ಬೆಂಗಳೂರು ; ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಶಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ನಲ್ಲಿ ಇಂದಿನಿಂದ ಹೊಸ ಮೆನು ಜಾರಿಗೆ ಬಂದಿದ್ದು, ಬೆಳಗ್ಗೆಯ ತಿಂಡಿ ಹಾಗೂ ಮಧ್ಯಾಹ್ನದ ಊಟ, ರಾತ್ರಿ ಊಟದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ.
ರಾಜ್ಯದ ಇಂದಿರಾ ಕ್ಯಾಂಟೀನ್ ಗಳಲ್ಲಿ ಇಂದಿನಿಂದ ಊಟ ಮತ್ತು ಉಪಾಹಾರಗಳಲಿ ಬದಲಾವಣೆ ಮಾಡಲಾಗಿದ್ದು, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗಕ್ಕೆ ಬೇರೆ ಬೇರೆ ಮನೆ ಪರಿಚಯಿಸಲಾಗಿದೆ.
ಇಂದಿನಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಸಿಗಲಿವೆ ಈ ಎಲ್ಲಾ ಊಟ-ತಿಂಡಿಗಳು : ಇಲ್ಲಿದೆ ಸಂಪೂರ್ಣ ಮಾಹಿತಿ
ಭಾನುವಾರ
ಬೆಳಗ್ಗೆ : ಇಡ್ಲಿ ಚಟ್ನಿ / ಖಾರಾ ಬಾತ್ / ಬ್ರೆಡ್ ಮತ್ತು ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್ / ಮೊಸರಾನ್ನ / ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು
ಸೋಮವಾರ
ಬೆಳಗ್ಗೆ : ಇಡ್ಲಿ ಸಾಂಬಾರ್ / ಪಲಾವ್ ರೈತ / ಬ್ರೆಡ್ & ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್ + ಕೀರ್ / ರಾಗಿಮುದ್ದೆ ಸೊಪ್ಪು ಸಾರು ಮತ್ತು ಕೀರ್
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು
ಮಂಗಳವಾರ
ಬೆಳಗ್ಗೆ : ಇಡ್ಲಿ ಚಟ್ನಿ / ಬಿಸಿ ಬೇಳೆ ಬಾತ್ / ಮಂಗಳೂರು ಬನ್ಸ್
ಮಧ್ಯಾಹ್ನ : ಅನ್ನ ಸಾಂಬಾರ್ ಮತ್ತು ಮೊಸರು / ಚಪಾತಿ ಸಾಗು ಮತ್ತು ಕೀರ್
ರಾತ್ರಿ : ಅನ್ನ ಸಾಂಬಾರ್ ಮತ್ತು ರೊಟ್ಟಿ / ಚಪಾತಿ ಮತ್ತು ವೆಜ್ ಕರಿ
ಬುಧವಾರ
ಬೆಳಗ್ಗೆ : ಇಡ್ಲಿ ಸಾಂಬಾರ್ / ಖಾರಾ ಬಾತ್ / ಬೇಕರಿ ಬನ್
ಮಧ್ಯಾಹ್ನ : ಅನ್ನ ಸಾಂಬಾರ್ ಮತ್ತು ಕೀರ್ / ರಾಗಿಮುದ್ದೆ ಮತ್ತು ಸೊಪ್ಪು ಸಾರು
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ ಮತ್ತು ಸೊಪ್ಪು ಸಾರು
ಗುರುವಾರ
ಬೆಳಗ್ಗೆ : ಇಡ್ಲಿ ಸಾಂಬಾರ್ / ಪಲಾವ್ / ಬ್ರೆಡ್ ಮತ್ತು ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್ + ಮೊಸರು / ಚಪಾತಿ ಸಾಗು ಮತ್ತು ಕೀರ್
ರಾತ್ರಿ : ಅನ್ನ ಸಾಂಬಾರ್ + ಮೊಸರು / ಚಪಾತಿ ಮತ್ತು ವೆಜ್ ಕರಿ
ಶುಕ್ರವಾರ
ಬೆಳಗ್ಗೆ : ಇಡ್ಲಿ ಸಾಂಬಾರ್ / ಬಿಸಿಬೇಳೆ ಬಾತ್ / ಮಂಗಳೂರು ಬನ್ಸ್
ಮಧ್ಯಾಹ್ನ : ಅನ್ನ ಸಾಂಬಾರ್ / ಮೊಸರಾನ್ನ / ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು
ಶನಿವಾರ
ಬೆಳಗ್ಗೆ : ಇಡ್ಲಿ ಸಾಂಬಾರ್ / ಪೊಂಗಲ್ / ಬೇಕರಿ ಬನ್
ಮಧ್ಯಾಹ್ನ : ಅನ್ನ ಸಾಂಬಾರ್ ಮತ್ತು ಕೀರ್ / ಚಪಾತಿ ಸಾಗು + ಕೀರ್
ರಾತ್ರಿ : ಅನ್ನ ಸಾಂಬಾರ್ + ಮೊಸರು / ಚಪಾತಿ ಮತ್ತು ವೆಜ್ ಕರಿ