Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇದು ಜಗತ್ತಿನ ಅತ್ಯಂತ ದುಬಾರಿ ‘ಅಕ್ಕಿ’ ; ಒಂದು ಕೆ.ಜಿಗೆ 12,577 ರೂಪಾಯಿ!

09/11/2025 5:21 PM

ಅರಸೀಕೆರೆಯಲ್ಲಿ ರೈಲ್ವೆ ಕಾಮಗಾರಿ ಹಿನ್ನಲೆ: ಹುಬ್ಬಳ್ಳಿ ಎಕ್ಸ್ ಪ್ರೆಸ್ ಸೇರಿ 3 ರೈಲುಗಳ ಸಂಚಾರ ರದ್ದು

09/11/2025 5:05 PM

BIG NEWS: ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳಿಗೆ ‘ಬಾಲಾಪರಾಧಿ’ ಎನ್ನುವಂತಿಲ್ಲ: ಮಕ್ಕಳ ರಕ್ಷಣಾ ನಿರ್ದೇಶನಾಲಯ

09/11/2025 4:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಎಡಿಜಿಪಿ ಕೆಲ ಆದೇಶಗಳು ಜಿಲ್ಲೆಯ ಕೆಲ ಆರಕ್ಷಕರಿಗೆ ಹಬ್ಬವೊ ಹಬ್ಬ.! ಡಿಡಿ ಪ್ರಕರಣದಲ್ಲಿ ದಂಡಕ್ಕಿಂತ ಕಿಸೆ ಬಾರವೆ ಅದಿಕ!
KARNATAKA

ಎಡಿಜಿಪಿ ಕೆಲ ಆದೇಶಗಳು ಜಿಲ್ಲೆಯ ಕೆಲ ಆರಕ್ಷಕರಿಗೆ ಹಬ್ಬವೊ ಹಬ್ಬ.! ಡಿಡಿ ಪ್ರಕರಣದಲ್ಲಿ ದಂಡಕ್ಕಿಂತ ಕಿಸೆ ಬಾರವೆ ಅದಿಕ!

By kannadanewsnow0724/06/2024 5:47 PM

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಅಲೋಕ್ ಕುಮಾರ್ ಅವರ ಕಟ್ಟು ನಿಟ್ಟಿನ ಆದೇಶಗಳು ಕೆಲ ಜಿಲ್ಲೆಯ ಕೆಲವರಿಗೆ ಹಬ್ಬವೊ ಹಬ್ಬವಾದರೆ ಕೆಲ ಆರಕ್ಷಕರಿಗೆ ಕಿರಿಕಿರಿ ಕೂಡ ಆಗಿದೆ ಎಂದರೆ ತಪ್ಪಾಗಲಾರದು.

ರಾಜ್ಯಾದಾದ್ಯಂತ ಅಪರಾದ ಪ್ರಕರಣ ತಗ್ಗಿಸಲು ಸಂಚಾರ ,ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹಲವಾರು ಕ್ರಮಗಳನ್ನು ಕೈಗೊಂಡರೂ ಕೂಡ ಕೆಲ ಭ್ರಷ್ಟ ಪೊಲೀಸರ ಕಾಯಕದಿಂದ ಮತ್ತಷ್ಟು ಪ್ರಕರಣ ಹೆಚ್ಚಾಗುತ್ತಿದಿಯೆ ಹೊರತು ಕಡಿಮೆಯಾಗುತ್ತಿಲ್ಲ, ಕಡಿಮೆಯಾಗುವುದಿಲ್ಲ ಎಂಬುದಕ್ಕೆ ಸಾಕ್ಷ್ಯದಾರಗಳು ಗೋಚರವಾಗುತ್ತಿದೆ.

ಗಡಿಜಿಲ್ಲೆ ಚಾಮರಾಜನಗರದಲ್ಲಿ ಕುಡಿದು ವಾಹನ ಚಾಲನೆ ಮಾಡುವ ವಾಹನ ಸವಾರರನ್ನ ಹದ್ದಿನಂತೆ ಕಾದು ಮೇಲಾದಿಕಾರಿಗಳ ಆದೇಶದ ಮೇರೆಗೆ ಠಾಣೆಗಿಷ್ಟು ವಹಿಸಿದ ಪ್ರಕರಣ ಬಿಟ್ರೆ ಉಳಿದವು ಸಿಕ್ಕಿಕೊಂಡ್ರೆ ಸಿಕ್ಕಿದಷ್ಟು ಬಾಚಿಕೊಳ್ಳುವ ಪ್ರಕ್ರಿಯೆ ರಾಜಾರೋಷವಾಗಿ ನಡೆಯಲಿದೆ.

ಡಿಡಿ ಪ್ರಕರಣ ಹೆಚ್ಚಿಸಬೇಕು ಅಪಘಾರ ಸಾವಿನ ಸಂಖ್ಯೆ ತಗ್ಗಿಸಲು ಸ್ಥಳೀಯ ಅಯಾ ಜಿಲ್ಲೆಯ ವರೀಷ್ಟಾದಿಕಾರಿಗಳೊ, ಹೆಚ್ಚುವರಿ ಅದೀಕ್ಷಕರೂ ಗಂಟೆಗೊಂದು ದಿನಕ್ಕೊಂದು ಆದೇಶ ನೀಡಿ ಬಿಡ್ತಾರೆ..ಪ್ರಾಮಾಣಿಕವಾಗಿ ದಂಡ ಹಾಕುವವರರಿಗೆ ಪೇದೆಗಳಿಗೆ ಇಂತ ಆದೇಶಗಳು ಕಿರಿಕಿರಿಯಾದರೂ ಹಣ ದೋಚುವ ಆರಕ್ಷಕರಿಗೆ ಹಬ್ಬವೊ ಹಬ್ಬ. ಇಂತಹ ಪ್ರಕರಣ ಸಿಕ್ಕಾಗ ರಾತ್ರಿ ಠಾಣೆಗೆ ಕರೆದೊಯ್ತಾರೆ, ಬೆಳಿಗ್ಗೆ ಆದಾಗ ಅಷ್ಟೊ ಇಷ್ಟೊ ಕೊಟ್ಟು ವಾಹನ ಸಮೇತ ರಾಜಾರೋಷವಾಗಿ ಹೊರಬರ್ತಾರೆ..ಠಾಣೆಯಲ್ಲಿ ಸಿ ಸಿ ಕ್ಯಾಮರಾ ಇದ್ದು ಇದೆಲ್ಲ ರೆಕಾರ್ಡ್ ಆಗಲಿದೆ ಎಂಬ ಭಯವೇ ಕೆಲವು ಠಾಣೆಗಳಿಗೆ ಇರೋದು ಇಲ್ಲ…ಕಾರಣ ಇದರ ಮರ್ಮ ಕೆಲ ಮೇಲಾದಿಕಾರಿಗಳಿಗೂ ತಿಳಿದಿರುವುದು ಗೋಚರವಾಗಲಿದೆ.

ಈ ಸಂಬಂದ ಮಾಹಿತಿ ಹಕ್ಕಿನ ಅರ್ಜಿದಾರ ಅರ್ಜಿ ಹಾಕಿದ್ರೆ ಸೂಕ್ತ ನಿಯಮಗಳ ತೋರಿಸಿ ಹಿಂಬರಹ ನೀಡಿ ತಾವು ಸಾಚಾ ಸಂದು ಸಮರ್ಥಿಸಿಕೊಂಡಾಗ ಇಂತ ಅಸಲಿ ಸತ್ಯ ಹೊರಬರದೆ ಇರಲಾರದು. ಇಂತಹ ಪ್ರಕರಣ ವೈರಲ್ ಆದಾಗ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾದ ಹಿರಿಯ ಅದಿಕಾರಿಗಳು ನಿದ್ರಾವಸ್ಥೆಯಲ್ಲಿ ಜಾಣಕುರುಡು ಪ್ರದರ್ಶನ ಮಾಡಲಿದ್ದಾರೆ.

ವೈರಲ್ ವಿಡಿಯೊ ದರ್ಶನ, ಅದಿಕಾರಿಗಳ ನಿರುತ್ತರ; ಇತ್ತೀಚೆಗೆ ಯಳಂದೂರು ಮಾರ್ಗದ ಮೂಲಕ ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋಗುವ ಶಿರಸ್ತ್ರಾಣ ರಹಿತ ಅದೇಷ್ಟೊ ಚಾಲಕರು ದಂಡ ಕಟ್ಟುವ ಬದಲು ೧೦೦-೨೦೦ ಹೀಗೆ ಕೆಲವರಿಗೆ ಕಾಣಿಕೆ ಕಟ್ಟಿ ಹೊರನಡೆದಿದ್ದಾರೆ.. ದೇವಸ್ಥಾನದಿಂದ ಯಳಂದೂರಿಗೆ ಹೋಗುವ ವಾಹನ ಸವಾರರು ದಂಡ ಹಾಕುವ ಪೊಲೀಸರಿಗೆ ಅಂಜಿ ಅರಣ ಮಾರ್ಗ ಮದ್ಯೆದಲ್ಲಿ ನಿಲ್ಲಿಸಿ ತಮ್ಮ ಸಮಯ ಉಳಿಸಿಕೊಂಡಿದ್ದಾರೆ.ಸಮಯ ಕೆಟ್ಟದ್ದಿದ್ದರೆ ಕಾಡು ಪ್ರಾಣಿಗಳು ದಾಳಿ ನಡೆಸಿದರೆ ಇವರ ಪ್ರಾಣಕ್ಕೆ ಹೊಣೆ ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಶಿರಸ್ತ್ರಾಣ ರಹಿತ ವಾಹನ ಚಾಲಕರ ಸಮಸ್ಯೆ ಒಂದೆಢೆಯಾದರೆ ಕುಡಿದು ವಾಹನ ಚಾಲನೆ ಮಾಡುವವರ ಸಂಖ್ಯೆಯೂ ಹೆಚ್ಚಾದರೆ ದಂಡ ಹಾಕುವ ಆರಕ್ಷಕರಿಗೆ ಹಬ್ಬವಾಗಿ ಪರಿಣಮಿಸಲಿದೆ. ವಿಡಿಯೊ ಒಂದರಲ್ಲಿ ಇಬ್ಬರು ಆಸಾಮಿಗಳು ಕುಡಿದು ವಾಹನ ಚಾಲನೆ ಮಾಡುವಾಗ ಸಿಕ್ಕಿ ಬಿದ್ದು ಅವರು ೧೦೦-೨೦೦-೪೦೦ ಹೀಗೆ ೫೦೦ ವರೆಗೆ ಬಂದರೂ ಅಲ್ಲಿ ದಂಡ ಹಾಕೊ ಪೊಲೀಸರು ಜಪ್ತಿ ಮಾಡಿ ಪೇದೆ ಮೂಲಕ ಠಾಣೆಗೆ ಕಳಿಸಿದ್ದಾರೆ. ಇಲ್ಲಿ ದಕ್ಷತೆಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿದ ಭಕ್ತರಿಗೆ ಶಾಕ್ ನೀಡಿದ್ದಾರೆ.

ಜಪ್ತಿ ಮಾಡಿದ ವಾಹನ ಬಗ್ಗೆ , ಸಂಬಂದಿಸಿದ ಠಾಣೆಯ ಇನ್ಸ್ ಪೆಕ್ಟರ್ ಸಂಪರ್ಕಿಸಲಾಗಿ ಆ ಸ್ಥಳದಲ್ಲಿ ಯಾವ್ದೆ ಕುಡಿದು ವಾಹನ ಚಾಲನೆ ಸಂಬಂದ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ..ಆಗಿದ್ದರೆ ಜಪ್ತಿ ಮಾಡಿದ ವಾಹನ ಎಲ್ಲಿ ಹೊಯ್ತ್..? ಕುಡಿದು ವಾಹನ ಚಾಲನೆ ಪ್ರಕರಣ ದಾಖಲಿಸದೆ ಆಮೀಷಕ್ಕೆ ಈ ಪೊಲೀಸರು ಬಲಿಯಾದರೆ ಎಂಬುದು ಬಿಳಿಗಿರಿ ರಂಗಪ್ಪನೆ ಹೇಳಬೇಕಾಗಿದೆ. ಮತ್ತೊಂದೆಡೆ ಸ್ಟ್ಯಾಂಪ್ ಹಣ ಸಂಗ್ರಹ: ದಂಡ ಪಾವತಿ ಮಾಡಿಕೊಳ್ಳುವ ಬದಲು ಪೊಲೀಸರು ಇಂತ ವಾಹನ ನಿಲ್ಲಿಸಿ ಸ್ಟ್ಯಾಂಪ್ ಮಾರಾಟ ವ್ಯಾಪಾರ ಆರಂಬಿಸಿದ್ದಾರೆ..ಕೆಲ ಠಾಣೆಗಳಲ್ಲಿ ಒಂದೆ ಚಾಲಕನಿಗೆ ಎರಡು ಸಾವಿರದ ಎರಡು ಸ್ಟ್ಯಾಂಪ್ ಮಾರಾಟ ಮಾಡಿ ಕುಡುಕ ಚಾಲಕರನ್ನ ಹಾಗೆ ಬಿಡಲಾಗಿದೆ‌.

ಎಸ್ಪಿ  ಈ ಪ್ರಕರಣ ಬಗ್ಗೆ ಸ್ಪಷ್ಟಿಕರಣ ಕೇಳಲಾಗಿ ಉತ್ರರ ನೀಡದೆ ಮೌನವಹಿಸಿದ್ದಾರೆ..ಮಿಗಿಲಾಗಿ ದಂಡ ಹಾಕುವ ಯಂತ್ರ ಸಾಮಾನ್ಯ ಪೇದೆ ಹಿಡಿದು ದಂಡ ಹಾಕಬಹುದೆ ಎಂಬ ಪ್ರಶ್ನೆಗೂ ಉತ್ತರ ಲಭ್ಯವಾಗಿಲ್ಲ.. ಇದೆಲ್ಲವನ್ನ ನೋಡಿದರೆ ಎಸ್ಐ ಪಿಎಸ್ಐ ಗಳಿಗೆ ದಂಡ ಹಾಕುವ ಯಂತ್ರದ ಬಗ್ಗೆ ತರಬೇತಿ ನೀಡದೆ ದಂಡ ಹಾಕಿಸುತ್ತಿರುವ ವಿಚಾರ ಗೋಚರವಾಗಿದೆ.

ಒಟ್ಟಿನಲ್ಲಿ ಪ್ರಾಣಹಾನಿ ಅಪಘಾತ ರಹಿತ ಪ್ರಕರಣ ತಗ್ಗಿಸಲು ಹೊರಟ ಕೆಲ ಅದಿಕಾರಿಗಳಿಗೆ ಇಂತ ಅದಿಕಾರಿಗಳು ಪೇದೆಗಳು ಟಾಂಗ್ ನೀಡಿ ಜನರ ಜೀವಗಳ ಜೊತೆ ಚೆಲ್ಲಾಟವಾಡುವಂತೆ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ADGP's orders are a feast for some policemen in the district. In the DD case the penalty is more than the penalty! ಎಡಿಜಿಪಿ ಕೆಲ ಆದೇಶಗಳು ಜಿಲ್ಲೆಯ ಕೆಲ ಆರಕ್ಷಕರಿಗೆ ಹಬ್ಬವೊ ಹಬ್ಬ.! ಡಿಡಿ ಪ್ರಕರಣದಲ್ಲಿ ದಂಡಕ್ಕಿಂತ ಕಿಸೆ ಬಾರವೆ ಅದಿಕ!
Share. Facebook Twitter LinkedIn WhatsApp Email

Related Posts

ಅರಸೀಕೆರೆಯಲ್ಲಿ ರೈಲ್ವೆ ಕಾಮಗಾರಿ ಹಿನ್ನಲೆ: ಹುಬ್ಬಳ್ಳಿ ಎಕ್ಸ್ ಪ್ರೆಸ್ ಸೇರಿ 3 ರೈಲುಗಳ ಸಂಚಾರ ರದ್ದು

09/11/2025 5:05 PM1 Min Read

BIG NEWS: ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳಿಗೆ ‘ಬಾಲಾಪರಾಧಿ’ ಎನ್ನುವಂತಿಲ್ಲ: ಮಕ್ಕಳ ರಕ್ಷಣಾ ನಿರ್ದೇಶನಾಲಯ

09/11/2025 4:58 PM1 Min Read

870 ಕೋಟಿ ವೆಚ್ಚದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

09/11/2025 4:40 PM2 Mins Read
Recent News

ಇದು ಜಗತ್ತಿನ ಅತ್ಯಂತ ದುಬಾರಿ ‘ಅಕ್ಕಿ’ ; ಒಂದು ಕೆ.ಜಿಗೆ 12,577 ರೂಪಾಯಿ!

09/11/2025 5:21 PM

ಅರಸೀಕೆರೆಯಲ್ಲಿ ರೈಲ್ವೆ ಕಾಮಗಾರಿ ಹಿನ್ನಲೆ: ಹುಬ್ಬಳ್ಳಿ ಎಕ್ಸ್ ಪ್ರೆಸ್ ಸೇರಿ 3 ರೈಲುಗಳ ಸಂಚಾರ ರದ್ದು

09/11/2025 5:05 PM

BIG NEWS: ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳಿಗೆ ‘ಬಾಲಾಪರಾಧಿ’ ಎನ್ನುವಂತಿಲ್ಲ: ಮಕ್ಕಳ ರಕ್ಷಣಾ ನಿರ್ದೇಶನಾಲಯ

09/11/2025 4:58 PM

Good News ; ಈಗ ಬ್ಯಾಂಕ್ ಖಾತೆ ಇಲ್ಲದೆಯೂ ‘UPI’ ಕಾರ್ಯ ನಿರ್ವಹಿಸುತ್ತೆ ; ಮಕ್ಕಳು ಸಹ ಆನ್ಲೈನ್ ಪಾವತಿ ಮಾಡ್ಬೋದು!

09/11/2025 4:45 PM
State News
KARNATAKA

ಅರಸೀಕೆರೆಯಲ್ಲಿ ರೈಲ್ವೆ ಕಾಮಗಾರಿ ಹಿನ್ನಲೆ: ಹುಬ್ಬಳ್ಳಿ ಎಕ್ಸ್ ಪ್ರೆಸ್ ಸೇರಿ 3 ರೈಲುಗಳ ಸಂಚಾರ ರದ್ದು

By kannadanewsnow0909/11/2025 5:05 PM KARNATAKA 1 Min Read

ಮೈಸೂರು: ಅರಸೀಕೆರೆ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ನಡೆಯಲಿರುವ ಪ್ಲಾಟ್‌ಫಾರ್ಮ್ ಶೆಲ್ಟರ್ ಕಾಮಗಾರಿಯ ಸಲುವಾಗಿ, ಕೆಲವು ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ…

BIG NEWS: ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳಿಗೆ ‘ಬಾಲಾಪರಾಧಿ’ ಎನ್ನುವಂತಿಲ್ಲ: ಮಕ್ಕಳ ರಕ್ಷಣಾ ನಿರ್ದೇಶನಾಲಯ

09/11/2025 4:58 PM

870 ಕೋಟಿ ವೆಚ್ಚದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

09/11/2025 4:40 PM

ವೈವಾಹಿಕ ಜೀವನಕ್ಕೆ ಕಾಲಿಡಲು ‘ನಟ ಉಗ್ರಂ ಮಂಜು’ ಸಜ್ಜು: ಸಂಧ್ಯಾ ಜೊತೆ ನೆರವೇರಿದ ‘ನಿಶ್ಚಿತಾರ್ಥ’

09/11/2025 4:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.