ಬೆಂಗಳೂರು: ಕೇಂದ್ರ ಸಚಿವರಾದಂತ ವಿ.ಸೋಮಣ್ಣ ಪುತ್ರ ಅರುಣ್ ಸೋಮಣ್ಣ ವಿರುದ್ಧ 420 ಕೇಸ್ ದಾಖಲಾಗಿದೆ. ಈ ಮೂಲಕ ಕೇಂದ್ರ ಸಚಿವ ವಿ.ಸೋಮಣ್ಣ ಪುತ್ರನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹೌದು ಕೇಂದ್ರ ಸಚಿವ ಸೋಮಣ್ಣ ಪುತ್ರನ ಮೇಲೆ ಎಫ್‌ಐಆರ್ ದಾಖಲಾಗಿದೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ಅರುಣ್ ಸೋಮಣ್ಣ ಸೇರಿ ಮೂವರ ಮೇಲೆ ಪ್ರಕರಣ ದಾಖಲಾಗಿದೆ.
ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ವ್ಯವಹಾರದಲ್ಲಿ ದಂಪತಿಗೆ ವಂಚನೆ, ಜೀವ ಬೆದರಿಕೆ ಹಾಕಿರುವ ಗಂಭೀರ ಆರೋಪ ಮಾಡಲಾಗಿದೆ. ಈ ಸಂಬಂಧ ಅರುಣ್ ಸೋಮಣ್ಣ, ಜೀವನ್ ಕುಮಾರ್ ಮತ್ತು ಪ್ರಮೋದ್ ರಾವ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಏನಿದು ಪ್ರಕರಣ?
ನ್ಯಾಯಾಲಯದ ಕರ್ತವ್ಯ ಸಿಬ್ಬಂದಿ ಪಿಸಿ 14233 ರವರು ಠಾಣೆಗೆ ಹಾಜರಾಗಿ ನೀಡಿದ ಪಿ.ಸಿ.ಆರ್ ನಂ 6013/2024 ರ ದೂರಿನ ಸಾರಾಂಶವೆನೆಂದರೆ, ದೂರುದಾರರಾದ ತೃಪ್ತಿ ಮತ್ತು ಆಕೆಯ ಗಂಡ ಮಧ್ವರಾಜ್ ರವರು ಇವೆಂಟ್ ಮ್ಯಾನೇಜ್ ಮೆಂಟ್ ಕೆಲಸವನ್ನು ಮಾಡಿಕೊಂಡಿದ್ದು, 2013 ರಲ್ಲಿ ದೂರುದಾರರ ಪತಿಯು ನಡೆಸುತ್ತಿದ್ದ ವೆಂಟ್ ಮ್ಯಾನೇಜ್ ಮೆಂಟ್ ವ್ಯವಹಾರಕ್ಕೆ ಅರುಣ್ ಎಂಬಾತನು ನಾನು ವೃತ್ತಿಯಲ್ಲಿ ವೈದ್ಯ ಅಲ್ಲದೇ ವಿ.ಸೋಮಣ್ಯ ಎಂ.ಎಲ್.ಎ ರವರ ಮಗನೆಂದು ಪರಿಚಯ ಮಾಡಿಕೊಂಡಿರುತ್ತಾನೆ, ಅಲ್ಲದೇ ನನ್ನ ತಂದೆ ಕರ್ನಾಟಕ ರಾಜ್ಯದ ಪಕ್ಷಗಳೊಂದಿಗೆ ಉತ್ತಮ ಸಂಪರ್ಕವನ್ನಿಟ್ಟುಕೊಂಡಿದ್ದು, ಅಲ್ಲಿ ನಡೆಸಿದ ಕಾರ್ಯಕ್ರಮಗಳಿಗೆ ನಾನು ಭೇಟಿ ನಿಡಿದು, ದೂರುದಾರರ ಪತಿ ಅಯೋಜಿಸಿದ್ದ ಕಾರ್ಯಕ್ರಮಗಳ ಬಗ್ಗೆ ಪ್ರಭಾವಿತರಾಗಿದ್ದು ಅಲ್ಲದೇ ಒಳ್ಳೆಯ ಹೆಸರುಗಳು ಹೊಂದಿರುವ ಬಗ್ಗೆ ತಿಳಿಸಿದರು, ಈಗಿರುವಾಗ್ಗೆ 2017 ರಲ್ಲಿ ಅರುಣ್ ರವರ ಮಗಳ ಹುಟ್ಟುಹಬ್ಬವನ್ನು ಹೊಟೇಲ್ ಒಂದರಲ್ಲಿ ಆಯೋಜಿಸಿದ್ದು, ಕಾರ್ಯಕ್ರಮವನ್ನು ನಡೆಸಿಕೊಡುವಂತೆ ದೂರುದಾರರ ಪತಿಗೆ ವಹಿಸಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಕ್ಕೆ ಎಲಾರಿಂದಲೂ ಪ್ರಶಂಸೆ ಪಡೆದಿದ್ದಕ್ಕೆ ಅರುಣ್ ತನ್ನ ಇತರೆ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಕಾರ್ಯಕ್ರಮಗಳ ಅಯೋಜನೆಯ ಕೆಲಸವನ್ನು ದೂರುದಾರರ ಪತಿಗೆ ವಹಿಸಿಕೊಡಲಾಗಿಯು ನಂತರ ಅರುಣ್ ದೂರುದಾರರ ಪತಿ ರವರ ಕಾರ್ಯ ವೈಖರಿಯನ್ನು ಮೆಚ್ಚಿ ಆತನೊಂದಿಗೆ ವ್ಯವಹಾರವನ್ನು ನಡೆಸಲು ಮುಂದಾಗಿದೆ.
ಇಬ್ಬರು ಸೇರಿ ವ್ಯವಹಾರವನ್ನು ಪ್ರಾರಂಭಿಸಿದ್ದು, ಮೊದಲು ಯಾವುದೇ ಹಣದ ಹೂಡಿಕೆ ಬೇಡ ಕೇವಲ ತಿಳುವಳಿಕೆ ಮತ್ತು ಸ್ಕಿಲ್ ನನ್ನು ತಿಳಿಸುವಂತೆ ಹೇಳಿ ನೈಬರ್ ಹುಡ್ ಎಂಬ ಕಂಪನಿಯನ್ನು ಷರತ್ತುಗಳ ಮೇರೆಗೆ 30% ರಷ್ಟು ಹಣವನ್ನು ಹೂಡಿಕೆ ಮಾಡಿ ಪಾಲುದಾರನಾಗಿ ಒಪ್ಪಂದ ಪತ್ರಗಳನ್ನು (partnership deed) ಹಾಗೂ ಲೀವ್ & ಲೀಚ್ ಆಗ್ರಿಮೆಂಟ್ ನನ್ನು ದಿನಾಂಕ:-21/02/2019 ರಂದು ಮಾಡಿಕೊಂಡು ಸಹಿಯನ್ನು ಪಡೆದು ಕಂಪನಿಯನ್ನು ಪ್ರಾರಂಭಿಸಿದರು. ನೈಬರ್ ಹುಡ್ ಕಂಪನಿಯ ಹಾಗೂ ಬ್ಯಾಂಕಿಗೆ ಸಂಬಂದಪಟ್ಟ ಹೂಡಿಕೆಗಳು, ಪಾವತಿ ಮತ್ತು ಸಂಗ್ರಹಣೆಯ ಸಂಪೂರ್ಣ ಜವಾಬ್ದಾರಿ ಅರುಣ್ ರವರೇ ವಹಿಸಿಕೊಂಡಿದ್ದರು.
ಕಂಪನಿಯ ಒಪ್ಪಂದದಂತೆ ಸರಿಯಾದ ಸಮಯದಲ್ಲಿ ಪ್ರಗತಿಯನ್ನು ಸಾಧಿಸಲು ಮತ್ತು ಯೋಜನೆಯನ್ನು ಪೂರ್ಣಗಳೊಸಲು ಸಾಧ್ಯವಾಗಲಿಲ್ಲದ ಪಕ್ಷದಲ್ಲಿ ದೂರುದಾರರ ಪತಿ ಅರುಣ್ ರವರ ಬಳಿ ವ್ಯವಹಾರದ ಕುರಿತು ಕೇಳಲಾಗಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿರುವುದಿಲ್ಲ, ನಂತರ ದೂರುದಾರರಾದ ತೃಪ್ತಿ ರವರು ಮತ್ತು ಪತಿ ಇಬ್ಬರು ಕಂಪನಿಗೆ ಹೋದಾಗ ಅರುಣ್ ಕಂಪನಿಯ ಕೆಲಸಗಾರರ ಮುಂದೆ ಅವಾಚ್ಯ ಶಬ್ದಗಳಿಂದ ಬೈದು ಅವಮಾನ ಮಾಡಿ ಕಂಪನಿಯ ಪಾಲುದಾರಕ್ಕೆ ರಿಸೈನ್ ಮಾಡುವಂತೆ ಒತ್ತಾಯಿಸಿ ಅವಮಾನ ಮಾಡಿರುತ್ತಾರೆ, ವಹಿಸಿಕೊಂಡಿರುವ ಕೆಲಸಗಳನ್ನು ಪೂರ್ಣಗೊಳಿಸಲು ಜಯಪ್ರಕಾಶ್ ಎಂಬುವವರ ಮೂಲಕ ಹೊಸದಾಗಿ ಕಂಪನಿಯಲ್ಲಿ ಕೆಲಸಗಳನ್ನು ಶುರು ಮಾಡಿದ್ದು, ದೂರುದಾರರ ಪತಿಯ ಲಾಭದ ಶೇರ್ ಪ್ರಮಾಣವನ್ನು 30% ರಿಂದ 10% ಗೆ ಇಳಿಕೆ ಮಾಡಿರುತ್ತಾರೆ.
ಅಲ್ಲದೇ ಸರಿಯಾದ ಸಮಯದಲ್ಲಿ ಕೆಲಸವನ್ನು ಪೂರ್ಣಗೊಳಿಸಲು ಆದರೆ ಕಂಪನಿಯ ಕೆಲಸಗಾರರಿಗೆ, ಸಿಬ್ಬಂದಿಗಳಿಗೆ ಯಾವುದೇ ರೀತಿಯ ಸಂಬಳವನ್ನು ನೀಡಿರುವುದಿಲ್ಲ, ಈ ಎಲ್ಲಾ ಕಾರಣಗಳಿಂದ ಮಧ್ವರಾಜ್ ರವರೇ ತಮ್ಮ ಸ್ವಂತ ಹಣದಿಂದ ಸಂಬಳವನ್ನು ನೀಡಿರುತ್ತಾರೆ, ನಂತರದ ದಿನಗಳಲ್ಲಿ ಅರುಣ್ ನೈಬರ್ ಹುಡ್ ಕಂಪನಿಯನ್ನು ಸಂಪೂರ್ಣ ತನ್ನ ವಶಕ್ಕೆ ಪಡೆದುಕೊಳ್ಳುವ ಸಲುವಾಗಿ ಕಂಪನಿಯು ಇರುವ ಜಾಗದ ಮಾಲೀಕರನ್ನು ಸಂಪರ್ಕಿಸಿ ಲೀಸ್ ಆಗ್ರಿಮೆಂಟ್ ನನ್ನು ಆತನ ಹೆಸರಿಗೆ ವರ್ಗಾಯಿಸುವಂತೆ ಕೋರಿದ್ದು, ಭೂ ಮಾಲೀಕರು ಆದನ್ನು ಕಂಪನಿಯ ಮಾಲೀಕರ ಅನುಮತಿ ಇಲ್ಲದೇ ವರ್ಗಾಯಿಸಲು ಸಾಧ್ಯವಿಲ್ಲವೆಂದು ತಿಳಿಸಿದ ಮೇರೆಗೆ ಲೀಚ್ ಹಣವನ್ನು ಭೂ ಮಾಲೀಕರಿಗೆ ಕೊಡಲು ನಿಲಿಸಿರುತ್ತಾನೆ, ಮತ್ತು ದೂರುದಾರರು ಹಾಗೂ ಅವರ ಪತಿ ಕಂಪನಿಯ ಯೋಜನೆಗಳ ಮೇಲೆ ಹೂಡಿಕೆಯನ್ನು ಮಾಡುವುದು ನಿಲ್ಲಿಸಿರುವುದರಿಂದ ಕೆಲಸಗಳು ವಿಳಂಬವಾಗುತ್ತಿವೆ ಎಂದು ಉದ್ದೇಶ ಪೂರ್ವಕವಾಗಿ ಎಲ್ಲಾ ತಪ್ಪುಗಳನ್ನು ಅವರ ಮೇಲೆ ಒರೆಸಿ ಸುಳ್ಳು ವದಂತಿಗಳನ್ನು ಹಬ್ಬಿಸಿರುತ್ತಾರೆ. ಈ ಎಲ್ಲಾ ಕಾರಣಗಳಿಂದ ದೂರುದಾರರಾದ ತೃಪ್ತಿ ಮತ್ತು ಆಕೆಯ ಗಂಡ ರವರು ಕಂಪನಿಯ ಪಾಲುದಾರರಿಂದ ಹೊರಬರಲು ಮುಂದಾಗಿ ಅರುಣ್ ರವರೊಂದಿಗೆ ಮಾತನಾಡಿದಾಗ ಕಂಪನಿಯಿಂದ ಹೊರ ಹೋಗಬೇಕಾದರೆ ಕಂಪನಿಯ ಶೇರ್ ಗಳನ್ನು ಖರೀದಿಸುವಂತೆ ಸೂಚಿಸಿದ್ದು, ಹಣವಿಲ್ಲದ ಕಾರಣ ಖರೀದಿಸಲು ಸಾಧ್ಯವಿಲ್ಲವೆಂದು ದೂರುದಾರರಾದ ತೃಪ್ತಿ ಮತ್ತು ಆಕೆಯ ಗಂಡ ರವರು ತಿಳಿಸಿದ್ದಕ್ಕೆ ಅವರುಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಹಿಂಸೆಯನ್ನು ನೀಡಿ ನಕಲಿ ಸಹಿಗಳನ್ನು ಶೆ ಪತ್ರಗಳ ಮೇಲೆ ಅರುಣ್ ರವರೇ ಮಾಡಿ ತೃಪ್ತಿ ಮತ್ತು ಆಕೆಯ ಗಂಡ ರವರು ಖರೀದಿ ಮಾಡಿರುವ ರೀತಿಯನ್ನು ಪತ್ರಗಳನ್ನು ಸೃಷ್ಟಿಸಿರುತ್ತಾರೆ.
ಅಲ್ಲದೇ ದಿ:-31/03/2020 ರ ಒಳಗೆ ಶೇರ್ ಹಣವನ್ನು ಪಾವತಿ ಮಾಡಬೇಕೆಂದು, ಜೊತೆಗೆ ಬ್ಯಾಂಕ್ ಚೆಕ್ ಗಳನ್ನು ಪಡೆದು ಅದಕ್ಕೆ ಸಹಿಯನ್ನು ಹಾಕುವಂತೆ ಮಧ್ವರಾಜ್ ರವರಿಗೆ ಬೆಲ್ಟ್, ಟೇಬಲ್ ಲ್ಯಾಂಪ್ ಮೂಲಕ ಹೊಡೆದು ಹಿಂಸೆಯನ್ನು ನೀಡಿರುತ್ತಾರೆ, ಮತ್ತು ಮಕ್ಕಳನ್ನು ಕಿಡ್ರಾಪ್ ಮಾಡಿಸುವುದಾಗಿ ಬೆದರಿಕೆಯನ್ನು ಹಾಕಿರುತ್ತಾರೆ. ಹಣ ಪಾವತಿ ಆಗುವವರೆಗೂ ದೂರುದಾರರಾದ ತೃಪ್ತಿ ಮತ್ತು ಆಕೆಯ ಗಂಡ ರವರ ಬಳಿ ಗೂಂಡಾಗಳನ್ನು ಇಟ್ಟು ನೋಡಿಕೊಳ್ಳುವಂತೆ ತಿಳಿಸಿದರು. ಈ ಎಲ್ಲಾ ರೀತಿಯ ಹಿಂಸೆಯಿಂದ ಹಣವನ್ನು ಹೊಂದಿಸಿ ಕೊಡುವ ಸಮಯದಲ್ಲಿ ಕೋವಿಡ್-19 ಖಾಯಿಲೆ ಆರಂಭವಾಗಿದ್ದು ಲಾಕ್ ಡೌನ್ ನಂತ ಸಮಸ್ಯೆ ಎದುರಾದಾಗ ಯಾವುದೇ ಕಾರ್ಯಕ್ರಮಗಳನ್ನು ಮಾಡಲು ಸರ್ಕಾರ ಅನುಮತಿ ನೀಡದೇ ಇದ್ದುದ್ದರಿಂದ ಹಣವನ್ನು ಸಂಗ್ರಹಿಸಲು ಕಷ್ಟಕರವಾಗಿದ್ದು, ಈ ಸಂದರ್ಭವನ್ನು ಉಪಯೋಗಿಸಿಕೊಂಡು ಅರುಣ್ ಶೇರ್ ಅಗ್ರಿಮೆಂಟ್ ನನ್ನು ಲೋನ್ ಅಗ್ರಿಮೆಂಟ್ ಆಗಿ ಮಾಡಿಸಿಕೊಂಡು ಪುನ: ದೂರುದಾರರಾದ ತೃಪ್ತಿ ಮತ್ತು ಆಕೆಯ ಗಂಡ ರವರಿಂದ ಬಲವಂತವಾಗಿ ಸಹಿಯನ್ನು ಮಾಡಿಸಿಕೊಂಡಿರುತ್ತಾರೆ.
ಅರುಣ್ ಜೀವನ ಕುಮಾರ್ ಎಂಬಬಾತನನ್ನು ನೇಮಿಸಿ ದೂರುದಾರರ ಗಂಡ ಹೋದ ಕಡೆಗಳೆಲಾ, ಆತನನ್ನು ಹಿಂಬಾಲಿಸುವಂತೆ ಹಣವನ್ನು ನೀಡುವಂತೆ ನೇಮಿಸಿರುತ್ತಾನೆ. ಅಲ್ಲದೇ ಒಂದು ಕತ್ತಲೆಯ ರೂಂನಲ್ಲಿ ಬೇರೆ ಬೇರೆ ಕಡೆಗಳಲ್ಲಿ ದೂರುದಾರರ ಗಂಡನನ್ನು ಕೂಡಿಹಾಕಿ ಹಣವನ್ನು ತಂದು ಕೊಡುವಂತೆ ಹೊಡೆದು, ಮುಖಕ್ಕೆ ಉಗುಳುವುದು, ಬೋಡ್ ನಿಂದ ಕುಯುವುದರ ಮೂಲಕ ಹಿಂಸೆಯನ್ನು ನೀಡುತ್ತಿದ್ದರು, ಈ ಎಲ್ಲಾ ಕಾರಣಗಳಿಂದ ದೂರುದಾರರ ಗಂಡ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು, ಆ ಸಮಯದಲ್ಲಿಯೂ ಸಹ ಅರುಣ್ ನನಗೆ ಹಣ ಬೇಕೆಂದು ಕೇಳಿದ್ದಕ್ಕೆ 81 ಲಕ್ಷ ರೂ ಹಣವನ್ನು ನಿಡಿದು, 76 ಲಕ್ಷ ಬ್ಯಾಂಕ್ ಮೂಲಕ ಮತ್ತು 08 ಲಕ್ಷ ನಗದು ರೂಪದಲ್ಲಿ ನೀಡಿರುತ್ತಾರೆ. ಇದಲ್ಲದೇ ದೂರುದಾರರು ಗಂಡನನ್ನು ಬಿಡುವಂತೆ ಕೇಳಿಕೊಂಡರು ಸಹ ಬಿಡದೇ ಹಿಂಸೆಯನ್ನು ನೀಡಿ ಪುನ: 65 ಲಕ್ಷ ರೂಗಳ ಲೋನ್ ಅಗ್ರಿಮೆಂಟ್ ಗೆ ಸಹಿಯನ್ನು ಹಾಕಿಸಿಕೊಂಡಿರುತ್ತಾನೆ.
ದೂರುದಾರರ ಗಂಡ ಯಾವುದೇ ಕೆಲಸವಿದೆ, ಕಾರ್ಯಗಳಿಲ್ಲದೇ ಹಣ ಹೊಂದಿಸಲು ಸಾಧ್ಯವಾಗದೇ ಅರುಣ್ ಮತ್ತು ಆತನು ನೇಮಿಸಿದ ವ್ಯಕ್ತಿಗಳಿಂದ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದು, ಅರುಣ್ ದೂರುದಾರರ ಮನೆಯ ಮುಂದೆ ಪ್ರಮೋದ್ ಕುಮಾರ್ ಎಂಬಾತನನ್ನು ಬಿಟ್ಟು ಅವರ ಚಲನ-ವಲನಗಳನ್ನು ಗಮನಿಸುವಂತೆ ನೇಮಕ ಮಾಡಿ, ಮನೆಗೆ ನುಗ್ಗಿ ದೂರುದಾರರ ಗಂಡನನ್ನು ಹುಡುಕಿ ಕಾಣದೇ ಇದ್ದಾಗ ದೂರುದಾರರಿಗೂ ಮತ್ತು ಮಕ್ಕಳಿಗೂ ಕಪಾಳಕ್ಕೆ ಹೊಡೆದು ಹಣವನ್ನು ಅರುಣ್ ರವರಿಗೆ ಕೊಡುವಂತೆ ಹಿಂಸೆಯನ್ನು ನೀಡಿರುತ್ತಾರೆ. ದೂರುದಾರರಿಗೆ, ಆಕೆಯ ಗಂಡ ಮತ್ತು ಮಕ್ಕಳಿಗೆ ಮಾನಸಿಕವಾಗಿ ಮತ್ತು ವೈಗಿಕವಾಗಿ ಹಿಂಸೆಯನ್ನು ನೀಡುತ್ತಿರುವ ಅರುಣ್, ಜೀವನ್ ಕುಮಾರ್ ಮತ್ತು ಪ್ರಮೋದ್ ರಾವ್ ರವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ದೂರು ಇತ್ಯಾದಿ.
BREAKING: ‘ರೇಣುಕಾಸ್ವಾಮಿ ಹತ್ಯೆ’ ಪ್ರಕರಣದಲ್ಲಿ ‘ಮತ್ತಿಬ್ಬರು ಆರೋಪಿ’ಗಳ ಬಂಧನ
ಗಮನಿಸಿ: ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಂದ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ