ನವದೆಹಲಿ: ಕೆಲವು ದಿನಗಳ ಹಿಂದೆ ಈರುಳ್ಳಿ ಬೆಲೆ ಏರಿಕೆಯ ಬಗ್ಗೆ ಸುದ್ದಿಗಳನ್ನು ನೀವು ಕೇಳಿದ್ದೀರಾ. ದೇಶದ ಅನೇಕ ಭಾಗಗಳಲ್ಲಿ, ಟೊಮೆಟೊ ಬೆಲೆಗಳು ಎರಡು ಮೂರು ವಾರಗಳಲ್ಲಿ ದ್ವಿಗುಣಗೊಂಡಿವು ಗ್ರಾಹಕರಲ್ಲಿ ಆತಂಕವನ್ನು ಮನೆ ಮಾಡಿದೆ.
ಮಹಾರಾಷ್ಟ್ರ ಮತ್ತು ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಟೊಮೆಟೊ ಬೆಲೆಯಲ್ಲಿ ಈ ಹೆಚ್ಚಳ ಕಂಡುಬಂದಿದೆ. ಇದಕ್ಕೆ ಕಾರಣ ಶಾಖ ಮತ್ತು ಕಡಿಮೆ ಉತ್ಪಾದನೆ ಎಂದು ಹೇಳಲಾಗುತ್ತಿದೆ. ಪೂರೈಕೆಯ ನಿರ್ಬಂಧಗಳಿಂದಾಗಿ ಸಾಮಾನ್ಯವಾಗಿ ಬೆಲೆಗಳು ಹೆಚ್ಚಾದಾಗ ಜುಲೈನಲ್ಲಿ ಪರಿಸ್ಥಿತಿ ಜಟಿಲವಾಗಬಹುದು ಎನ್ನಲಾಗಿದೆ. ಕಳೆದ ಎರಡು-ಮೂರು ವಾರಗಳಲ್ಲಿ ಮತ್ತು ಒಂದು ವರ್ಷದ ಹಿಂದೆ ಹೋಲಿಸಿದರೆ ಬೆಲೆಗಳು ಬಹುತೇಕ ದ್ವಿಗುಣಗೊಂಡಿವೆಯಂತೆ. ಬೆಂಗಳೂರಿನಲ್ಲಿ ಭಾನುವಾರ ಟೊಮೆಟೊ ಬೆಲೆ ಕೆ.ಜಿ.ಗೆ 80 ರೂಗಳಿಗೆ ಮಾರಟವಾಗುತ್ತಿದೆ.