Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಗೃಹಸ್ಥ ಜೀವನ ಸಮೃದ್ಧವಾಗಲು, ಕುಟುಂಬದಲ್ಲಿ ಸಂತೋಷವು ಉಂಟಾಗಲು ಈ ಪರಿಹಾರ ಮಾಡಿ

22/05/2025 9:18 AM
vidhana soudha

BIG NEWS : ರಾಜ್ಯಾದ್ಯಂತ ಭಾರಿ ಮಳೆ : ರಾಜ್ಯ ಸರ್ಕಾರದಿಂದ `ಗ್ರಾಮೀಣ ಭಾಗದ ಜನರಿಗೆ’ ಮಹತ್ವದ ಪ್ರಕಟಣೆ.!

22/05/2025 9:15 AM

BREAKING: ವಾಷಿಂಗ್ಟನ್ ಡಿಸಿಯಲ್ಲಿ ಇಬ್ಬರು ಇಸ್ರೇಲಿ ರಾಯಭಾರ ಕಚೇರಿ ಅಧಿಕಾರಿಗಳ ಹತ್ಯೆ

22/05/2025 9:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕಲ್ಯಾಣ ಕರ್ನಾಟಕ ಜನತೆ’ಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ‘1,419 ಕನ್ನಡ-ಇಂಗ್ಲೀಷ್ ಮೀಡಿಯಂ ಶಾಲೆ’ ಆರಂಭ
KARNATAKA

‘ಕಲ್ಯಾಣ ಕರ್ನಾಟಕ ಜನತೆ’ಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ‘1,419 ಕನ್ನಡ-ಇಂಗ್ಲೀಷ್ ಮೀಡಿಯಂ ಶಾಲೆ’ ಆರಂಭ

By kannadanewsnow0916/06/2024 2:58 PM
vidhana soudha
vidhana soudha

ಬೆಂಗಳೂರು: ಕಲ್ಯಾಣ ಕರ್ನಾಟಕ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ 1ನೇ ತರಗತಿಯಿಂದಲೇ ಕನ್ನಡ ಹಾಗೂ ಇಂಗ್ಲೀಷ್ ಮೀಡಿಯಂನಲ್ಲಿ ಶಿಕ್ಷಣ ನೀಡುವ ಸಲುವಾಗಿ 1,419 ಶಾಲೆಗಳನ್ನು ಆರಂಭಕ್ಕೆ ರಾಜ್ಯ ಸರ್ಕಾರ ಆದೇಶಿದೆ.

ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಲ್ಯಾಣ ಕರ್ನಾಟಕದ ವಿಭಾಗದಲ್ಲಿ ಶಿಕ್ಷಣದಲ್ಲಿ ಗುಣಾತ್ಮಕ ಪ್ರಗತಿಯನ್ನು ಸಾಧಿಸಲು ಪ್ರಾಥಮಿಕ ಹಂತದಲ್ಲಿಯೇ/ಆರಂಭಿಕ ಹಂತದಿಂದಲೇ ʼಭದ್ರ ಬುನಾದಿʼಯನ್ನು ಹಾಕುವ ನಿಟ್ಟಿನಲ್ಲಿ 2024-25ನೇ ಸಾಲಿನಿಂದ ಅರ್ಹ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ) ತರಗತಿಗಳನ್ನು ರಾಜ್ಯದ 1419 ಸರ್ಕಾರಿ ಶಾಲೆಗಳಲ್ಲಿ  ಪ್ರಾರಂಭಿಸಲು ಸರ್ಕಾರ ಆದೇಶಿಸಿದೆ. ಇದಕ್ಕಾಗಿ, ಡಾ. ಅಜಯ ಸಿಂಗ, ಅಧ್ಯಕ್ಷರು, ಕಲ್ಯಾಣ ಕರ್ನಾಟಕ ಪ್ರಾಧೇಶಿಕ ಅಭಿವೃದ್ಧಿ ಮಂಡಳಿ ಇವರ ನೇತೃತ್ವದಲ್ಲಿ ಮಂಡಳಿಯು ಉತ್ತಮ ಹೆಜ್ಜೆಯನ್ನಿಟ್ಟು ಸರ್ಕಾರದೊಂದಿಗೆ ʼಅಕ್ಷರ ಆವಿಷ್ಕಾರʼ ಯೋಜನೆಯ ಮುಖಾಂತರ ಕೈ ಜೋಡಿಸಿದೆ. ತನ್ಮೂಲಕ ಮಕ್ಕಳಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ) ಕಲಿಕಾ ಸೌಲಭ್ಯವನ್ನು ಕಲ್ಪಿಸಿಕೊಡುವ ಉದ್ದೇಶ ಸರ್ಕಾರದ್ದಾಗಿದೆ.

ದಿನಾಂಕ: 15.06.2024ರ ಸರ್ಕಾರ ಆದೇಶ ಸಂಖ್ಯೆ: ಇಪಿ 137 ಪಿಜಿಸಿ 2024ರ ಅನ್ವಯ          2024-25ನೇ ಶೈಕ್ಷಣಿಕ ಸಾಲಿನಿಂದ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಒಟ್ಟು 872 ಸರ್ಕಾರಿ ಶಾಲೆಗಳಲ್ಲಿ ʼದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ)ʼ ತರಗತಿಗಳನ್ನು ಪ್ರಾರಂಭಿಸಲು ಅಧಿಸೂಚನೆ ಹೊರಡಿಸಲಾಗಿದೆ. ಜಿಲ್ಲಾವಾರು ಮಾಹಿತಿ ಈ ಕೆಳಕಂಡಂತಿದೆ.

ಕ್ರ.ಸಂ ಜಿಲ್ಲೆಗಳ ಹೆಸರು ತರಗತಿಗಳ ಸಂಖ್ಯೆ
1 2 3
01 ಬೀದರ 97
02 ಬಳ್ಳಾರಿ 119
03 ಕಲಬುರಗಿ 165
04 ಕೊಪ್ಪಳ 109
05 ರಾಯಚೂರು 176
06 ವಿಜಯನಗರ 134
07 ಯಾದಗಿರಿ 72
ವಿಭಾಗದ ಒಟ್ಟು ತರಗತಿಗಳ ಸಂಖ್ಯೆ 872

ರಾಜ್ಯದಲ್ಲಿ ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ನಡೆಯುತ್ತಿರುವ ತರಗತಿಗಳು ಮತ್ತು ಅಲ್ಲಿ ದಾಖಲಾದ ಮಕ್ಕಳ ವಿವರಗಳ ಕುರಿತು ಅವಲೋಕಿಸಿದಾಗ, ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಈ ಸಂಖ್ಯೆ ತೀರಾ ಕಡಿಮೆ ಇರುವುದನ್ನು ಈ ಕೆಳಕಂಡ     ಅಂಕಿ-ಅಂಶಗಳಿಂದ ತಿಳಿಯಬಹುದಾಗಿದೆ.

ಕ್ರ.ಸಂ ವಿಭಾಗಗಳು ಒಟ್ಟು ಶಾಲೆಗಳ ಸಂಖ್ಯೆ ಒಟ್ಟು

ವಿದ್ಯಾರ್ಥಿಗಳ ಸಂಖ್ಯೆ

(1 ರಿಂದ 10 ತರಗತಿ)

ಪ್ರತಿ 1 ಲಕ್ಷ ಮಕ್ಕಳಿಗೆ ಇಂಗ್ಲಿಷ ಮಾಧ್ಯಮ ಶಾಲೆಗಳ ಸಂಖ್ಯೆ ಪ್ರತಿ 1 ಆಂಗ್ಲ ಮಾಧ್ಯಮ ಶಾಲೆಯಲ್ಲಿನ ಒಟ್ಟು ಮಕ್ಕಳ ಸಂಖ್ಯೆ
01 02 03 04 05 06
01 ಬೆಂಗಳೂರು 1291 1002645 129 777
02 ಧಾರವಾಡ 503 1414256 36 2812
03 ಮೈಸೂರು 871 626219 139 719
04 ಕಲಬುರಗಿ 418 1285784 33 3076
ರಾಜ್ಯದ

ಒಟ್ಟು ಸರಾಸರಿ

3083 4328904 71 1404

 

ಅತಿಥಿ ಶಿಕ್ಷಕರ  ನೇಮಕಾತಿ:

 ಸರ್ಕಾರದ ಆದೇಶ ಸಂಖ್ಯೆ: ಇಪಿ 137 ಪಿಜಿಸಿ 2024 ದಿನಾಂಕ: 15.06.2024 ರನ್ವಯ ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ 7 ಜಿಲ್ಲೆಗಳಲ್ಲಿ ಆಯ್ದ 872 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ  ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ) ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿರುತ್ತಾರೆ. ಅದರಂತೆ, ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ) ತರಗತಿಗಳಿಗೆ ನಿಯಮನುಸಾರ ಅತಿಥಿ ಶಿಕ್ಷಕರ ನೇಮಕಾತಿ ಶಾಲಾ ಹಂತದಲ್ಲಿ ನಡೆಯಲಿದೆ.

ಕಲ್ಯಾಣ ಕರ್ನಾಟಕದಲ್ಲಿ ʼಇಂಗ್ಲಿಷ’ ಬರ:

ಇತ್ತೀಚಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವನ್ನು ಅವಲೋಕಿಸಿದಾಗ, ರಾಜ್ಯದ ಫಲಿತಾಂಶದ ಮೊದಲ 10 ಸ್ಥಾನಗಳಲ್ಲಿನ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ) ತರಗತಿಗಳ ಅಂಕಿ-ಅಂಶಗಳನ್ನು ಗಮನಿಸುವುದು ಸೂಕ್ತವಾಗಿದೆ.

10 ನೇ ತರಗತಿಯ ಪರೀಕ್ಷೆಯಲ್ಲಿ ಜಿಲ್ಲೆಯ ಸ್ಥಾನ

 

ವಿಭಾಗದ ಹೆಸರು ಜಿಲ್ಲೆಯ ಹೆಸರು ಒಟ್ಟು ಶಾಲೆಗಳ ಸಂಖ್ಯೆ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ

(1 ರಿಂದ 10 ನೇ ತರಗತಿ)

ಪ್ರತಿ 1 ಲಕ್ಷ ಮಕ್ಕಳಿಗೆ ಇಂಗ್ಲಿಷ ಮಾಧ್ಯಮ ಶಾಲೆಗಳ ಸಂಖ್ಯೆ ಪ್ರತಿ 1 ಆಂಗ್ಲ ಮಾಧ್ಯಮ ಶಾಲೆಗೆ ಒಟ್ಟು ಮಕ್ಕಳ ಸಂಖ್ಯೆ
01 02 03 04 05 06 07
01 ಮೈಸೂರು ಉಡುಪಿ 146 60211 242 412
02 ಮೈಸೂರು ದಕ್ಷಿಣ ಕನ್ನಡ 129 100428 128 779
03 ಬೆಂಗಳೂರು ಶಿವಮೊಗ್ಗ 181 115896 156 640
04 ಮೈಸೂರು ಕೊಡಗು 27 21798 124 807
05 ಧಾರವಾಡ ಉತ್ತರ ಕನ್ನಡ 48 45947 104 957
06 ಮೈಸೂರು ಹಾಸನ 161 86698 186 538
07 ಮೈಸೂರು ಮೈಸೂರು 126 152401 83 1207
08 ಧಾರವಾಡ ಸಿರಸಿ 57 7016 81 1237
09 ಬೆಂಗಳೂರು ಬೆಂಗಳೂರು ಗ್ರಾಮಿಣ 82 58525 140 714
10 ಮೈಸೂರು ಚಿಕ್ಕಮಗಳೂರು 122 61945 197 508

10 ನೇ ತರಗತಿಯ ಪರೀಕ್ಷೆಯಲ್ಲಿ ಜಿಲ್ಲೆಯ ಸ್ಥಾನ

 

ವಿಭಾಗದ ಹೆಸರು ಜಿಲ್ಲೆಯ ಹೆಸರು ಒಟ್ಟು ಶಾಲೆಗಳ ಸಂಖ್ಯೆ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ

(1 ರಿಂದ 10 ನೇ ತರಗತಿ)

ಪ್ರತಿ 1 ಲಕ್ಷ ಮಕ್ಕಳಿಗೆ ಇಂಗ್ಲಿಷ ಮಾಧ್ಯಮ ಶಾಲೆಗಳ ಸಂಖ್ಯೆ ಪ್ರತಿ 1 ಆಂಗ್ಲ ಮಾಧ್ಯಮ ಶಾಲೆಗೆ ಒಟ್ಟು ಮಕ್ಕಳ ಸಂಖ್ಯೆ
01 02 03 04 05 06 07
01 ಬೆಂಗಳೂರು ರಾಮನಗರ 85 56473 151 664
02 ಕಲಬುರಗಿ ವಿಜಯನಗರ 44 151381 29 3440
03 ಕಲಬುರಗಿ ಬಳ್ಳಾರಿ 40 136227 29 3406
04 ಧಾರವಾಡ ಬೆಳಗಾವಿ 64 197001 32 3078
05 ಬೆಂಗಳೂರು ಮಧುಗಿರಿ 77 68212 113 3078
06 ಕಲಬುರಗಿ ರಾಯಚೂರು 76 261576 29 3442
07 ಕಲಬುರಗಿ ಕೊಪ್ಪಳ 51 197056 26 3864
08 ಕಲಬುರಗಿ ಬೀದರ 53 119359 44 2252
09 ಕಲಬುರಗಿ ಕಲಬುರಗಿ 96 248982 39 2594
10 ಕಲಬುರಗಿ ಯಾದಗಿರಿ 58 171203 94 2952

ಎಸ್.ಎಸ್. ಎಲ್.ಸಿ ಫಲಿತಾಂಶದಲ್ಲಿ  ಮೊದಲ 10 ಸ್ಥಾನಗಳನ್ನು ಪಡೆದ ಜಿಲ್ಲೆಗಳನ್ನು ಗಮನಿಸಲಾದಲ್ಲಿ, ಶಿರಸಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ ಮಿಕ್ಕೆಲಾ ಜಿಲ್ಲೆಗಳು ಮೈಸೂರು ಹಾಗೂ ಬೆಂಗಳೂರು ವಿಭಾಗದ ಜಿಲ್ಲೆಗಳಾಗಿವೆ. ಸದರಿ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ ಮೇಲೆ ಅವಲಂಭಿತರಾಗಿರುವಂತಹ ಪ್ರತಿ ಒಂದು ಲಕ್ಷ ಸರ್ಕಾರಿ ವಿದ್ಯಾರ್ಥಿಗಳಿಗೆ ಕನಿಷ್ಠ 100 ಹಾಗೂ ಗರಿಷ್ಠ 200 ಸರ್ಕಾರಿ ಶಾಲೆಗಳು ದ್ವಿಭಾಷಾ ಬೋಧನೆಯನ್ನು ಮಾಡುತ್ತಾ ಸೇವೆ ಗೈಯುತ್ತಿರುತ್ತವೆ. ಮುಂದುವರೆದು, ಪ್ರತಿ ದ್ವಿಭಾಷಾ ಸರ್ಕಾರಿ ಶಾಲೆಯು ಅಂದಾಜು 600 ರಿಂದ 700 ರಷ್ಟು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ದ್ವಿಭಾಷೆಯಲ್ಲಿ ಬೋಧನೆಯನ್ನು ಮಾಡುತ್ತಿರುತ್ತವೆ ಎಂಬುವುದು ಸಮಾಧಾನಕರ ವಿಷಯವಾಗಿದೆ.

ಆದರೆ, ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕಡೆಯ ಸ್ಥಾನ ಪಡೆದಂತಹ 10 ಜಿಲ್ಲೆಗಳಲ್ಲಿ, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಸ್ಥಾನ ಪಡೆದಿರುತ್ತವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವಂತಹ ಪ್ರತಿ ಒಂದು ಲಕ್ಷ ವಿದ್ಯಾರ್ಥಿಗಳಿಗೆ ದ್ವಿಭಾಷೆಯಲ್ಲಿ ಬೋಧನೆ ಮಾಡುತ್ತಿರುವ ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಗಳು 40ಕ್ಕೂ ಕಡಿಮೆ ಇರುವ ವಿಷಯ ಗಂಭೀರವಾಗಿದೆ. ಒಟ್ಟಾರೆ, ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಿಲ್ಲಿರುವಂತಹ ಪ್ರತಿ ದ್ವಿಭಾಷಾ ಬೋಧಿಸುವ ಸರ್ಕಾರಿ ಶಾಲೆಯ ಮೇಲೆ 2 ಸಾವಿರ ದಿಂದ 4 ಸಾವಿರದಷ್ಟು ಮಕ್ಕಳು ಅವಲಂಭಿತರಾಗಿರುವುದು ಕೂಡ ಗಮನಾರ್ಹ.

ರಾಜ್ಯದ ಎಸ್‌.ಎಸ್.ಎಲ್.ಸಿ ಫಲಿತಾಂಶದ ಮೊದಲ 10 ಜಿಲ್ಲೆಗಳು ಹಾಗೂ ಕಡೆಯ 10 ಜಿಲ್ಲೆಗಳ ಅಂಕಿ ಅಂಶಗಳು ಕಲ್ಯಾಣ ಕರ್ನಾಟಕದ ಶೈಕ್ಷಣಿಕ ರಂಗದಲ್ಲಿ ಅತಿ ಅವಶ್ಯಕವಿರುವ ಕ್ರಮಗಳ ಕುರಿತಾಗಿ ತಿಳಿಸುತ್ತವೆ, ಇದರಲ್ಲಿ ಒಂದು ಮುಖ್ಯ ಕ್ರಮ ದ್ವಿಭಾಷಾ ಬೋಧನೆಯು ಸಹ ಆಗಿದೆ. ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ ಯಾವ ರೀತಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಪಡೆಯಲು ವಿದ್ಯಾರ್ಥಿಗಳಿಗೆ  ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆಯೋ, ಅದರಂತೆ ಕಲ್ಯಾಣ ಕರ್ನಾಟಕ ವಿಭಾಗದ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ನೀಡಲು  ಈ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ) ತರಗತಿಗಳು ಸಹಕಾರಿಯಾಗಲಿವೆ.

BIG NEWS: ‘ನಟ ದರ್ಶನ್‍’ಗೆ ಮತ್ತಷ್ಟು ಸಂಕಷ್ಟ: ರೇಣುಕಾಸ್ವಾಮಿ ಹತ್ಯೆ ದಿನ ಧರಿಸಿದ್ದ ಬಟ್ಟೆ, ಶೂ ಸೀಜ್ | Actor Darshan

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ಕೇಂದ್ರ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

Share. Facebook Twitter LinkedIn WhatsApp Email

Related Posts

ನಿಮ್ಮ ಗೃಹಸ್ಥ ಜೀವನ ಸಮೃದ್ಧವಾಗಲು, ಕುಟುಂಬದಲ್ಲಿ ಸಂತೋಷವು ಉಂಟಾಗಲು ಈ ಪರಿಹಾರ ಮಾಡಿ

22/05/2025 9:18 AM3 Mins Read
vidhana soudha

BIG NEWS : ರಾಜ್ಯಾದ್ಯಂತ ಭಾರಿ ಮಳೆ : ರಾಜ್ಯ ಸರ್ಕಾರದಿಂದ `ಗ್ರಾಮೀಣ ಭಾಗದ ಜನರಿಗೆ’ ಮಹತ್ವದ ಪ್ರಕಟಣೆ.!

22/05/2025 9:15 AM1 Min Read

Rain alert Karnataka : ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ : ಈ ಜಿಲ್ಲೆಗಳಿಗೆ `ರೆಡ್-ಆರೆಂಜ್’ ಅಲರ್ಟ್ ಘೋಷಣೆ.!

22/05/2025 9:04 AM1 Min Read
Recent News

ನಿಮ್ಮ ಗೃಹಸ್ಥ ಜೀವನ ಸಮೃದ್ಧವಾಗಲು, ಕುಟುಂಬದಲ್ಲಿ ಸಂತೋಷವು ಉಂಟಾಗಲು ಈ ಪರಿಹಾರ ಮಾಡಿ

22/05/2025 9:18 AM
vidhana soudha

BIG NEWS : ರಾಜ್ಯಾದ್ಯಂತ ಭಾರಿ ಮಳೆ : ರಾಜ್ಯ ಸರ್ಕಾರದಿಂದ `ಗ್ರಾಮೀಣ ಭಾಗದ ಜನರಿಗೆ’ ಮಹತ್ವದ ಪ್ರಕಟಣೆ.!

22/05/2025 9:15 AM

BREAKING: ವಾಷಿಂಗ್ಟನ್ ಡಿಸಿಯಲ್ಲಿ ಇಬ್ಬರು ಇಸ್ರೇಲಿ ರಾಯಭಾರ ಕಚೇರಿ ಅಧಿಕಾರಿಗಳ ಹತ್ಯೆ

22/05/2025 9:12 AM

BIG NEWS : ಸೆಕ್ಷನ್ 377 ರ ಅಡಿಯಲ್ಲಿ ವೈವಾಹಿಕ ಅತ್ಯಾಚಾರಕ್ಕೆ ಅವಕಾಶವಿಲ್ಲ: `ಅಸ್ವಾಭಾವಿಕ ಲೈಂಗಿಕತೆ’ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು.!

22/05/2025 9:12 AM
State News
KARNATAKA

ನಿಮ್ಮ ಗೃಹಸ್ಥ ಜೀವನ ಸಮೃದ್ಧವಾಗಲು, ಕುಟುಂಬದಲ್ಲಿ ಸಂತೋಷವು ಉಂಟಾಗಲು ಈ ಪರಿಹಾರ ಮಾಡಿ

By kannadanewsnow0922/05/2025 9:18 AM KARNATAKA 3 Mins Read

ಗುರುಗಳನ್ನು ನೋಡುವುದು ಬಹಳ ಪ್ರಯೋಜನ ಎಂದು ಅವರು ಹೇಳುತ್ತಾರೆ. ಆ ಗುರು ಭಗವಾನ್ ಒಂದು ನಿಮಿಷ ನಮ್ಮನ್ನು ನೋಡಿದರೆ ಸಾಕು.…

vidhana soudha

BIG NEWS : ರಾಜ್ಯಾದ್ಯಂತ ಭಾರಿ ಮಳೆ : ರಾಜ್ಯ ಸರ್ಕಾರದಿಂದ `ಗ್ರಾಮೀಣ ಭಾಗದ ಜನರಿಗೆ’ ಮಹತ್ವದ ಪ್ರಕಟಣೆ.!

22/05/2025 9:15 AM

Rain alert Karnataka : ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ : ಈ ಜಿಲ್ಲೆಗಳಿಗೆ `ರೆಡ್-ಆರೆಂಜ್’ ಅಲರ್ಟ್ ಘೋಷಣೆ.!

22/05/2025 9:04 AM

‘ಕನ್ನಡ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬೇಡಿ’: ತೇಜಸ್ವಿ ಸೂರ್ಯ ವಿರುದ್ಧ ಸೋನು ನಿಗಮ್ ವಾಗ್ದಾಳಿ

22/05/2025 8:37 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.