ಬೆಂಗಳೂರು: ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ (ಇಆರ್ಎಸ್ಎಸ್ -112) ಎಂಎಚ್ಎ ಅನ್ನು ಪ್ರಾರಂಭಿಸಲಾಗಿದೆ ಯೋಜನೆಯನ್ನು 31.10.2019 ರಂದು ಉದ್ಘಾಟಿಸಲಾಯಿತು. ವ್ಯವಸ್ಥೆಯು ಕೇಂದ್ರೀಕೃತ ಕರೆ ಸ್ವೀಕಾರವನ್ನು ಒದಗಿಸುತ್ತದೆ ಎಲ್ಲಾ ತುರ್ತು ಸಂದರ್ಭಗಳಲ್ಲಿ ‘112’ ತುರ್ತು ಸಂಪರ್ಕಕ್ಕೆ ಡಯಲ್ ಮಾಡುವ ಮೂಲಕ ಸಂಖ್ಯೆ. ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ (ಇಆರ್ಎಸ್ಎಸ್) -112 ಈ ಕೆಳಗಿನ ಸರ್ಕಾರವಾಗಿದೆ ಪ್ಯಾನ್ ಇಂಡಿಯಾ ಏಕ ತುರ್ತು ಸಹಾಯವಾಣಿಯನ್ನು ಒದಗಿಸುವ ಉದ್ದೇಶದಿಂದ ಭಾರತ ಉಪಕ್ರಮ ಸಂಖ್ಯೆ 112 ಪೊಲೀಸ್ (100), ಅಗ್ನಿಶಾಮಕ (101) ನಂತಹ ಎಲ್ಲಾ ತುರ್ತು ಸೇವೆಗಳನ್ನು ಸಂಯೋಜಿಸುತ್ತದೆ,
ಆಂಬ್ಯುಲೆನ್ಸ್ (102/108) ಮತ್ತು ಇತರರು. ತೊಂದರೆಯಲ್ಲಿರುವ ಜನರು ತಮ್ಮ ಸಮಸ್ಯೆಯನ್ನು ತಿಳಿಸಬಹುದಾಗಿದೆ. ಸಕಾರಣವಿಲ್ಲದೇ ಕರೆ ಮಾಡಿ ಸಣ್ಣ-ಪುಟ್ಟ ವಿಚಾರಕ್ಕೆ ಹೊಯ್ಸಳ ಸಿಬ್ಬಂದಿಯನ್ನು ಕರೆಸಿಕೊಂಡು ಕಮಾಂಡ್ ಸೆಂಟರ್ ಮತ್ತು ಹೊಯ್ಸಳ ಸಿಬ್ಬಂದಿಯ ಕಾಲಹರಣ ಮಾಡುವಾಗ ನಿಜವಾಗಿಯೂ ಸಮಸ್ಯೆಯಲ್ಲಿ ಇರುವವರಿಗೆ ನೆರವು ಸಿಗದೇ ಅವರು ಅಪಾಯದಲ್ಲಿ ಸಿಲುಕುವ ಸಾಧ್ಯತೆ ಇದೇ ಅಂಥ ತಿಳಿಸಿದೆ.
112 ಸಹಾಯವಾಣಿಗೆ ಅನಗತ್ಯ ಕರೆಗಳು ಬರುತ್ತಿರುವುದು ಹೆಚ್ಚಾಗಿದೆ. ಸಕಾರಣವಿಲ್ಲದೇ ಕರೆ ಮಾಡಿ ಸಣ್ಣ-ಪುಟ್ಟ ವಿಚಾರಕ್ಕೆ ಹೊಯ್ಸಳ ಸಿಬ್ಬಂದಿಯನ್ನು ಕರೆಸಿಕೊಂಡು ಕಮಾಂಡ್ ಸೆಂಟರ್ ಮತ್ತು ಹೊಯ್ಸಳ ಸಿಬ್ಬಂದಿಯ ಕಾಲಹರಣ ಮಾಡುವಾಗ ನಿಜವಾಗಿಯೂ ಸಮಸ್ಯೆಯಲ್ಲಿ ಇರುವವರಿಗೆ ನೆರವು ಸಿಗದೇ ಅವರು ಅಪಾಯದಲ್ಲಿ ಸಿಲುಕುವ ಸಾಧ್ಯತೆ ಇದೆ.
ನೀವು ಟೈಂಪಾಸ್ ಮಾಡುವ ಸಮಯದಲ್ಲಿ ಒಂದು ಜೀವ ಹೋಗಬಹುದಾದ ಸಂಭವ ಇರುತ್ತದೆ. ಯಾರೋ ಆತ್ಮಹತ್ಯೆಗೆ ಯತ್ನಿಸಿರಬಹುದು, ಅಮಾಯಕರ ಮೇಲೆ ರೌಡಿಗಳು ಹಲ್ಲೆಗೆ ಮುಂದಾಗಿರಬಹುದು. ಸಕಾಲದಲ್ಲಿ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಹೋದರೆ ಅವರ ಜೀವ ಉಳಿಸಬಹುದಾಗಿದೆ. ಹೀಗಾಗಿ ಹುಡುಗಾಟಿಕೆಗೆ 112ಕ್ಕೆ ಕರೆ ಮಾಡುವುದನ್ನು ನಿಲ್ಲಿಸಿ. ಇನ್ನು ಮುಂದೆ ಈ ರೀತಿಯ ಅನಗತ್ಯ ಕರೆಗಳು ಬಂದಲ್ಲಿ ಅಂತಹ ನಂಬರ್ ಅನ್ನು ತಾತ್ಕಾಲಿಕವಾಗಿ 24 ಗಂಟೆ ಬ್ಲಾಕ್ ಮಾಡಲಾಗುತ್ತದೆ. ಪದೇ ಪದೇ ಫ್ರಾಡ್ ಕಾಲ್ ಮಾಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.