ಟೊರಾಂಟೋ: ಕೆನಡಾದ ಅತಿದೊಡ್ಡ ನಗರವಾದ ಟೊರೊಂಟೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಶೂಟರ್ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಸ್ಥಳೀಯ ಕಾಲಮಾನ ಸೋಮವಾರ ಮಧ್ಯಾಹ್ನ 3:25 ಕ್ಕೆ (1925 ಜಿಎಂಟಿ) ಗುಂಡಿನ ದಾಳಿಯ ವರದಿಗಳಿಗಾಗಿ ಡಾನ್ ಮಿಲ್ಸ್ ಪ್ರದೇಶದ ಕಚೇರಿ ಕಟ್ಟಡಕ್ಕೆ ಪೊಲೀಸರನ್ನು ಕರೆಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ
ಘಟನಾ ಸ್ಥಳದಲ್ಲಿ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ಶವವಾಗಿ ಪತ್ತೆಯಾಗಿದ್ದು, ಅವರಲ್ಲಿ ಒಬ್ಬನನ್ನು ಶೂಟರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಗುಂಡಿನ ದಾಳಿಯ ತನಿಖೆ ನಡೆಸುತ್ತಿರುವುದರಿಂದ ಘಟನಾ ಸ್ಥಳದ ಬಳಿ ಇರುವ ಡೇಕೇರ್ ಕೇಂದ್ರ ಮತ್ತು ಪ್ರಾಥಮಿಕ ಶಾಲೆಯನ್ನು ಲಾಕ್ ಡೌನ್ ಮಾಡಲಾಗಿದೆ.