ನವದೆಹಲಿ: ಬಹುತೇಕರು ಎರಡು ಇಲ್ಲವೇ ಅದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಗಳನ್ನು ಬಳಕೆ ಮಾಡುತ್ತಿರುತ್ತಾರೆ. ಹೀಗೆ ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಬಳಕೆ ಮಾಡೋರಿಗೆ ಬಳಕೆದಾರರ ಶುಲ್ಕವನ್ನು ಟ್ರಾಯ್ಡ್ ವಿಧಿಸಲಿದೆ ಎಂಬುದಾಗಿ ಸುದ್ದಿಯೊಂದು ಹರಿದಾಡುತ್ತಿತ್ತು. ಅದರ ಅಸಲಿ ಸತ್ಯ ಏನು ಅಂತ ಮುಂದೆ ಓದಿ.
ಅನೇಕರು ಎರಡು ಮೊಬೈಲ್ ಗಳನ್ನು ಬಳಕೆ ಮಾಡುತ್ತಿರುತ್ತಾರೆ. ಒಂದೊಂದರಲ್ಲಿ ಎರಡು ಎರಡು ಸಿಮ್ ಕಾರ್ಡ್ ಅಂದ್ರೂ ನಾಲ್ಕು ಸಿಮ್ ಕಾರ್ಡ್ ಬಳಕೆ ಮಾಡೋರು ಇದ್ದಾರೆ. ಇನ್ನೂ ಕೆಲವರು ಇದಕ್ಕಿಂತ ಹೆಚ್ಚು ಮಾಡುತ್ತಲೂ ಇರಬಹುದು. ಆದ್ರೇ ಇವರಿಗೆ ಆತಂಕ ಹುಟ್ಟಿಸಿದ್ದು, ಇನ್ಮೇಲೆ ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಬಳಕೆ ಮಾಡೋರಿಗೆ ಬಳಕೆದಾರರ ಶುಲ್ಕ ವಿಧಿಸುತ್ತೆ ಟ್ರಾಯ್ಡ್ ಎಂಬುದಾಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿ, ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದವರು ಆತಂಕ, ಗಾಬರಿಗೂ ಕಾರಣವಾಗಿತ್ತು. ಅಯ್ಯೋ ಇದೇನಪ್ಪ ಈಗಾಗಲೇ ಕರೆನ್ಸಿ ಹಾಕಿಸೋದಕ್ಕೆ ಕಷ್ಟವಾಗಿದೆ. ಇದರ ನಡುವೆ ಈ ಶುಲ್ಕ ವಿಧಿಸುತ್ತಿರುವಂತ ಸುದ್ದಿ ಓದಿ, ಶಾಕ್ ಆಗಿದ್ದರು. ಆದ್ರೇ ಈ ಬಗ್ಗೆ ಟ್ರಾಯ್ಡ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಏನು ಹೇಳಿದೆ ಅಂತ ಮುಂದಿದೆ ನೋಡಿ.
ಅನೇಕ ಸಿಮ್ ಗಳು / ಸಂಖ್ಯೆಯ ಸಂಪನ್ಮೂಲಗಳನ್ನು ಹೊಂದಿರುವ ಗ್ರಾಹಕರ ಮೇಲೆ ಶುಲ್ಕ ವಿಧಿಸಲು ಟ್ರಾಯ್ ಉದ್ದೇಶಿಸಿದೆ ಎಂಬ ಊಹಾಪೋಹವು ನಿಸ್ಸಂದಿಗ್ಧವಾಗಿ ಸುಳ್ಳು. ಇಂತಹ ಹೇಳಿಕೆಗಳು ಆಧಾರರಹಿತವಾಗಿವೆ ಮತ್ತು ಸಾರ್ವಜನಿಕರನ್ನು ದಾರಿತಪ್ಪಿಸುವಂತ ಸುದ್ದಿ ಇದಾಗಿದೆ. ಯಾರೂ ಆತಂಕ, ಗಾಬರಿಗೆ ಒಳಗಾಗಬಾರದು. ಇಂತಹ ಯಾವುದೇ ನಿರ್ಧಾರವನ್ನು ಟ್ರಾಯ್ಡ್ ಮಾಡಿಲ್ಲ ಅಂತ ಸ್ಪಷ್ಟ ಪಡಿಸಿದೆ.
The speculation that TRAI intends to impose charges on customers for holding multiple SIMs/ numbering resources is unequivocally false. Such claims are unfounded and serve only to mislead the public.
— TRAI (@TRAI) June 14, 2024
ರೈತರೇ ನಿಮ್ಮ ಬೆಳೆಗೆ ‘ಸೈನಿಕ ಹುಳು’ ಬಾಧೆಯೇ? ಜಸ್ಟ್ ಈ ನಿಯಂತ್ರಣ ಕ್ರಮವಹಿಸಿ