ಬೆಂಗಳೂರು : ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣವಾಗುತ್ತಿದ್ದು ಜಮೀನಿನ ಮಾಲಿಕರ ಪಹಣಿಗೆ ಆಧಾರ್ ಜೋಡಣೆ ಮಾಡುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಿದ್ದು ದಾವಣಗೆರೆ ಜಿಲ್ಲೆಯಲ್ಲಿ ಶೇ 69.97 ರಷ್ಟು ಖಾತೆದಾರರ ಆಧಾರ್‍ನ್ನು ಪಹಣಿಗೆ ಜೋಡಿಸಿದ್ದು ಇದು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ಒಟ್ಟು 4.03 ಕೋಟಿ ಪಹಣಿಗಳಿದ್ದು, ಆ ಪೈಕಿ ಇದುವರೆಗೆ 1.16 ಕೋಟಿಗಳಿಗೆ ಮಾತ್ರ ಆಧಾರ್ ಸಂಖ್ಯೆ ಜೋಡಣೆ ಆಗಿದೆ. ಒಟ್ಟಾರೆ ರಾಜ್ಯದ ಪ್ರಗತಿ ಶೇ.41.94 ಇದೆ. ಈ ಪೈಕಿ ದಾವಣಗೆರೆ ಜಿಲ್ಲೆಯಲ್ಲಿ ಶೇ. 70 ಪಹಣಿಗಳು ಆಧಾರ್‌ಗೆ ಲಿಂಕ್ ಆಗಿದ್ದು, ರಾಜ್ಯದಲ್ಲೇ ಅತ್ಯುತ್ತಮ ಸಾಧನೆ ತೋರಿದೆ. ಜಿಲ್ಲೆಯ 8.27 ಲಕ್ಷ ಪಹಣಿಗಳಲ್ಲಿ 4.54 ಲಕ್ಷ ಪಹಣಿಗಳು ಆಧಾರ್‌ಗೆ ಜೋಡಣೆಯಾಗಿವೆ.
ಉಳಿದಂತೆ 5.69.66 ಸಾಧನೆ ಮಾಡಿರುವ ಕೋಲಾರ ಹಾಗೂ ಶೇ.69.47 ಗುರು ಸಾಧಿಸಿರುವ ಬಳ್ಳಾರಿ ಜಿಲ್ಲೆಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.