ನವದೆಹಲಿ: ವಿದ್ಯುನ್ಮಾನ ಮತಯಂತ್ರ (ಇವಿಎಂ) ಕುರಿತು ಭಾನುವಾರ (ಜೂನ್ 16) ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಚುನಾವಣಾ ಆಯೋಗವು ಇವಿಎಂ ಅನ್ಲಾಕ್ ಮಾಡಲು ಯಾವುದೇ ಒಟಿಪಿ ಅಗತ್ಯವಿಲ್ಲ ಎಂದು ಹೇಳಿದೆ.
ಚುನಾವಣಾ ಆಯೋಗವು “ಇವಿಎಂ ಅನ್ಲಾಕ್ ಮಾಡಲು ಯಾವುದೇ ಒಟಿಪಿ ಅಗತ್ಯವಿಲ್ಲ, ಅಥವಾ ಯಾವುದೇ ಸಾಧನದೊಂದಿಗೆ ಸಂಪರ್ಕ ಹೊಂದಿಲ್ಲ” ಎಂದು ಚುನಾವಣಾ ಆಯೋಗವು ಇವಿಎಂ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಅಂತ ಹೇಳಿವೆ.
ಇವಿಎಂಗಳಿಗೆ ಸಂಬಂಧಿಸಿದಂತೆ ಇವಿಎಂ ಅನ್ಲಾಕ್ ಮಾಡಲು ಯಾವುದೇ ಒಟಿಪಿ ಅಗತ್ಯವಿಲ್ಲ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಹಾಗೆಯೇ ಇವಿಎಂ ಅನ್ನು ಯಾವುದೇ ಸಾಧನಕ್ಕೆ ಸಂಪರ್ಕಿಸಲು ಸಾಧ್ಯವಿಲ್ಲ. ಪತ್ರಿಕೆಯಲ್ಲಿ ಸಂಪೂರ್ಣ ತಪ್ಪು ಸುದ್ದಿ ಪ್ರಕಟವಾಗುತ್ತಿದೆ. ಇವಿಎಂ ಸ್ವತಂತ್ರ ವ್ಯವಸ್ಥೆಯಾಗಿದೆ. ಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿ ಸಂಪೂರ್ಣ ಆಧಾರ ರಹಿತವಾಗಿದೆ. ಪತ್ರಿಕೆಗೂ ನೋಟಿಸ್ ಜಾರಿ ಮಾಡಿದ್ದೇವೆ. 499 ಐಪಿಸಿ ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಇದು ತಪ್ಪು ಸುದ್ದಿ ಎಂದು ಪತ್ರಿಕೆಯ ವರದಿಗಾರನಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆ ಅಂತ ಹೇಳಿದೆ.