ಮುಂಬೈ : ಪೈಲಟ್’ಗಳ ಕೊರತೆಯನ್ನ ನೀಗಿಸಲು ಏರ್ ಇಂಡಿಯಾ ಮಹಾರಾಷ್ಟ್ರದ ಅಮರಾವತಿಯಲ್ಲಿ ಫ್ಲೈಯಿಂಗ್ ಸ್ಕೂಲ್ ಸ್ಥಾಪಿಸುತ್ತಿದೆ. ಅಕಾಡೆಮಿಯು ವಾರ್ಷಿಕವಾಗಿ 180 ಪೈಲಟ್ಗಳಿಗೆ ತರಬೇತಿ ನೀಡುವ ಸಾಮರ್ಥ್ಯವನ್ನ ಹೊಂದಿರುತ್ತದೆ. ಯಾವುದೇ ಪೂರ್ವ ಹಾರಾಟದ ಅನುಭವವಿಲ್ಲದ ಮಹತ್ವಾಕಾಂಕ್ಷಿ ಪೈಲಟ್ಗಳಿಗೆ ಮುಂದಿನ ತರಬೇತಿ ಹಂತಗಳನ್ನ ಪೂರ್ಣಗೊಳಿಸಿದ ನಂತ್ರ ಏರ್ ಇಂಡಿಯಾದ ಕಾಕ್ಪಿಟ್ಗೆ ನೇರ ಮಾರ್ಗವನ್ನ ಒದಗಿಸುತ್ತದೆ.
ಏರ್ ಇಂಡಿಯಾ ತನ್ನ ತರಬೇತಿಗಾಗಿ ಅಮೆರಿಕದ ಪೈಪರ್ ಮತ್ತು ಯುರೋಪಿಯನ್ ತಯಾರಕ ಡೈಮಂಡ್ನಿಂದ ಸರಿಸುಮಾರು 30 ಸಿಂಗಲ್ ಎಂಜಿನ್ ಮತ್ತು ನಾಲ್ಕು ಮಲ್ಟಿ-ಎಂಜಿನ್ ವಿಮಾನಗಳನ್ನ ಆಯ್ಕೆ ಮಾಡಿದೆ ಎಂದು ವರದಿ ತಿಳಿಸಿದೆ.
ಕೇಂದ್ರ ಸರ್ಕಾರವು ದೇಶದಲ್ಲಿ ವಾಣಿಜ್ಯ ಪೈಲಟ್ ತರಬೇತಿಯನ್ನ ಉತ್ತೇಜಿಸಲು ಸಕ್ರಿಯವಾಗಿ ಪ್ರೋತ್ಸಾಹಿಸುತ್ತಿದೆ. ಯಾಕಂದ್ರೆ, ಪ್ರಸ್ತುತ 40% ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದೇಶದಲ್ಲಿ ತರಬೇತಿಯನ್ನ ಬಯಸುತ್ತಾರೆ, ಇದಕ್ಕೆ 1.5-2 ಕೋಟಿ ರೂಪಾಯಿ ಮೀಸಲಿರಿಸಿದೆ.
‘ನೇರ ತೆರಿಗೆ ಸಂಗ್ರಹ’ದಲ್ಲಿ ಶೇ.22.19ರಷ್ಟು ಹೆಚ್ಚಳ ; 2024-25ರಲ್ಲಿ 4,62,664 ಕೋಟಿ ಕಲೆಕ್ಷನ್
ಕಾಶಿ ಜನರು ಕೇವಲ ಸಂಸದನನ್ನ ಅಲ್ಲ, 3ನೇ ಬಾರಿಗೆ ಪ್ರಧಾನಿಯನ್ನ ಆಯ್ಕೆ ಮಾಡಿದ್ದಾರೆ : ಪ್ರಧಾನಿ ಮೋದಿ