ಬೆಂಗಳೂರು: ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆಗೆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ., ಈ ನಡುವೆ ನಟ ದರ್ಶನ್ ಗೆಳತಿ ಪವಿತ್ರಗೌಡ ಅವರಿಗೆ ಜಗದೀಶ್ ಅವರು ಎರಡು ಕೋಟಿ ಹಣವನ್ನು ನೀಡಿದ್ದಾರೆ ಎನ್ನಲಾಗಿದೆ.
ಪವಿತ್ರಾಗೌಡ ಮನೆ ಖರೀದಿಗೆ ಎರಡು ಕೋಟಿ ರೂಪಾಯಿಗಳನ್ನು ಜಗದೀಶ್ ಸೌಂದರ್ಯ ಹಣ ಕೊಟ್ಟಿರುವ ಮಾಹಿತಿ ಬಹಿರಂಗವಾಗಿದೆ. ಆದರೆ ಸೌಂದರ್ಯ ಜಗದೀಶ್ ಕುಟುಂಬದವರು ಈವರೆಗೆ ಯಾವುದೇ ದೂರು ನೀಡಿಲ್ಲ ಎಂದು ಹೇಳಲಾಗಿದೆ.
ಸೌಂದರ್ಯ ಜಗದೀಶ್ ಅವರು ಹಣ ಸಹಾಯ ಮಾಡಿದ್ರಾ ಅಥವಾ ಸಾಲ ಕೊಟ್ಟಿದ್ದಾರೋ ಎಂಬುದು ಇದುವರೆಗೆ ತಿಳಿದುಬಂದಿಲ್ಲ. ೨೦೧೭ ನವೆಂಬರ್ ನಲ್ಲಿ 1 ಕೋಟಿ ರೂ. ೨೦೧೮ ಜನವರಿಯಲ್ಲಿ 1 ಕೋಟಿ ರೂ.ಗಳನ್ನು ಪವಿತ್ರಾಗೌಡಗೆ ಕೊಟ್ಟಿದ್ದರು ಎನ್ನಲಾಗಿದೆ.