ಚಿತ್ರದುರ್ಗ: ನಿನ್ನೆಯಷ್ಟೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ8ನೇ ಆರೋಪಿಯಾಗಿದ್ದಂತವರೊಬ್ಬರು ಡಿವೈಎಸ್ಪಿ ಕಚೇರಿಗೆ ತೆರಳಿ ಶರಣಾಗಿದ್ದರು. ಈ ಬೆನ್ನಲ್ಲೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿ ತಲೆ ಮರೆಸಿಕೊಂಡಿದ್ದಂತ ಮತ್ತಿಬ್ಬರನ್ನು ಚಿತ್ರದುರ್ಗದ ಡಿವೈಎಸ್ಪಿ, ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಎಡೆಮುರಿಕಟ್ಟಿ ಬಂದಿಸಿದ್ದಾರೆ.
ಇಂದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ.6 ಆರೋಪಿಯಾಗಿದ್ದಂತ ಜಗ್ಗ ಆಲಿಯಾಸ್ ಜಗದೀಶ್ ಹಾಗೂ ಎ.7 ಆರೋಪಿಯಾಗಿದ್ದಂತ ಅನಿ ಆಲಿಯಾಸ್ ಅನಿಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇವರನ್ನು ಚಿತ್ರದುರ್ಗ ನಗರದಿಂದ ಬಂಧಿಸಲಾಗಿದ್ದು, ಆ ನಂತ್ರ ಬೆಂಗಳೂರಿಗೆ ಕರೆದೊಯ್ಯುತ್ತಿರೋದಾಗಿ ತಿಳಿದು ಬಂದಿದೆ.
BREAKING: ಕೇಂದ್ರ ಸಚಿವ ‘ವಿ.ಸೋಮಣ್ಣ’ ಪುತ್ರ ಅರುಣ್ ವಿರುದ್ದ FIR ದಾಖಲು
ಗಮನಿಸಿ: ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಂದ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ