ಮಂಗಳೂರು: ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ (Dharmasthala) ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.
ಇದೇ ವೇಳೆ ಅವರು ಮಾತನಾಡಿ, ಬಹಳ ವರ್ಷಗಳ ನಂತರ ಮಂಜುನಾಥಸ್ವಾಮಿ ದರ್ಶನ ಪಡೆದಿದ್ದೇನೆ. ಹೆಗ್ಗಡೆ ಅವರ ಆಶೀರ್ವಾದ ಕೂಡ ದೊರೆತಿದೆ. ನಮ್ಮ ಭಾಗದಲ್ಲಿ ಒಂದು ರೀತಿಯ ಬರಗಾಲ ಇದೆ. ಸಕಾಲದಲ್ಲಿ ಮಳೆ ಬೆಳೆ ಆಗಲಿ ಅಂತಾ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಅಂತ ಹೇಳಿದರು.