ಬೆಂಗಳೂರು: ರೇಣುಕಸ್ವಾಮಿ ಹತ್ಯೆಯಾದ ಬಳಿಕ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಜೊತೆಗೆ ಮನೆಯಲ್ಲಿ ಪೂಜೆ ಮಾಡಿದ್ದ ವೇಳೆ ಭಾಗವಹಿಸಿದ್ದರು ಎನ್ನಲಾಗಿದೆ. ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿವ ಅಪಾರ್ಟ್‌ಮೆಂಟ್‌ನಲ್ಲಿ ವಿಜಯಲಕ್ಷ್ಮಿವಾಸವಿದ್ದು ರೇಣುಕಸ್ವಾಮಿ ಕೊಲೆಯಾದ ಮರು ದಿನ ನಡೆದಿದ್ದ ಪೂಜೆಯಲ್ಲಿ ನಟ ದರ್ಶನ್ ಭಾಗವಹಿಸಿದ್ದ ಎನ್ನಲಾಗಿದೆ. ಪೂಜೆ ಮುಗಿಸಿಕೊಂಡು ನಟ ದರ್ಶನ್ ಮೈಸೂರಿನತ್ತ ತೆರಳಿದ್ದರು ಎನ್ನಲಾಗಿದೆ.
ಈ ನಡುವೆ ರೇಣುಕಸ್ವಾಮಿ ಕೊಲೆ ಪ್ರಕರಣದ ಸಂಬಂಧ ಬಂಧಿತ ಆರೋಪಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರನ್ನು ತನಿಖಾಧಿಕಾರಿಗಳು ಬುಧವಾರ ಐದು ತಾಸು ವಿಚಾರಣೆಗೆ ಒಳಪಡಿಸಿದರು.