ಕುವೈತ್: ಕುವೈತ್ನ ದಕ್ಷಿಣ ಮಂಗಾಫ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಬೆಂಕಿಯಲ್ಲಿ ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಕುವೈತ್ ಸುದ್ದಿ ಸಂಸ್ಥೆ (ಕುನಾ) ತಿಳಿಸಿದೆ.
ಬುಧವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡವು ಬೆಂಕಿಗೆ ಆಹುತಿಯಾಗಿದೆ. ಮುಂಜಾನೆ ಪ್ರಾರಂಭವಾದ ಬೆಂಕಿ ಬೇಗನೆ ಕಟ್ಟಡದಾದ್ಯಂತ ಹರಡಿತು, ಅನೇಕರನ್ನು ಒಳಗೆ ಸಿಲುಕಿಸಿತು.
ಬೆಂಕಿಯಲ್ಲಿ ಸಾವನ್ನಪ್ಪಿದವರಲ್ಲಿ ಐವರು ಕೇರಳಿಗರು ಸೇರಿದ್ದಾರೆ ಎಂದು ಒನ್ಮನೋರಮಾ ವರದಿ ಮಾಡಿದೆ. ಬೆಂಕಿಯ ಕಾರಣದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯಿಂದಾಗಿ ಸುಮಾರು 43 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತದ ಐವರು ಸೇರಿದಂತೆ ಈವರೆಗೆ 35 ಮಂದಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗೋ ಸಾಧ್ಯತೆ ಇದೆ.
BREAKING: ನಟಿ ಹರ್ಷಿಕಾ ಪೊಣಚ್ಚ, ಭುವನ್ ಮೇಲೆ ಹಲ್ಲೆ ಕೇಸ್: ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಜಮ್ಮು-ಕಾಶ್ಮೀರದ ಕಥುವಾದಲ್ಲಿ ‘ಎನ್ಕೌಂಟರ್’ಗೆ ಇಬ್ಬರು ಉಗ್ರರು ಬಲಿ: ಓರ್ವ ಯೋಧ ಹುತಾತ್ಮ