ಬೆಂಗಳೂರು : ಡಿಬಾಸ್ ʻIEDʼ ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ನಟ ದರ್ಶನ್ ವಿರುದ್ಧ ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ದರ್ಶನ ಕರ್ಮ ಕಾಂಡ Part 4. ಸೈಕೋ ಮುಲಾಮ್ ರಾಜಾ. ರೇಣುಕಾ ಸ್ವಾಮಿಗೆ ನ್ಯಾಯ ಸಿಗಲಿ. ಡಿ ಬಾಸ್ IED ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳತಾದ್ದಾನೆ. (Intermittent Explosive Disorder). ಕನ್ನಡದಲ್ಲಿ ಈ ಮಾನಸಿಕ ಕಾಯಿಲೆ ಮರುಕಳಿಸುವ ಸ್ಫೋಟಕ ಅಸ್ವಸ್ಥತೆ ಅಂತ ಕರೀತಾರೆ. ನಿಂದನೀಯ, ಆಕ್ರಮಣಕಾರಿ ಮತ್ತು ಹಿಂಸ್ಮಾಕರಾದ ಪ್ರವೃತಿ ಈ ಕಾಹಿಲೆಯ ಲಕ್ಷಣ ಇನ್ನು ಈ ಸ್ಥಿತಿನಲ್ಲಿ ಇವನು ಕುಡಿದು ಮಾದಕ ಸೇವನೆ ಮಾಡಿದಾಗ ಇವನ ಕೈಗೆ ಸಿಕಾಡ್ಕೊಂಡ್ಬಿಟ್ರೆ ಶತ ಕೋಟಿ ದೇವರುಗಳು ಬಡಪಾಯಿಗಳನ್ನ ಉಳಿಸಕ್ಕೆ ಆಗಲ್ಲ ಎಂದು ಹೇಳಿದ್ದಾರೆ.
ಫ್ರೆಂಡ್ಸ್ ನೀವು ಗಮನಿಸಿ ಈ ಸೈಕೋ ವ್ಯಕ್ತಿ ಯ ಎಲ್ಲಾ ಟಿವಿ ಸಂದರ್ಶನಗಳು ಮತ್ತು ಸಾರ್ವಜನಿಕ ಜಾಲತಾಣ ದಲ್ಲಿ ಲಭ್ಯವಿರುವ ಫೋಟೋಗಳನ್ನು ಸರಿಯಾಗಿ ಗಮನಿಸಿ ,ಇವನ ಬಲಗೈ ನಲ್ಲಿ ಬ್ಯಾಂಡೇಜ್ ಇರತ್ತೆ ,ಯಾಕೆ ಅಂದ್ರೆ ಇವನ ಹಿಂದಿನ ರಾತ್ರಿ ಯಾರೋ ಬಡಪಾಯಿಗೆ ಇವನ ವಿಶ್ವ ರೂಪ ನೋಡಿಸಿರ್ತಾನೆ. ಇವನ ಈ ವಿಚಿತ್ರ ನಡವಳಿಕೆ, ರೌಡಿಸಿಮ್ ಕೃತ್ಯಗಳು,ಅನೇಕರ ಮೇಲೆ ಹಲ್ಲೆಗಳು ಎಷ್ಟೋ ಜನರು ನೋಡಿದ್ದರೆ ,ಈ ಹಿಂಸಾ ಕೃತ್ಯವನ್ನು ಹಲವಾರು ಬಾರಿ ಪೊಲೀಸ್ ದೂರಿನ ಮೂಲಕ ದಾಖಲಿಸಲಾಗಿದೆ ಮತ್ತು ಈ ರಾಕ್ಷಸನಿಂದ ಹಲ್ಲೆ ಮತ್ತು ನಿಂದನೆಗೊಳಗಾದ ಜನರ ಪಟ್ಟಿ ದಿನ ದಿನಕ್ಕೆ ಹನುಮಂತನ ಬಾಲ ತರ ಬೆಳಿತಾಯಿದೆ ಎಂದಿದ್ದಾರೆ.
ಇನೊಂದು ಈ ಸೈಕೋದ ವಿಚಿತ್ರ ನಡವಳಿಕೆ ಗೊತ್ತ? ಳ್ತಿನಿ ಕೇಳಿ ಮಾಡೋದಲ್ಲ ಮಾಡ್ಬಿಟ್ಟು ಇವನು ಮರುದಿನ ಬೆಳಿಗ್ಗೆ ತನ್ನ ಕೊಳಕು ವರ್ತನೆಗೆ ಪಶ್ಚಾತ್ತಾಪ ಮಾಡ್ಕೊಂಡುಅವನೇ ಖುದ್ದಾಗಿ ಹಲ್ಲೆ ಮಾಡಿದ ಬಲಿಪಶುವಿಗೆ ಮುಲಾಮು ಹಚ್ತಾನಂತೆ ಈ ಮುಲಾಮು ರಾಜಾ ,ಮತ್ತೆ ರಾತ್ರಿಯಲ್ಲಿ ಅದೇ ಕ್ರೂರ ದಾಳಿಯನ್ನು ಪುನರಾವರ್ತಿಸುತ್ತಾನೆ ಎಂದು ಬರೆದುಕೊಂಡಿದ್ದಾರೆ.