ಕೋಲಾರ: ಜಿಲ್ಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಈ ಗಲಾಟೆಯಲ್ಲಿ ಓರ್ವ ಸ್ವಾಮೀಜಿಯನ್ನೇ ಭೀಕರವಾಗಿ ಹತ್ಯೆ ಮಾಡಿರೋದಾಗಿ ತಿಳಿದು ಬಂದಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸಂತಳ್ಳಿ ಬಳಿಯಲ್ಲಿರುವಂತ ಆನಂದ ಮಾರ್ಗ ಆಶ್ರಮದಲ್ಲಿ ಆಚಾರ್ಯ ಧರ್ಮ ಪ್ರಣಾನಂದ ಹಾಗೂ ಆಚಾರ್ಯ ಚಿನ್ಮಯಾನಂದ ಗುಂಪಿನ ನಡುವೆ ಮಾರಾಮಾರಿ ನಡೆದಿದೆ.
ಈ ಗಲಾಟೆಯಲ್ಲಿ ಆನಂದ ಮಾರ್ಗ ಆಶ್ರಮದ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿಯನ್ನು, ಆಚಾರ್ಯ ಧರ್ಮ ಪ್ರಣಾನಂದ ಅವರ ಗುಂಪಿನ ಕಡೆಯವರು ಕೊಲೆ ಮಾಡಿರೋದಾಗಿ ತಿಳಿದು ಬಂದಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಮಾಲೂರು ಠಾಣೆಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
‘ಕಮಲಾ ಹಂಪನಾ’ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ‘ಸಿಎಂ ಸಿದ್ದರಾಮಯ್ಯ’