ಮೆಂಟ್ ಫೆಡರೇಷನ್ ಲಿಮಿಟೆಡ್ (JASCOLAMPF) ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ಸಿಂಗ್ ಅವರು ಮಾತನಾಡಿ, “ಜಾರ್ಖಂಡ್‌ನ ಕರಕುಶಲ ಕಲಾವಿದರು, ಕೈಮಗ್ಗ ನೇಕಾರರು ಮತ್ತು ಕುಶಲಕರ್ಮಿಗಳು ಈ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಾಕಾರಗೊಳಿಸುವ ಅದ್ಭುತ ಕೌಶಲಗಳನ್ನು ಹೊಂದಿದ್ದಾರೆ. ಅವರೊಂದಿಗೆ ಸಹಯೋಗವು ಜಾರ್ಖಂಡ್‌ನ ರೋಮಾಂಚಕ ಕರಕುಶಲತೆ ಮತ್ತು ಕಾಲಾತೀತ ಸಂಪ್ರದಾಯಗಳಲ್ಲಿ ಆಳವಾದ ತೊಡಗುಕೊಳ್ಳುವಿಕೆಗೆ ಭರವಸೆ ನೀಡುತ್ತದೆ. ಆದರೆ ಇದು ಜಾರ್ಖಂಡ್‌ನ ಇತರ ಎಂಎಸ್ ಎಂಇ (ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ತಯಾರಕರಿಗೆ ಸಹ ಪ್ರಯೋಜನಗಳನ್ನು ನೀಡುತ್ತದೆ. ಆದರೂ ಹಂಚಿಕೆಯ ಜ್ಞಾನ ಮತ್ತು ಅವಕಾಶಗಳ ಮೂಲಕ, ಈ ಬಾಂಧವ್ಯದ ಬೆಳವಣಿಗೆ, ನಾವೀನ್ಯತೆ ಮತ್ತು ಜಾರ್ಖಂಡ್‌ನ ಗುರುತನ್ನು ವ್ಯಾಖ್ಯಾನಿಸುವ ಸಂಕೀರ್ಣವಾದ ಕರಕುಶಲತೆಗೆ ಗಹನವಾದ ಮೆಚ್ಚುಗೆಯನ್ನು ನೀಡುತ್ತದೆ,” ಎಂದರು.

ಜಾರ್ಖಂಡ್ ಸಿಲ್ಕ್ ಟೆಕ್ಸ್ ಟೈಲ್ ಮತ್ತು ಕರಕುಶಲ ಅಭಿವೃದ್ಧಿ ನಿಗಮ ಲಿಮಿಟೆಡ್ (JHARCRAFT)ನ ಉಪ ಪ್ರಧಾನ ವ್ಯವಸ್ಥಾಪಕರಾದ ಅಶ್ವಿನಿ ಸಹಾಯ್ ಅವರು ಮಾತನಾಡಿ, “ದೇಶೀಯ ಉತ್ಪನ್ನಗಳ ವಿಶಿಷ್ಟ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ಜಿಯೋಮಾರ್ಟ್ ನಂತಹ ಸ್ಥಳೀಯ ವೇದಿಕೆಯಲ್ಲಿ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ನಮಗೆ, ಈ ಬಿಡುಗಡೆಯು ಜಾರ್ಖಂಡ್‌ನ ವೈವಿಧ್ಯಮಯ ಕಲಾ ಪ್ರಕಾರಗಳೊಂದಿಗೆ ಜಿಯೋಮಾರ್ಟ್ ಮಾರುಕಟ್ಟೆಯನ್ನು ಶ್ರೀಮಂತಗೊಳಿಸುವ ಬದ್ಧತೆಯ ಸಂಕೇತವಾಗಿದೆ. ಆ ಮೂಲಕ ಕುಶಲಕರ್ಮಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕಾಪಾಡುತ್ತದೆ,” ಎಂದರು.

2022ರಲ್ಲಿ ಪ್ರಾರಂಭ ಆದಾಗಿನಿಂದ ಜಿಯೋಮಾರ್ಟ್ ದೇಶವ್ಯಾಪಿ 20 ಸಾವಿರ ಕುಶಲಕರ್ಮಿಗಳು ಮತ್ತು ನೇಕಾರರಿಗೆ ಬಲ ತುಂಬಿದೆ. ಇಂಥ ಸರ್ಕಾರಿ ಸಂಸ್ಥೆಗಳ ಜತೆಗೆ ಸಹಭಾಗಿತ್ವ ವಹಿಸುವ ಮೂಲಕ ಡಿಜಿಟಲ್ ವಿಭಜನೆಯಿಂದ ಸೃಷ್ಟಿ ಆಗಿರುವ ಕಂದಕದ ಮಧ್ಯೆ ಸೇತುವೆ ನಿರ್ಮಿಸುವುದಕ್ಕೆ ಹಾಗೂ ಕುಶಲಕರ್ಮಿ ಸಮುದಾಯದ ಏಳ್ಗೆಗೆ ಸಹಕಾರಿ ಆಗುತ್ತದೆ. ಇನ್ನೂ ಮುಂದುವರಿದು ಕರಕುಶಲ ಮೇಳದಂಥ ಉಪಕ್ರಮಗಳು ಮತ್ತು ಇತರ ಕ್ರಮಗಳು ಸ್ಥಳೀಯ ಕಲೆಯನ್ನು ಪ್ರೋತ್ಸಾಹಿಸುವ ಬದ್ಧತೆಯನ್ನು ಒತ್ತಿ ಹೇಳುತ್ತದೆ.

ಯಾರು ಏನೇ ಟೀಕೆ ಮಾಡಿಕೊಳ್ಳಲಿ, ನಾನಂತೂ ‘ಚನ್ನಪಟ್ಟಣ’ದ ಜನರ ಋಣ ತೀರಿಸುತ್ತೇನೆ: ಡಿ.ಕೆ ಶಿವಕುಮಾರ್

BREAKING: ರಾಜ್ಯ ಸರ್ಕಾರದಿಂದ ‘ಗ್ರಾ.ಪಂ ಕಾರ್ಯದರ್ಶಿ’ಗಳನ್ನು ಜನನ, ಮರಣ ‘ಉಪ ನೋಂದಣಾಧಿಕಾರಿ’ಗಳನ್ನಾಗಿ ನೇಮಿಸಿ ಆದೇಶ

Share. Facebook Twitter LinkedIn WhatsApp Email

Related Posts

VIDEO : ‘ಕೆಲವ್ರು ಹಸುವನ್ನ ಪ್ರಾಣಿ ಎಂದು ಪರಿಗಣಿಸೋಲ್ಲ’ ; ಪ್ರಾಣಿ ಪ್ರಿಯರ ಕುರಿತು ‘ಪ್ರಧಾನಿ ಮೋದಿ’ ಹಾಸ್ಯಮಯ ಹೇಳಿಕೆ ವೈರಲ್

13/09/2025 9:25 PM2 Mins Read

BREAKING: ವೈಷ್ಣೋದೇವಿ ಯಾತ್ರೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತ | Vaishno Devi Yatra

13/09/2025 9:15 PM1 Min Read

Job Alert: RBIನಲ್ಲಿ ಖಾಲಿ ಇರುವ ಗ್ರೇಡ್ B ನೇಮಕಾತಿಗೆ ಅಧಿಸೂಚನೆ, ಈಗಲೇ ಅರ್ಜಿ ಸಲ್ಲಿಸಿ

13/09/2025 8:31 PM3 Mins Read
Recent News

ಸಾಗರ ಜಿಲ್ಲಾ ಹೋರಾಟಕ್ಕೆ ಬೆಂಬಲ ಘೋಷಿಸಿದ ದೂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಫಯಾಸ್ ಅಹಮದ್

13/09/2025 10:08 PM

ಸಿದ್ಧತೆ ಆರಂಭಿಸಿ, ವಿಶ್ವ ಶಕ್ತಿಗಳು ಪಾಕ್’ನಲ್ಲಿ ಒಟ್ಟುಗೂಡಲಿವೆ ; 2027ರ ‘SCO ಶೃಂಗಸಭೆ’ ಆಯೋಜಿಸುವುದಾಗಿ ‘ಷರೀಫ್’ ಘೋಷಣೆ

13/09/2025 9:41 PM

VIDEO : ‘ಕೆಲವ್ರು ಹಸುವನ್ನ ಪ್ರಾಣಿ ಎಂದು ಪರಿಗಣಿಸೋಲ್ಲ’ ; ಪ್ರಾಣಿ ಪ್ರಿಯರ ಕುರಿತು ‘ಪ್ರಧಾನಿ ಮೋದಿ’ ಹಾಸ್ಯಮಯ ಹೇಳಿಕೆ ವೈರಲ್

13/09/2025 9:25 PM

BREAKING: ವೈಷ್ಣೋದೇವಿ ಯಾತ್ರೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತ | Vaishno Devi Yatra

13/09/2025 9:15 PM
State News
KARNATAKA

ಸಾಗರ ಜಿಲ್ಲಾ ಹೋರಾಟಕ್ಕೆ ಬೆಂಬಲ ಘೋಷಿಸಿದ ದೂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಫಯಾಸ್ ಅಹಮದ್

By kannadanewsnow0913/09/2025 10:08 PM KARNATAKA 2 Mins Read

ಶಿವಮೊಗ್ಗ: ಸಾಗರ ತಾಲ್ಲೂಕನ್ನು ಜಿಲ್ಲೆಯಾಗಿ ಮಾಡಬೇಕು ಎನ್ನುವ ಹೋರಾಟ ತೀವ್ರಗೊಂಡಿದೆ. ಈ ಸಾಗರ ಜಿಲ್ಲಾ ಹೋರಾಟಕ್ಕೆ ಸೊರಬ ತಾಲ್ಲೂಕಿನ ದೂಗೂರು…

ರಾಜ್ಯದ ಅರಣ್ಯ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಸಚಿವ ಈಶ್ವರ್ ಖಂಡ್ರೆ ಗುಡ್ ನ್ಯೂಸ್

13/09/2025 8:52 PM

ಸ್ಥಳೀಯರೊಂದಿಗೆ ಚರ್ಚಿಸಿ ಆನೆ ವಿಹಾರಧಾಮ ಸ್ಥಾಪನೆ: ಅರಣ್ಯ ಸಚಿವ ಈಶ್ವರ ಖಂಡ್ರೆ

13/09/2025 8:45 PM

ಧರ್ಮಸ್ಥಳ ಪ್ರಕರಣದ ಹಿಂದೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಕೈವಾಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ

13/09/2025 7:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.