ನವದೆಹಲಿ : ಜಗತ್ತಿನ ಖ್ಯಾತ ಮೊಬೈಲ್ ನೆಟ್‌ವರ್ಕ್ ಅನಲಿಟಿಕ್ಸ್ ಕಂಪನಿ ‘ಓಪನ್‌ಸಿಗ್ನಲ್’ ವರದಿಯೊಂದನ್ನು ನೀಡಿದ್ದು, ಜಿಯೋದ ಸ್ವತಂತ್ರ 5ಜಿ ನೆಟ್‌ವರ್ಕ್‌ನಿಂದಾಗಿ ಜಿಯೋ ಏರ್ ಫೈಬರ್ ತನ್ನ ಗ್ರಾಹಕರಿಗೆ ಅತ್ಯುತ್ತಮ ವೇಗದಲ್ಲಿ ಡೇಟಾವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ. ಜಿಯೋದ ಸ್ಥಿರ ವೈರ್‌ಲೆಸ್ ಸೇವೆಯ ಗ್ರಾಹಕರು, ಅಂದರೆ ಜಿಯೋ ಏರ್ ಫೈಬರ್ ಗ್ರಾಹಕರು ತಿಂಗಳಿಗೆ ಸರಾಸರಿ 400 ಜಿಬಿ ಡೇಟಾವನ್ನು ಬಳಸುತ್ತಾರೆ ಎಂದು ಓಪನ್ ಸಿಗ್ನಲ್ ಅಭಿಪ್ರಾಯ ಪಟ್ಟಿದೆ. ಅಂದ ಹಾಗೆ ಈ ಬಳಕೆ ಪ್ರಮಾಣ ಮೊಬೈಲ್ ಗ್ರಾಹಕರಿಗಿಂತ ಹೆಚ್ಚು. ಇದರ ಹೊರತಾಗಿಯೂ ಜಿಯೋ ಏರ್ ಫೈಬರ್‌ನ ವೇಗ ಮತ್ತು ಗುಣಮಟ್ಟದ ಸ್ಕೋರ್ 5ಜಿ ಮೊಬೈಲ್ ನೆಟ್‌ವರ್ಕ್‌ನಂತೆಯೇ ಉಳಿದಿದೆ. ಜಿಯೋದ 5ಜಿ ನೆಟ್‌ವರ್ಕ್‌ನ ವೇಗವು ದೇಶದಲ್ಲಿಯೇ ಅತ್ಯಧಿಕವಾಗಿದೆ ಎಂದು ತಿಳಿಸಲಾಗಿದೆ.
ಭಾರತದ ‘ಸ್ಥಿರ ವೈರ್‌ಲೆಸ್ ಸೇವೆಗಳಲ್ಲಿ’ ರಿಲಯನ್ಸ್ ಜಿಯೋ ಮಾತ್ರ ಸದ್ಯಕ್ಕೆ ಸ್ವತಂತ್ರ 5ಜಿ ನೆಟ್‌ವರ್ಕ್ ಅನ್ನು ಬಳಸುತ್ತಿದೆ. ಓಪನ್ ಸಿಗ್ನಲ್ ಪ್ರಕಾರ, ಸ್ವತಂತ್ರ 5ಜಿ ಜೊತೆಗೆ ನೆಟ್‌ವರ್ಕ್ ಸ್ಲೈಸಿಂಗ್ ತಂತ್ರಜ್ಞಾನವು ಜಿಯೋ ಏರ್ ಫೈಬರ್ ಡೇಟಾ ಬಳಕೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಈ ತಂತ್ರಜ್ಞಾನದ ಪ್ರಯೋಜನಗಳನ್ನು ಪರಿಗಣಿಸಿ, ಏರ್‌ಟೆಲ್ 5ಜಿ ನೆಟ್‌ವರ್ಕ್‌ನಲ್ಲಿ ಸ್ಥಿರ ವೈರ್‌ಲೆಸ್ ಸೇವೆಯನ್ನು ತರಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬ್ರಾಡ್‌ಬ್ಯಾಂಡ್ ಕವರೇಜ್ ಕಡಿಮೆ ಇರುವ ಪ್ರದೇಶಗಳಲ್ಲಿ ನೆಟ್‌ವರ್ಕ್ ಕವರೇಜ್ ತರಲು ರಿಲಯನ್ಸ್ ಜಿಯೋ ಕಳೆದ ವರ್ಷವೇ ಜಿಯೋ ಏರ್ ಫೈಬರ್ ಅನ್ನು ಪ್ರಾರಂಭಿಸಿತ್ತು. ಜಿಯೋ ಏರ್ ಫೈಬರ್‌ಗೆ ಹೆಚ್ಚಿನ ಬೇಡಿಕೆಯು ಟಯರ್ -2 ನಗರಗಳಿಂದ ಬರುತ್ತಿದೆ. ಗ್ರಾಹಕರನ್ನು ಆಕರ್ಷಿಸುವುದಕ್ಕಾಗಿ ಜಿಯೋ ರೂ. 599ರಿಂದ ಪ್ರಾರಂಭವಾಗುವ- ಕೈಗೆಟುಕುವ ಅನೇಕ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಸೇವೆಯೊಂದಿಗೆ 10 ಕೋಟಿ ಸ್ಥಳಗಳನ್ನು ಸಂಪರ್ಕಿಸುವುದು ಕಂಪನಿಯ ಗುರಿಯಾಗಿದೆ. ಕಂಪನಿಯು ಸ್ಟ್ರೀಮಿಂಗ್ ಯೋಜನೆಗಳನ್ನು ಪರಿಚಯಿಸಿದ್ದು, ಇದರಲ್ಲಿ ಸ್ಥಿರ ಬ್ರಾಡ್‌ಬ್ಯಾಂಡ್ ಪ್ಯಾಕೇಜ್‌ಗಳೊಂದಿಗೆ 15 ಸ್ಟ್ರೀಮಿಂಗ್ ಅಪ್ಲಿಕೇಷನ್‌ಗಳು ಸೇರಿವೆ.
KEAಯಿಂದ ವಿವಿಧ ನಿಗಮಗಳಲ್ಲಿನ ಹುದ್ದೆಗಳ ಭರ್ತಿಗೆ ನಡೆದ ಲಿಖಿತ ಪರೀಕ್ಷೆಯ ಪರಿಷ್ಕೃತ ಅಂಕಪಟ್ಟಿ ಪ್ರಕಟ
BIG NEWS: ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ: ತೆಲಂಗಾಣ ಸಿಎಂ ರೇವಂತ ರೆಡ್ಡಿಗೆ ‘ಕನ್ನಡಿಗರ ಪತ್ರ’