ಬೆಂಗಳೂರು: ಯುವ ರಾಜ ಕುಮಾರ ಹಾಗೂ ಶ್ರೀದೇವಿ ಭೈರಪ್ಪ ದಾಂಪತ್ಯದಲ್ಲಿ ಬಿರುಕು ಕಂಡಿತ್ತು. ವಿವಾಹ ವಿಚ್ಛೇದನ ನೀಡುವಂತೆ ಯುವ ರಾಜಕುಮಾರ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಬೆನ್ನಲ್ಲೇ ಅವರ ಪತ್ನಿ ಶ್ರೀದೇವಿ ಭೈರಪ್ಪ, ನಟಿ ಸಪ್ತಮಿ ಗೌಡ ಜೊತೆಗೆ ಯುವ ರಾಜಕುಮಾರ ಸಂಬಂಧ ಹೊಂದಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆ ನೀಡದಂತೆ ಕೋರ್ಟ್ ನಿರ್ಬಂಧಕಾಜ್ಞೆ ನೀಡಿದೆ.
ಯುವ ರಾಜಕುಮಾರ ವಿವಾಹ ವಿಚ್ಛೇದನ ಪ್ರಕರಣದಲ್ಲಿ ಪತ್ನಿ ಶ್ರೀದೇವಿ ಭೈರಪ್ಪ ಅವರು ನಟಿ ಸಪ್ತಮಿ ಗೌಡ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೇ ಯುವ ಹಾಗೂ ಸಪ್ತಮಿ ಗೌಡಗೆ ಸಂಬಂಧವಿದೆ. ಅವರಿಬ್ಬರು ಒಟ್ಟಿಗೆ ಓಡಾಡುತ್ತಿದ್ದಾರೆ ಸೇರಿದಂತೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು.
ಶ್ರೀದೇವಿ ಭೈರಪ್ಪ ಅವರ ಅವಹೇಳನಕಾರಿ ಹೇಳಿಕೆ ವಿರುದ್ಧ ನಟಿ ಸಪ್ತಮಿ ಗೌಡ ಕೋರ್ಟ್ ಮೆಟ್ಟಿಲೇರಿದ್ದರು. ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಶ್ರೀದೇವಿ ಭೈರಪ್ಪ ವಿರುದ್ಧ ಮಾನಹಾನಿ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಮಾಡಿದ್ದರು.
ಈ ಅರ್ಜಿಯನ್ನು ಪುರಸ್ಕರಿಸಿದಂತ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್, ಯುವ ರಾಜಕುಮಾರ ಪ್ರಕರಣದಲ್ಲಿ ಇಲ್ಲ ಸಲ್ಲದ ಆರೋಗಳನ್ನು ಹೊರಿಸಿ ಚಾರಿತ್ರಿಕ ವಧೆ ಮಾಡದಂತೆ, ಮಾನಹಾನಿ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ವಿಧಿಸಿ ಆದೇಶಿಸಿದೆ.
ರಾಜ್ಯ ಸರ್ಕಾರದಿಂದ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ: ಶೀಘ್ರವೇ ಹೆಚ್ಚಾಗಲಿದೆ ರೇಟ್