ಬೆಳಗಾವಿ: ಕೇವಲ ಒಂದೇ ಒಂದು ಎಕರೆ ಜಮೀನಿಗಾಗಿ ಉಂಟಾದ ಕಲಹದಿಂದ, ತಮ್ಮನನ್ನೇ ಸುಪಾರಿ ಕೊಟ್ಟು ಅಣ್ಣನೊಬ್ಬ ಕೊಲೆಗೈಯ್ಯಿಸಿದ್ದಾನೆ. ಈ ಸಂಬಂಧ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಸುಲ್ತಾನಪುರ ಗ್ರಾಮದಲ್ಲಿ ಈರಪ್ಪ ಚೌಗಲಾ ಹಾಗೂ ಶ್ರೀಶೈಲ್ ಚೌಗಲಾ ನಡುವೆ ಒಂದು ಎಕರೆ ಜಮೀನಿಗಾಗಿ ಕಲಹ ಉಂಟಾಗಿತ್ತು. ಇದು ವಿಕೋಪಕ್ಕೆ ತಿರುಗಿ, ತಮ್ಮನನ್ನು ಹತ್ಯೆ ಮಾಡಿಸೋ ಸಂಚನ್ನು ಶ್ರೀಶೈಲ್ ರೂಪಿಸಿದ್ದಾನೆ.
ಜೂನ್.4ರಂದು ಸಂಜೆ 9 ಗಂಟೆಯ ವೇಳೆಗೆ ತೋಟದ ಮನೆಗೆ ಹೋಗುತ್ತಿದ್ದಂತ ಈರಪ್ಪ ಚೌಗಲಾ(24) ಮೇಲೆ ಕಾರಿನಲ್ಲಿ ಬಂದಂತ ಸುಪಾರಿ ಪಡೆದಿದ್ದವರು ಅಪಹರಿಸಿದ್ದಾರೆ. ಆ ಬಳಿಕ ಬಾಗಲಕೋಟೆಯ ಕೋಲಾರ್ ಜಾಕ್ವೆಟ್ ಬಳಿಯಲ್ಲಿ ಹತ್ಯೆಗೈದು ಮೃತದೇಹ ಬಿಸಾಕಿ ಹೋಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಂತ ಹಾರೊಗೇರಿ ಠಾಣೆಯ ಪೊಲೀಸರು ಈರಪ್ಪನನ್ನು ಅಪಹರಿಸಿ, ಹತ್ಯೆಗೈದಿದ್ದಂತ ಸಹೋದರ ಶ್ರೀಶೈಲ್ ಚೌಗಲಾ ಸೇರಿದಂತೆ 8 ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಗಳನ್ನು ವಿಚಾರಣೆ ನಡೆಸಿದಾಗ ಆಸ್ತಿ ವಿಚಾರದ ದ್ವೇಷಕ್ಕಾಗಿ ಸುಪಾರಿ ಕೊಟ್ಟು ತಮ್ಮನನ್ನು ಕೊಲೆಗೈಸಿರೋದಾಗಿ ಒಪ್ಪಿಕೊಂಡಿರೋದಾಗಿ ತಿಳಿದು ಬಂದಿದೆ.
Paytmನ ಟಿಕೆಟಿಂಗ್ ವ್ಯವಹಾರಕ್ಕಾಗಿ 1,500 ಕೋಟಿ ಡೀಲ್‌ಗೆ Zomato ಕಣ್ಣು: ವರದಿ | Zomato