ಬೆಂಗಳೂರು : ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ದ ಕೀಳುಮಟ್ಟದ ಭಾಷೆಯಲ್ಲಿ ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬೈದು ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ನಟ ದರ್ಶನ್ ಅವರ ಮಹಿಳಾ ಅಭಿಮಾನಿ ಮಂಗಳ ಎಂಬುವರ ವಿರುದ್ಧ ಜೆಡಿಎಸ್ ದೂರು ನೀಡಿದೆ.
ಮಾಜಿ ಮುಖ್ಯಮಂತ್ರಿಗಳು, ಹಾಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಕೇಂದ್ರ ಸಚಿವರಾದ ಶ್ರೀ.ಹೆಚ್.ಡಿ.ಕುಮಾರಸ್ವಾಮಿ ರವರ ಬಗ್ಗೆ ಕೀಳುಮಟ್ಟದ ಭಾಷೆಯಲ್ಲಿ ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬೈದು ಅವಮಾನ ಮಾಡಿರುವ ಬಗ್ಗೆ ದೂರು. ನೀಡಲಾಗಿದೆ.
ಮೇಲ್ಕಂಡ ವಿಷಯಕ್ಕೆಸಂಬಂಧಿಸಿದಂತೆ ತಮಗೆ ತಿಳಿಸುವುದೇನೆಂದರೆ, https://www.facebook.com/share/p/bNkbTofJuK7iidLy /?mibextid=xfxF2i ಪೇಜ್ನಲ್ಲಿ ಮಂಗಳ ಎಂಬ ಒಬ್ಬ ಮಹಿಳೆಯು ಮಾಜಿ ಮುಖ್ಯಮಂತ್ರಿಗಳು, ಹಾಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ರವರನ್ನು ಕುರಿತು ಅತ್ಯಂತ ಕೀಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾಳೆ. ಸದರಿ ಮಹಿಳೆಯು ದುರುದ್ದೇಶ ಪೂರ್ವಕವಾಗಿ ಕುಮಾರಸ್ವಾಮಿರವರನ್ನು ಅವಮಾನ ಮಾಡುವ ದೃಷ್ಟಿಯಿಂದಲೇ ಬೈದಿರುತ್ತಾಳೆ. ಮಾನ್ಯ ಕುಮಾರಸ್ವಾಮಿ ರವರಿಗೂ ದರ್ಶನ್ ಪ್ರಕರಣಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಆದಾಗ್ಯೂ ಅನಾವಶ್ಯಕವಾಗಿ ದರ್ಶನ್ರವರ ಪ್ರಕರಣದಲ್ಲಿ ಕುಮಾರಸ್ವಾಮಿಯವರ ಹೆಸರನ್ನು ಎಳೆದು ತಂದು ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಪೇಸ್ಬುಕ್ ನಲ್ಲಿ ಬಾಯಿಗೆ ಬಂದ ಹಾಗೆ ಬೈದು ಅವಮಾನ ಮಾಡಿರುವುದರಿಂದ ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ, ನಾಯಕರುಗಳಿಗೆ ಬಹಳ ನೋವಾಗಿರುತ್ತದೆ. ಸದರಿ ವಿಡಿಯೋ ತುಂಬಾ ವೈರಲ್ ಆಗಿದ್ದು, ಜೆ.ಡಿ.ಎಸ್. ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಅವಮಾನವಾಗಿರುತ್ತದೆ. ಆದುದ್ದರಿಂದ ಸದರಿ ಮಂಗಳ ಮತ್ತು ಅವರಿಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣದ ಖಾತೆಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ದೂರು ನೀಡಲಾಗಿದೆ.