ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳಿಗೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಜುಲೈ.4ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಇಂತಹ ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ವಿಚಾರಾಣಾಧೀನ ಕೈದಿ ನಂಬರ್ 6106 ನೀಡಿರೋದಾಗಿ ತಿಳಿದು ಬಂದಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವಂತ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಅವರಿಗೆ ಇಂದು ಜುಲೈ.4ರವರೆಗೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಹೀಗಾಗಿ ಪವಿತ್ರಾ ಗೌಡ ಬಳಿಕ ನಟ ದರ್ಶನ್ ಸೇರಿದಂತೆ ನಾಲ್ವರು ಜೈಲುಪಾಲಾಗಿದ್ದಾರೆ.
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ಸೇರಿದಂತೆ ನಟ ದರ್ಶನ್ ಅವರಿಗೆ ವಿಚಾರಾಣಾಧೀನ ಕೈದಿ ನಂಬರ್.6106 ನೀಡಿದ್ದಾರೆ ಎನ್ನಲಾಗಿದೆ. ಜುಲೈ.4ರವರೆಗೆ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಜೈಲೂಟ ಮಾಡೋದು ಫಿಕ್ಸ್ ಆಗಿದೆ.
‘ದ್ವಿತೀಯ PU ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ಪರೀಕ್ಷೆ-3ಕ್ಕೆ ಉಚಿತವಾಗಿ ‘BMTC’ ಬಸ್’ನಲ್ಲಿ ತೆರಳಲು ಅವಕಾಶ
Good News: ಇನ್ಮುಂದೆ ಈ ಕೋರ್ಸ್ ಮುಗಿಸಿದವರಿಗೆ ‘ರಾಜ್ಯ ಸರ್ಕಾರ’ದಿಂದಲೇ ವಿದೇಶದಲ್ಲಿ ‘ಉದ್ಯೋಗ ಭಾಗ್ಯ’