ಬೆಂಗಳೂರು : ಟೆರೆಸ್ ಮೇಲೆ ಬಟ್ಟೆ ತರಲು ಹೋದಾಗ ಪಕ್ಕದಲ್ಲಿದ್ದ ಮಾವಿನ ಕಾಯಿ ಕೀಳಲು ಹೋದ ಬಾಲಕ ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಈ ಒಂದು ದುರ್ಘಟನೆ ಸಂಭವಿಸಿತ್ತು. ಮೃತ ಬಾಲಕನನ್ನು 9ನೇ ತರಗತಿಯ ಸಾಯಿ ಭುವನ್ ಎಂಬುದಾಗಿ ತಿಳಿದು ಬಂದಿತ್ತು. ಈ ಪ್ರಕರಣ ಸಂಬಂಧ ಶಾಲೆಯ ಪ್ರಾಂಶುಪಾಲರು ಸೇರಿದಂತೆ 8 ಮಂದಿಯನ್ನು ಅಮಾನತುಗೊಳಿಸಲಾಗಿದೆ.
ಜೂನ್.9ರಂದು ಹೊಸಕೋಟೆ ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿದ್ದು ಓದುತ್ತಿದ್ದ ಅಣ್ಣ-ತಮ್ಮ ಟೆರೆಸ್ ಮೇಲೆ ಹಾಕಿದ್ದ ಬಟ್ಟೆ ತರಲು ಹೋಗಿದ್ದರು. ಈ ವೇಳೆ ಅಲ್ಲೇ ಇದ್ದ ಮರದಲ್ಲಿ ಬಿಟ್ಟಿದ ಮಾವಿನ ಹಣ್ಣನ್ನು ಕೀಳಲು ಹೋಗಿದ್ದು ಓರ್ವ ಬಾಲಕನಿಗೆ ವಿದ್ಯುತ್ ಸ್ಪರ್ಶಿಸಿ ಬಾಲಕ ಮಹಡಿ ಮೇಲಿದ್ದ ಕೆಳಕ್ಕೆ ಬಿದ್ದಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದನು.
ಅಣ್ಣ ತಮ್ಮ ಇಬ್ಬರೂ ಕಳೆದ ಎರಡು ವರ್ಷಗಳಿಂದ ವಸತಿ ಶಾಲೆಯಲ್ಲಿ ಓದುತ್ತಿದ್ದರು. ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತ ಕಾರ್ಯನಿರ್ವಾಹಕ ನಿರ್ದೇಶಕರಾದಂತ ಡಾ.ಪ್ರವೀಣ್ ಪಿ ಬಾಗೇವಾಡಿ ಅವರು, ಶಾಲೆಯ ಪ್ರಭಾರ ಪ್ರಾಂಶುಪಾಲರಾದಂತ ಧನರಾಜು.ಜಿ, ನಿಲಯ ಪಾಲಕರಾದಂತ ಗೀತಾಂಜಲಿ ಬಿ.ಜಿ, ಗಣಿತ ಶಿಕ್ಷಕಿ ಗಾಯತ್ರಿ ಹೆಚ್.ಡಿ, ವಿಜ್ಞಾನ ಶಿಕ್ಷಕ ಶಿವರಾಜ ನಾಯ್ಕ್.ಎಲ್, ಸಮಾಜ ವಿಜ್ಞಾನ ಶಿಕ್ಷಕಿ ಕಾವ್ಯ.ಎಸ್, ಹಿಂದಿ ಭಾಷಾ ಶಿಕ್ಷಕ ಸುರೇಶ್ ಬೀಳಗಿ, ಸಂಗೀತ ಶಿಕ್ಷಕಿ ವಿಶಾಲಾಕ್ಷಿ.ವಿ ಹಾಗೂ ಪ್ರಥಮ ದರ್ಜೆ ಸಹಾಯಕ ಬಿಂದು ಎಂ.ಎಸ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಇನ್ನೂ ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೇ ಕೇಂದ್ರ ಸ್ಥಾನವನ್ನು ಬಿಟ್ಟು ಹೋಗುವಂತಿಲ್ಲ. ಜೀವನಾಂಶ ಭತ್ಯೆ ಪಡೆಯಲು ಇವರು ಅರ್ಹರಾಗಿದ್ದಾರೆ. ಈ ಶಾಲೆಯ ಪ್ರಭಾರ ಪ್ರಾಂಶುಪಾಲರ ಅಮಾನತ್ತಿನಿಂದ ತೆರವಾದಂತ ಹುದ್ದೆಗೆ ಶೈಲ ಕೆ.ಪಿ ಅವರನ್ನು ಪ್ರಾಂಶುಪಾಲರಾಗಿ ನೇಮಕ ಮಾಡಿದ್ದಾರೆ.
ಆಸ್ತಿಗಾಗಿ ತಮ್ಮನನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಅಣ್ಣ: 8 ಆರೋಪಿಗಳು ಅರೆಸ್ಟ್