ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಸೇರಿ ಇತರೆ ನಾಲ್ವರು ಆರೋಪಿಗಳ ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಕೋರ್ಟ್ ಅನುಮತಿ ಪಡೆದು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದು, ದರ್ಶನ್ ಸೇರಿ ನಾಲ್ವರು ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಮೊಬೈಲ್ ನಲ್ಲಿ ಮಾಹಿತಿ ಸಂಗ್ರಹಿಸಲು ಕೋರ್ಟ್ ಅನುಮತಿ ನೀಡಿದ್ದು, ದರ್ಶನ್, ಧನಂಜಯ್, ನವೀನ್, ಪ್ರದೋಶ್ ಅವರ ಮೊಬೈಲ್ ಫೋನ್ ಗಳನ್ನು ಈಗಾಗಲೇ ಪೊಲೀಸರು ಜಪ್ತಿ ಮಾಡಿದ್ದಾರೆ.
ನಟ ದರ್ಶನ್ ಸೇರಿ ಎಲ್ಲರ ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಿರುವ ಪೊಲೀಸರು ಪಂಚರ ಸಮಕ್ಷದಲ್ಲಿ ಮೊಬೈಲ್ ಆನ್ ಸೀಲ್ ಮಾಡಿದ್ದಾರೆ. ಫೋನ್ ಕರೆ, ಚಾಟಿಂಗ್ ಸೇರಿ ಮಹತ್ವದ ವಿಚಾರಗಳ ಪರಿಶೀಲನೆ ನಡೆಸಲಿದ್ದಾರೆ.