ಬೆಂಗಳೂರು: ರೇಣುಕಸ್ವಾಮಿ ಕೊಲೆ ಆರೋಪದ ಮೇಲೆ ಸದ್ಯ ನ್ಯಾಯಾಲಯವು ದರ್ಶನ್ ರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ನ್ಯಾಯಾಧೀಶರ ಮುಂದೆ ದರ್ಶನ್ ಅಂಡ್ ಗ್ಯಾಂಗ್ ಅನ್ನು ಹಾಜರು ಪಡಿಸಿದ ಬಳಿಕ ನ್ಯಾಯಾಧೀಶರ ಆದೇಶದಂತೆ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಹಲವು ಅಭಿಮಾನಿಗಳು ವ್ಯಾನ್ ಬಳಿ ದರ್ಶನ್ ಪರ ಘೋಷಣೆ ಕೂಗುತ್ತಿದ್ದ ಸನ್ನಿವೇಶ ಕಂಡು ಬಂತು.
ಈ ನಡುವೆ ದರ್ಶನ್ ಇದ್ದ ವ್ಯಾನ್ ಬಳಿ ಅಭಿಮಾನಿಯೊಬ್ಬ . ಈ ಥರದ್ದು ಬೇಜಾನ್ ಆಗಿದೆ ಸರ್. ತಲೆ ಕೆಡಿಸಿಕೊಳ್ಳಬೇಡಿ ಸರ್.. ಅಭಿಮಾನಿಗಳು ಹಿಂದೆ ಬರುತ್ತಾರೆ.. ನೀವು ಆರಾಮಾಗಿ ಇರಿ ಎಂದು ಹೇಳಿದ ಸನ್ನಿವೇಶ ಕಂಡು ಬಂದಿತ್ತು. ತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಇತರ ಮೂವರನ್ನು ಬೆಂಗಳೂರು ನಗರದ 24 ನೇ ಎಸಿಎಂಎಂ ನ್ಯಾಯಾಲಯ 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಸದ್ಯ ಈ ಎಲ್ಲರನ್ನು ಜೈಲಿಗೆ ಕಳುಹಿಸಲಾಗಿದೆ.