ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಇಂದು ಪೊಲೀಸರು ಎ.1 ಆರೋಪಿ ಪವಿತ್ರಾ ಗೌಡ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದರು. ಈ ಸಂದರ್ಭದಲ್ಲಿ ಪವಿತ್ರಾ ಗೌಡ ಬಳಸುತ್ತಿದ್ದಂತ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಆರ್ ಆರ್ ನಗರದಲ್ಲಿರುವಂತ ಪವಿತ್ರಾ ಗೌಡ ನಿವಾಸದಲ್ಲಿ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ರೇಣುಕಾಸ್ವಾಮಿ ಮರ್ಡರ್ ಕೇಸ್ ಸಂಬಂಧ ಸ್ಥಳ ಮಹಜರು ನಡೆಸಿದರು.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸಿಪಿಐ ನೇತೃತ್ವದಲ್ಲಿ ಎ.1 ಆರೋಪಿ ಪವಿತ್ರಾ ಗೌಡ, ಎ3 ಆರೋಪಿ ಪವನ್ ಕರೆದೊಯ್ದು ಮೊದಲ ಹಾಗೂ ಎರಡನೇ ಮಹಡಿಯಲ್ಲಿ ಸ್ಥಳ ಮಹಜರು ಮಾಡಿದರು.
ಪವಿತ್ರಾ ಗೌಡ ನಿವಾಸದಲ್ಲಿನ ಸ್ಥಳ ಮಹಜರು ಸಂದರ್ಭದಲ್ಲಿ ಅವರು ಬಳಸುತ್ತಿದ್ದಂತ ಶೂ, ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
BREAKING: ಶಿವಮೊಗ್ಗದಲ್ಲಿ ‘NSS ಕ್ಯಾಂಪ್’ನಲ್ಲಿ ಊಟ ಸೇವಿಸಿದ 9 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು
BREAKING: ಪೊಲೀಸರಿಂದ ‘ರೇಣುಕಾಸ್ವಾಮಿ ಹತ್ಯೆ’ಗೂ ಮುನ್ನಾ ‘ಕಿಡ್ನ್ಯಾಪ್’ಗೆ ಬಳಸಿದ್ದ ಕಾರು ಜಪ್ತಿ