ಶಿವಮೊಗ್ಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆನ್ನಲ್ಲೇ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅಲರ್ಟ್ ಆಗಿದ್ದಾರೆ. ಸಾಗರ ತಾಲೂಕು ಆಡಳಿತದ ಸರಣಿ ಸಭೆ ನಡೆಸಿ, PDO, ಮೆಸ್ಕಾಂ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.
ಇಂದು ಸಾಗರ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. ಸಾಗರ ತಾಲೂಕಿನ ಪಿಡಿಓ, ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಳೆಗಾಲದಲ್ಲಿ ಸೂಕ್ತ ಕ್ರಮ ವಹಿಸುವಂತೆ ಖಡಕ್ ಸೂಚನೆ ನೀಡಿದರು.
ಮಳೆಯಿಂದ ಮನೆ ಹಾಳಾದ್ರೇ 10,000 ತಕ್ಷಣ ಕೊಡಬೇಕು
ಮುಂಗಾರು ಮಳೆ ತಾಲೂಕಿನಲ್ಲಿ ಚುರುಕು ಪಡೆದಿದೆ. ಮಳೆಯಿಂದ ಹಲವೆಡೆ ಹಾನಿಗಳು ಘಟಿಸುತ್ತಿದ್ದಾವೆ. ಮಳೆಯಿಂದ ಮನೆ ಬಿದ್ದು ಹೋದರೇ ಕೂಡಲೇ ಅಂತಹ ಕುಟುಂಬಕ್ಕೆ ನೆರವಾಗೋದಕ್ಕಾಗಿ 10,000 ರೂ.ಗಳನ್ನು ಕೊಡಬೇಕು ಎಂಬುದಾಗಿ ಗ್ರಾಮ ಪಂಚಾಯ್ತಿ ಪಿಡಿಓಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಸೂಚಿಸಿದರು. ಅಲ್ಲದೇ ಕೊಟ್ಟಿಗೆ ಮನೆ ಬಿದ್ದಾಗ ಎನ್ ಆರ್ ಜಿ ಅನುದಾನದ ಅಡಿಯಲ್ಲಿ ಹಣ ನೀಡುವಂತೆ ಸೂಚಿಸಿದರು.
ಮಳೆಯಿಂದ ಮನೆ ಹಾಳಾದ ಬಗ್ಗೆ ಪಿಡಿಓ, ವಿಎ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಆ ಬಳಿಕ ಮನೆ ಮರು ನಿರ್ಮಾಣಕ್ಕಾಗಿ ಸರ್ಕಾರದಿಂದ ಪರಿಹಾರ ದೊರೆಯುವ ಕೆಲಸ ಮಾಡಬೇಕು ಎಂದರು.
ಪಿಡಿಓಗಳು ಯಾರೂ ರಜೆ ಹಾಕುವಂತಿಲ್ಲ
ಮಳೆಗಾಲದ ವೇಳೆಯಲ್ಲಿ ಯಾವುದೇ ಪಿಡಿಓಗಳು ರಜೆ ಹಾಕುವಂತಿಲ್ಲ. ಮಳೆಯಿಂದ ಆಗುವಂತ ಅನಾಹುತಗಳ ಬಗ್ಗೆ ಚುರುಕಾಗಿ ಕ್ರಮವಹಿಸಬೇಕು. ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಮಳೆಗಾಲ ಮುಗಿದ ಮೇಲೆ ನೀವು ಏನಿದ್ದರೂ ರಜೆ ತೆಗೆದುಕೊಳ್ಳುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಆದೇಶ ಮಾಡಿದರು.
ಪ್ರತಿ ಮನೆ ಮನೆಗೂ ನೀರು ಕೊಡಬೇಕು
ಜಲಜೀವನ್ ಮಿಷನ್ ಅಡಿಯಲ್ಲಿ ಮನೆ ಮನೆಗೂ ನೀರು ನೀಡಬೇಕು. ನೀರು ಬಾರದೇ ಇದ್ದರೇ ಅಂತಹ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ. ಯಾವುದೇ ಮನೆಗಳೂ ಜಲಜೀವನ್ ಮಿಷನ್ ಅಡಿಯಲ್ಲಿ ನಳ ಸಂಪರ್ಕದಿಂದ ವಂಚಿತವಾಗಬಾರದು ಎಂಬುದಾಗಿ ಪಿಡಿಓಗಳಿಗೆ ಎಚ್ಚರಿಕೆ ನೀಡಿದರು.
ಹೊಸ ಲೇಔಟ್ ಗೆ ಅನುಮತಿ ನೀಡುವಂತಿಲ್ಲ
ಸಾಗರ ತಾಲೂಕಿನಲ್ಲಿ ಹೊಸ ಲೇಔಟ್ ಗೆ ನನ್ನ ಗಮನಕ್ಕೆ ತಾರದೇ ಅನುಮತಿ ನೀಡುವಂತಿಲ್ಲ. ಹೊಸ ಲೇಔಟ್ ಗೆ ಅನುಮತಿ ನೀಡೋ ಸಂಬಂಧ ಸಭೆ ನಡೆಸಿ, ಅದರಲ್ಲಿ ಚರ್ಚಿಸಿದ ಬಳಿಕ ಅವಕಾಶ ಮಾಡಿಕೊಡುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಖಡಕ್ ಸೂಚನೆ ನೀಡಿದರು.
ಆನಂದಪುರ ಜೆಇಗೆ ತರಾಟೆ
ವಿದ್ಯುತ್ ವ್ಯತ್ಯಯ ಸಂಬಂಧ ಸಾರ್ವಜನಿಕರ ಕರೆಗೆ ಪ್ರತಿಸ್ಪಂದಿಸದಂತ ಆನಂದಪುರ ಜೆಇಯನ್ನು ಇಂದಿನ ಪಿಡಿಓಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ತರಾಟೆಗೆ ತೆಗೆದುಕೊಂಡರು. ನನಗೆ ಮತ್ತೆ ಕಂಪ್ಲೇಟ್ ಬರಬಾರದು. ಒಂದು ವಾರ ನಿಮಗೆ ಟೈಂ ಕೊಡುತ್ತೇನೆ. ಅಷ್ಟರಲ್ಲಿ ಸರಿಯಾಗಬೇಕು. ಜನರ ವಿದ್ಯುತ್ ಸಮಸ್ಯೆ ಸರಿ ಪಡಿಸೋ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇಲ್ಲ ಅಂದರೆ ಬೇರೆ ಕಡೆ ವರ್ಗಾವಣೆ ಮಾಡಲಾಗುತ್ತೇನೆ ಎಂದು ಎಚ್ಚರಿಸಿದರು.
ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗಳು ಪಿಡಿಓಗಳಿಗೆ ಜೊತೆಗೆ ಸಮನ್ವಯ ಸಾಧಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ನಿಮ್ಮ ನಡುವಿನ ಸಮಸ್ಯೆ ನಿವಾರಣೆಗಾಗಿಯೇ ಈ ಸಭೆ ನಡೆಸುತ್ತಿದ್ದೇನೆ ಎಂದರು.
ಬರಗಾಲದಲ್ಲೂ ಪವರ್ ಕಟ್ ಮಾಡದೇ ವಿದ್ಯುತ್ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ
ರಾಜ್ಯದಲ್ಲಿ ಬೇಸಿಗೆ ಸಮಯ ಬಂದ್ರೆ ಸಾಕು ಹಿಂದಿನ ಬಿಜೆಪಿ ಸರ್ಕಾರ ಪವರ್ ಕಟ್ ಮಾಡುತ್ತಿತ್ತು. ಆದ್ರೇ ಈ ಬಾರಿ ಬೇಸಿಗೆಯಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬರಗಾಲ ಬಂದಿತ್ತು. ಕುಡಿಯೋ ನೀರಿನ ಕೊರತೆ ಆಗಿತ್ತು. ಡ್ಯಾಂ, ನದಿಗಳಲ್ಲಿ ನೀರು ಕಡಿಮೆಯಾಗಿದ್ದವು. ಇದರ ನಡುವೆ ಬರಗಾಲದಲ್ಲೂ ಪವರ್ ಕಟ್ ಮಾಡದೇ ವಿದ್ಯುತ್ ಸಮರ್ಪಕವಾಗಿ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂಬುದಾಗಿ ತಿಳಿಸಿದರು.
ಡೈಂಗ್ಯೂ ಬಗ್ಗೆ ನಿಯಂತ್ರಣ ಕ್ರಮವಹಿಸಲು ಸೂಚನೆ
ಸಾಗರ ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ಮಳೆಗಾಲದ ಸಂದರ್ಭದಲ್ಲಿ ಹೆಚ್ಚಾಗುತ್ತಿವೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸೊಳ್ಳೆ ನಿಯಂತ್ರಣ ಕೆಲಸ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ನೀರು ನಿಲ್ಲದಂತೆ ಕ್ರಮವಹಿಸಿ, ಡೆಂಗ್ಯೂ ಪ್ರಕರಣಗಳನ್ನು ತಡೆಗಟ್ಟಬೇಕು ಎಂಬುದಾಗಿ ಸೂಚಿಸಿದರು.
ಇದೇ ಸಂದರ್ಭದಲ್ಲಿ ಬೇಸಿಗೆಯ ವೇಳೆಯಲ್ಲಿ ಬರಗಾಲದಲ್ಲೂ ಸಾಗರ ತಾಲೂಕಿನಲ್ಲಿ ಕುಡಿಯೋ ನೀರಿಗೆ ಕೊರತೆಯಾಗದಂತೆ ಉತ್ತಮ ರೀತಿಯಲ್ಲಿ ಕ್ರಮ ವಹಿಸಿ, ಕೆಲಸ ಮಾಡಿದಂತ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಕೆಲಸವನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಶ್ಲಾಘಿಸಿದರು. ಅಲ್ಲದೇ ಉತ್ತಮ ಕೆಲಸಕ್ಕಾಗಿ ಎಲ್ಲಾ ಪಿಡಿಓಗಳಿಗೆ ಅಭಿನಂದನೆ ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ
ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್: ರಾಜ್ಯ ಸರ್ಕಾರದಿಂದ SPPಯಾಗಿ ಅಶೋಕ್ ಎನ್ ನಾಯಕ್ ನೇಮಕ
ಬೆಂಗಳೂರಲ್ಲಿ ಅನಿಧಿಕೃತ ಫ್ಲೆಕ್ಸ್, ಬ್ಯಾನರ್ ಹಾಕಿದವರಿಗೆ ‘BBMP’ ಶಾಕ್: ’12 FIR’ ದಾಖಲು