ನವದೆಹಲಿ: ಇಂದು ಮೋದಿ ಸಚಿವ ಸಂಪುಟದ ಮೊದಲ ಸಂಪುಟ ಸಭೆಯಲ್ಲೇ ನೂತನ ಸಚಿವರಿಗೆ ಅವರು ಖಾತೆ ಹಂಚಿಕೆ ಮಾಡಿದ್ದಾರೆ. ಮೊದಲ ಹಂತದಲ್ಲಿ ಸಂಪುಟ ಸಹೋದ್ಯೋಗಿಗಳಿಗೆ ರಾಜ್ಯ ದರ್ಜೆಯ ಸಚಿವರ ಖಾತೆ ಹಂಚಿಕೆ ಮಾಡಲಾಗಿದೆ. ಜೊತೆ ಜೊತೆಗೆ ಕೇಂದ್ರ ಸಂಪುಟ ಸಚಿವಸ್ಥಾನವನ್ನು ನೀಡಲಾಗಿದೆ.
ಮೋದಿ 3.0 ಸಚಿವ ಸಂಪುಟ ಯುಗಾರಂಭ ಮಾಡಿದೆ. ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ಅಧಿಕಾರದ ಗದ್ದುಗೆಗೇರಿದ್ದಾರೆ. ಈ ಬೆನ್ನಲ್ಲೇ ಸಚಿವ ಸಂಪುಟ ಸಭೆಯ ನಂತರ ಸಂಪುಟ ಸಹೋದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ನಿತಿನ್ ಗಡ್ಕರಿ ಅವರಿಗೆ ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಸಚಿವ ಸ್ಥಾನ ನೀಡಲಾಗಿದೆ. ಅಮಿತ್ ಶಾ ಅವರಿಗೆ- ಗೃಹ ಇಲಾಖೆಯ ಖಾತೆ ನೀಡಲಾಗಿದೆ. ಅಜಜ್ ತಮ್ತಾ ಅವರಿಗೆ ರಸ್ತೆ ಸಾರಿಗೆ, ಹೆದ್ದಾರಿ ರಾಜ್ಯ ಸಚಿವಸ್ಥಾನ ನೀಡಲಾಗಿದೆ. ಹರ್ಷ ಮಲ್ಹೋತ್ರಗೆ ರಸ್ತೆ ಸಾರಿಗೆ, ಹೆದ್ದಾರಿ ರಾಜ್ಯಖಾತೆಯನ್ನು ಹಂಚಿಕೆ ಮಾಡಲಾಗಿದೆ.
ಇನ್ನೂ ಸುಬ್ರಹ್ಮಣ್ಯ ಜೈ ಶಂಕರ್ ಅವರಿಗೆ ವಿದೇಶಾಂಗ ಸಚಿವರಾಗಿ ನೇಮಕ ಮಾಡಲಾಗಿದೆ. ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಇಲಾಖೆಯ ಸಚಿವಸ್ಥಾನ ನೀಡಲಾಗಿದೆ.
ಮಂತ್ರಿಮಂಡಲ: ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಜೆ.ಪಿ.ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಎಸ್. ಎಂಎಲ್ ಖಟ್ಟರ್, ಎಚ್ ಡಿ ಕುಮಾರಸ್ವಾಮಿ, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಜಿತನ್ ರಾಮ್ ಮಾಂಝಿ, ರಾಜೀವ್ ರಂಜನ್ ಸಿಂಗ್, ಸರ್ಬಾನಂದ ಸೋನೊವಾಲ್ ಮತ್ತು ಡಾ.ವೀರೇಂದ್ರ ಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದರು.
ಮಿತ್ರಪಕ್ಷಗಳ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಎಚ್ಎಎಂ ಮುಖ್ಯಸ್ಥ ಜಿತನ್ ರಾಮ್ ಮಾಂಝಿ, ಜೆಡಿಯು ನಾಯಕ ರಾಜೀವ್ ರಂಜನ್ ಸಿಂಗ್ ಲಾಲನ್, ಟಿಡಿಪಿಯ ಕೆ.ರಾಮ್ ಮೋಹನ್ ನಾಯ್ಡು ಮತ್ತು ಎಲ್ಜೆಪಿ-ಆರ್ವಿ ನಾಯಕ ಚಿರಾಗ್ ಪಾಸ್ವಾನ್ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಐದು ಮಿತ್ರಪಕ್ಷಗಳಲ್ಲಿ ಪ್ರತಿಯೊಂದೂ ತಲಾ ಒಂದು ಕ್ಯಾಬಿನೆಟ್ ಸ್ಥಾನವನ್ನು ಪಡೆಯಿತು.
ಮೊದಲ ಸಚಿವ ಸಂಪುಟ ಸಭೆಯಲ್ಲೇ ಮೋದಿ ಮಹತ್ವದ ನಿರ್ಧಾರ: ಬಡವರಿಗೆ 3 ಕೋಟಿ ಮನೆ ನಿರ್ಮಾಣಕ್ಕೆ ಅಸ್ತು
BREAKING: ಹೃದಯಾಘಾತದಿಂದ ‘ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ’ ನಿಧನ | MCA President Amol Kale