ಕೆಎನ್‌ಎನ್‌ಸಿನಿಮಾಡೆಸ್ಕ್: ದರ್ಶನ್ ಸ್ಯಾಂಡಲ್‌ವುಡ್‌ನಲ್ಲಿ ಈ ಹೆಸರು ಕೇಳುತ್ತಿದ್ದ ಹಾಗೇ ಈಗ ಅನೇಕ ಮಂದಿ ಬೆಚ್ಚಿ ಬೀಳುತ್ತಿದ್ದಾರೆ. ತೆರೆ ಮೇಲೆ ನಾಯಕನಾಗಿ. ಖಳನಾಯಕನಾಗಿ ಪಾತ್ರನಿರ್ವಹಣೆ ಮಾಡಿದ್ದ ದರ್ಶನ್ ನಿಜ ಜೀವನದಲ್ಲಿ ಈಗ ಖಳನಾಯಕನಾಗಿ ಕೊಲೆ ಆರೋಪದಲ್ಲಿ ಕಂಬಿ ಹಿಂದೆ ಮುಂದಿನ ಜೀವನವನ್ನು ನೆನೆಯುತ್ತ ಅಳುತ್ತಿದ್ದಾರೆ.
ಅಪ್ಪ ನಂತೆ ಮಗ ಎನ್ನುವ ಗಾದೆಯನ್ನು ಸಂಪೂರ್ಣ ಸುಳ್ಳು ಮಾಡಿದ ದರ್ಶನ್, ಮೆಜೆಸ್ಟಿಕ್‌ನಲ್ಲಿ ಇದ್ದ ಹಾಗೇ ಇರಲೇ ಇಲ್ಲ, ಬದಲಿಗೆ ಇನ್ನೋಬ್ಬರ ಹೆಂಡ್ತಿ ಮೇಲೆ ಕಣ್ಣು ಹಾಕಿ ಈಗ ಮುಂದಿನ ಜೀವನದ ಬಗ್ಗೆ ಯೋಚನೆ ಮಾಡುತ್ತ ಕುಳಿತುಕೊಂಡಿದ್ದಾರೆ. ಅಸಲಿಗೆ ದರ್ಶನ್ ಹೀಗೆ ಆಗಲು ಕಾರಣ ಪರಸ್ತ್ರೀ ವ್ಯಾಮೋಹ, ಹಣ, ಮದ್ಯವೇ ಕಾರಣ ಎನ್ನಲಾಗುತ್ತಿದೆ. ತನ್ನ ಪಾಡಿಗೆ ತಾನು ಇರುವುದು ಬಿಟ್ಟು ಸ್ಟಾರ್‌ಡಂ ಅನ್ನು ತಲೆಗೆ ಏರಿಸಿಕೊಂಡಿದ್ದ ದರ್ಶನ್ ತಾನು ನಡೆದು ಹೋಗಿದ್ದೇ ದಾರಿ ಅನ್ನೋ ಹಾಗೇ ಮಾಡಿಕೊಂಡಿದ್ದರು. ಸುತ್ತಲು ಹೊಗಳು ಬಟ್ಟರನ್ನು ತಾನು ಹೇಳಿದಕ್ಕೆ ಹೂ ಎನ್ನುವವರನ್ನು ಇಟ್ಟುಕೊಂಡಿದ್ದ ದರ್ಶನ್ ತನಗೆ ಸರಿ, ತಪ್ಪು ಯಾವುದು ಎನ್ನುವುದನ್ನು ಹೇಳುವವರನ್ನು ಇಟ್ಟುಕೊಳ್ಳದೇ ಇರುವುದು ಈಗ ವಿವಾದಕ್ಕೆ ಕಾರಣವಾಗಿದೆ ಜೊತೆಗೆ ನಾಳೆ ಜೀವನ ಏನು ಎನ್ನುವುದು ಉತ್ತರವಿರದ ಪ್ರಶ್ನೆಯಾಗಿದೆ.