ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಜೂನ್ 15, 16 ರಂದು ಎರಡು ದಿನ ವಿದ್ಯುತ್ ಕಡಿತ ಘೋಷಿಸಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಬೆಂಗಳೂರು ಬೆಳಗ್ಗೆ 10ರಿಂದ ಮಧ್ಯಾಹ್ನ 5 ರವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವನ್ನು ಘೋಷಿಸಿವೆ.
ಜೂನ್ 15 ರ ಇಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಬಾಪೂಜಿನಗರ, ಕವಿಕಾ ಲೇಔಟ್, ಬ್ಯಾಟರಾಯನಪುರ ಐಯ್ಯಣ್ಣಶೆಟ್ಟಿ ಬಡಾವಣೆ, ಗಣಪತಿನಗರ, ಪ್ರೈಡ್ ಅಪಾರ್ಟ್‌ಮೆಂಟ್, ದೀಪಾಂಜಲಿನಗರ, ಪಟೇಲ್ ಪುಟ್ಟಯ್ಯ ಕೈಗಾರಿಕಾ ಪ್ರದೇಶ, ಬಿಎಚ್‌ಇಎಲ್, ಮುತ್ತಾಚಾರಿ ಕೈಗಾರಿಕಾ ಪ್ರದೇಶ, ಜ್ಯೋತಿನಗರ, ಗಂಗೊಂಡನಹಳ್ಳಿ, ಅಜಿತ್ ಸೇರ್ ಕೈಗಾರಿಕಾ ಪ್ರದೇಶ, ವಿನಾಯಕ ಬಡಾವಣೆ, ಮೆಟ್ರೋ ಲೇಔಟ್, ನಾಯಂಡಹಳ್ಳಿ, ಬ್ಯಾಟರಾಯನಪುರ, ಮೈಸೂರು ರಸ್ತೆ, ಶೋಭಾ ಟೆಂಟ್ ರೋಡ್, ಗುಡ್ಡದಹಳ್ಳಿ ಎಕ್ಸ್‌ಟೆನ್ನನ್, ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್, ಆರ್.ಆರ್.ನಗರ ಸುತ್ತಮುತ್ತ ವಿದ್ಯುತ್ ಕಡಿತವಾಗಲಿದೆ.
ಜೂ.16ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಜೂ.16ರಂದು ತಾವರೆಕೆರೆ ಉಪ ವಿಭಾಗ ವ್ಯಾಪ್ತಿಯ ಚಂದ್ರಪ್ಪ ಸರ್ಕಲ್ ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ 10 ಗಂಟೆಯಿಂದ 5 ಗಂಟೆವರೆಗೆ ಚಿಕ್ಕನಹಳ್ಳಿ, ಸೂಲಿವಾರ, ಗೊಲ್ಲಹಳ್ಳಿ, ಚಂದ್ರಪ್ಪ ಸರ್ಕಲ್, ಹುಲವೇನಹಳ್ಳಿ, ಮಾದಾಪಟ್ಟಣ ಸುತ್ತಮುತ್ತಲಿನ ಪ್ರದೇಶ ಕುರುಬರಪಾಳ್ಯ ಮತ್ತು ಸುತ್ತಮುತ್ತಲಿನ ಜೆಲ್ಲಿ ಕ್ರಷರ್, ಪೀಣ್ಯ ಕೇಂದ್ರದಲ್ಲಿ ಫೀಡರ್‌ಗಳ ನಿರ್ವಹಣೆ ಹಿನ್ನೆಲೆಯಲ್ಲಿ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಎಚ್‌ಎಂಟಿ ರಸ್ತೆ, ಆರ್ ಅಪಾರ್ಟ್‌ಮೆಂಟ್, ಬೋರ್ ಲಿಂಗಪ್ಪ ಗಾರ್ಡನ್, ಪೀಣ್ಯ ಪೊಲೀಸ್ ಠಾಣೆ ರಸ್ತೆ, ಟೆಲಿಫೋನ್ ಎಕ್ಸ್‌ಚೇಂಜ್, ವೈಷ್ಣವಿ ಮಾಲ್, ಕಾವೇರಿ ಮಾಲ್, ಗಣಪತಿನಗರ ಮುಖ್ಯರಸ್ತೆ, ಕೆಎಚ್‌ಬಿ ಬಡಾವಣೆ, ರಾಜೇ ಶ್ವರಿನಗರ, ಭೈರೇಶ್ವರನಗರ, ರಾಜಗೊ ಪಾಲನಗರ, ಕಸ್ತೂರಿ ಬಡಾವಣೆ,ಇಎಸ್‌ಐ ಆಸ್ಪತ್ರೆ, ಜಿಕೆಡಬ್‌ಲ್ಯೂ ಬಡಾವಣೆಯಲ್ಲಿ ವ್ಯತ್ಯಯ ಉಂಟಾಗಲಿದೆ