ಬೆಂಗಳೂರು: ನಟ ದರ್ಶನ್ ಸದ್ಯ ಕೊಲೆ ಆರೋಪದ ಮೇಲೆ ಪೋಲಿಸ್ ಕಸ್ಟಡಿಯಲ್ಲಿದ್ದು, ಠಾಣೆಯಲ್ಲಿ ಕಂಬಿಗಳ ಹಿಂದೆ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ದರ್ಶನ್ ತನ್ನ ಗೆಳತಿಯ ಮಾಜಿ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸಂಜಯ್ ಮೇಲೆ ಪವಿತ್ರಗೌಡ ಇಲ್ಲ ಸಲ್ಲದ್ದನ್ನು ಹೇಳಿ ಹೊಡೆಸಿದ್ದಾಳೆ ಎನ್ನಲಾಗಿದೆ. ಈ ನಡುವೆ ಪವಿತ್ರಗೌಡ ಹಾಗೂ ದರ್ಶನ್ ಸಂಬಂಧದ ಬಗ್ಗೆ ಅನೇಕ ಅನುಮಾನಗಳು ಹುಟ್ಟು ಹಾಕಿದೆ.
ಮಗಳನ್ನು ತನ್ನ ಜೊತೆಗೆ ಕಳುಹಿಸಿಕೊಡುವಂತೆ ಸಂಜಯ್ ಸಿಂಗ್ ಕೇಳುತ್ತಿದ್ದ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಪವಿತ್ರಗೌಡ ಈ ಬಗ್ಗೆ ದರ್ಶನ್‌ಗೆ ಮಾಹಿತಿ ನೀಡಿದ್ದಳು ಎನ್ನಲಾಗಿದೆ. ಇದರಿಂದ ಸಿಟ್ಟಾಗಿದ್ದ ದರ್ಶನ್ ಉಪಾಯದಿಂದ ಸಂಜಯ್ ಸಿಂಗ್ ಅನ್ನು ಕರೆಸಿಕೊಂಡು ಹಿಗ್ಗಾಮುಗ್ಗಾ ಜಾಡಿಸಿ ಇನ್ನೊಂದು ಸಾರಿ ಇಲ್ಲಿ ಕಾಣಿಸಿಕೊಳ್ಳಬೇಡ ಅಂತ ವಾರ್ನಿಂಗ್ ಮಾಡಿ ಕಳುಹಿಸಿಕೊಟ್ಟಿದ್ದ ದರ್ಶನ್ ಎನ್ನಲಾಗಿದೆ. ಇದಕ್ಕೆ ಪವಿತ್ರಗೌಡ ಸಾಥ್ ನೀಡಿದ್ದಳು ಎನ್ನಲಾಗಿದೆ. ಡೈವೋರ್ಸ್ ಬಳಿಕ ದರ್ಶನ್ ಜೊತೆಗೆ ಪವಿತ್ರಗೌಡ ಜೀವನ ನಡೆಸುತ್ತಿದ್ದಳು ಎನ್ನಲಾಗಿದೆ. ದರ್ಶನ್ ಜೊತೆಗೆ ಇರುವ ಸಲುವಾಗಿಯೇ ಪವಿತ್ರಗೌಡ ಡೈವೋರ್ಸ್ ನೀಡಿದ್ದಳು ಎನ್ನಲಾಗಿದೆ. ಇದಲ್ಲದೇ ಪವಿತ್ರಗೌಡ ದರ್ಶನ್ ಅಕ್ಕ. ಮತ್ತು ಅಮ್ಮನ ಜೊತೆಗಿನ ಕೆಲವು ಫೋಟೋಗಳು ವೈರಲ್ ಆಗಿದ್ದವು.