ಬೆಂಗಳೂರು: ನಟ ದರ್ಶನ್ ಮತ್ತು ಸಹಚರರಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ವಾದಿಸೋದಕ್ಕೆ ರಾಜ್ಯ ಸರ್ಕಾರದಿಂದ ಎಸ್ ಪಿಪಿಯಾಗಿ ಪಿ.ಪ್ರಸನ್ನ ಕುಮಾರ್ ನೇಮಕ ಮಾಡಿ ಆದೇಶಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರದಿಂದ ಇಂದು ಆದೇಶ ಹೊರಡಿಸಲಾಗಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಸರ್ಕಾರದ ಪರವಾಗಿ ವಾದಿಸೋದಕ್ಕೆ ಎಸ್ ಪಿಪಿಯಾಗಿ ಪಿ.ಪ್ರಸನ್ನ ಕುಮಾರ್ ನೇಮಕ ಮಾಡಲಾಗಿದೆ ಅಂತ ತಿಳಿಸಿದೆ.
ಇನ್ನೂ ನಟ ದರ್ಶನ್ ಅಂಡ್ ಗ್ಯಾಂಗ್ ಅನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಸಿದ ನಂತ್ರ, ಕೋರ್ಟ್ ಗೆ ಹಾಜರುವಡಿಸಿ ಇಂದಿನವರೆಗೆ ಪಡೆಯಲಾಗಿತ್ತು. ಈ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸೋದಕ್ಕೆ ಪೊಲೀಸರು ಸಿದ್ಧತೆ ಕೈಗೊಂಡಿದ್ದಾರೆ.
ಭಾರತದಲ್ಲಿ ಈ ಆಹಾರಗಳ ಸೇವನೆ ನಿಷೇಧ : ಇಲ್ಲಿದೆ ನೋಡಿ ʻFSSAIʼ ನ ನಿಷೇಧಿತ ಆಹಾರಗಳ ಪಟ್ಟಿ | Banned Foods