ಮಂಡ್ಯ: ಇಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಬಳಿಕ ಹೆಚ್.ಡಿ ಕುಮಾರಸ್ವಾಮಿ ಮಂಡ್ಯಕ್ಕೆ ಆಗಮಿದರು. ಈ ವೇಳೆಯಲ್ಲಿ ಮೈತ್ರಿ ಕಾರ್ಯಕರ್ತರಿಂದ ಹೆಚ್.ಡಿ ಕುಮಾರಸ್ವಾಮಿಯವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ.
ಮಂಡ್ಯಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಗಮಿಸಿದರು. ಕೇಂದ್ರ ಸಚಿವರಾದ ಬಳಿಕ ಮಂಡ್ಯಕ್ಕೆ ಮೊದಲ ಬಾರಿಗೆ ಭೇಟಿ ನೀಡಿದರು. ಮಂಡ್ಯ ಜಿಲ್ಲೆ ಗಡಿ ಮದ್ದೂರಿನ ನಿಡಘಟ್ಟಕ್ಕೆ ಹೆಚ್.ಡಿ ಕುಮಾರಸ್ವಾಮಿ ಆಗಮಿಸಿದರು.
ಈ ವೇಳೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಪಟಾಕಿ ಸಿಡಿಸಿ, ತಮಟೆ ವಾದ್ಯಗಳ ಮೂಲಕ ಗ್ರ್ಯಾಂಡ್ ವೆಲ್ ಕಮ್ ಮಾಡಲಾಯಿತು. ಅಲ್ಲದೇ ಹೆಚ್.ಡಿಕೆ ಆಗಮಿಸುತ್ತಿದ್ದಂತೆ ಜೈಕಾರದ ಸುರಿಮಳೆಯನ್ನು, ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹೆಚ್ಡಿಕೆಗೆ ಪುತ್ರ ನಿಖಿಲ್, ಜಿ.ಟಿ.ದೇವೇಗೌಡ, ಜಿಲ್ಲೆಯ ಜೆಡಿಎಸ್, ಬಿಜೆಪಿ ನಾಯಕರ ಸಾಥ್ ನೀಡಿದರು. ನಿಡಘಟ್ಟದಿಂದ ಮಂಡ್ಯದ ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು.
ತೆರೆದ ವಾಹನಗಳ ಮುಂದೆ ಸಾಗಿದ ನೂರಾರು ಬೈಕ್ ಗಳು ಸಾಗಿದವು. ಬೈಕ್ ರ್ಯಾಲಿ ಮೂಲಕ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಮಂಡ್ಯದ ಮೈತ್ರಿ ಕಾರ್ಯಕರ್ತರು ಸ್ವಾಗತ ನೀಡಿ, ಅದ್ಧೂರಿಯಾಗಿ ಬರಮಾಡಿಕೊಂಡಿದ್ದು ಗಮನ ಸೆಳೆಯಿತು.
ವರದಿ: ಗಿರೀಶ್ ರಾಜ್, ಮಂಡ್ಯ
BREAKING: ಬೆಂಗಳೂರಲ್ಲಿ ನಮ್ಮ ‘ಮೆಟ್ರೋ ರೈಲು’ ಹಳಿಗಳ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ
ರಾಜ್ಯ ಸರ್ಕಾರದಿಂದ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ: ಶೀಘ್ರವೇ ಹೆಚ್ಚಾಗಲಿದೆ ರೇಟ್