ಬೆಂಗಳೂರು: ನಟ ದರ್ಶನ್ ಕೇಸಲ್ಲಿ ಸರ್ಕಾರದ ಪರವಾಗಿ ವಾದಿಸೋದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಪ್ರಸನ್ನ ಕುಮಾರ್ ನೇಮಕ ಮಾಡಲಾಗಿತ್ತು. ಇವರನ್ನು ಬದಲಾವಣೆ ಮಾಡಲಾಗುತ್ತದೆ ಎನ್ನಲಾಗುತ್ತಿತ್ತು. ಆದ್ರೇ ಎಸ್ ಪಿಪಿ ಬದಲಾವಣೆಯ ಚರ್ಚೆಯೇ ಇಲ್ಲ ಅಂತ ಸಿಎಂ ಸಿದ್ಧರಾಮಯ್ಯ ಸ್ಪಷ್ಟ ಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂ, ಅವರು ನಟ ದರ್ಶನ್ ಪ್ರಕರಣ ಸಂಬಂಧ ರಾಜ್ಯ ಸರ್ಕಾರದಿಂದ ಎಸ್ ಪಿಪಿಯಾಗಿ ಪ್ರಸನ್ನ ಕುಮಾರ್ ನೇಮಕ ಮಾಡಲಾಗಿದೆ. ಅವರ ಬದಲಾವಣೆಯ ಮಾತಿಲ್ಲ ಎಂದರು.
ನಟ ದರ್ಶನ್ ಪ್ರಕರಣದಲ್ಲಿ ಎಸ್ ಪಿಪಿಯಾಗಿ ಪ್ರಸನ್ನ ಕುಮಾರ್ ಅವರನ್ನು ಬದಲಾವಣೆ ಮಾಡುವ ಬಗ್ಗೆ ನನಗೆ ಯಾರು ಒತ್ತಡ ಹಾಕಿಲ್ಲ. ಒತ್ತಡ ಹಾಕಿದ್ರೂ ಯಾರ ಮಾತನ್ನು ನಾನು ಕೇಳುವುದಿಲ್ಲ. ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರನ್ನು ಬದಲಾವಣೆಯ ಪ್ರಶ್ನೆಯೇ ಇಲ್ಲ ಅಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟ ಪಡಿಸಿದರು.
ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ: ಸಿಎಂಸಿದ್ದರಾಮಯ್ಯ