ಹಾವೇರಿ: ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಿಂದಾಗಿ ಐದು ಅಂಗಡಿಗಳು ಸುಟ್ಟು ಭಸ್ಮವಾಗಿರುವಂತ ಘಟನೆ ಹಾವೇರಿಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಐದಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಹೋಗಿದ್ದಾವೆ.
ಚಿಕ್ಕೇರೂರು ಗ್ರಾಮದಲ್ಲಿನ ಎಲೆಕ್ಟ್ರಿಕ್ ಅಂಗಡಿ, ಬೇಕರಿ, ಬೊಂಬೆ ಅಂಗಡಿ, ಪೂಟ್ ವೇರ್ ಹಾಗೂ ಹೋಟೆಲ್ ಆಕಸ್ಮಿಕ ಬೆಂಕಿಯಿಂದಾಗಿ ಸುಟ್ಟು ಭಸ್ಮವಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸೋ ಕಾರ್ಯದಲ್ಲಿ ತೊಡಗಿದ್ದಾರೆ. ಈ ಆಕಸ್ಮಿಕ ಅಗ್ನಿ ಅವಗಢದಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದಾವೆ. ಬೆಂಕಿ ಅವಘಡಕ್ಕೆ ಕಾರಣ ಏನು ಅಂತ ತನಿಖೆಯ ನಂತ್ರ ಸ್ಪಷ್ಟವಾಗಿ ತಿಳಿಯಲಿದೆ.
NEET UG 2024: ಗ್ರೇಸ್ ಅಂಕ ಪಡೆದ 1,500 ವಿದ್ಯಾರ್ಥಿಗಳ ಫಲಿತಾಂಶ ಮರುಪರಿಶೀಲನೆಗೆ ಸಮಿತಿ ರಚನೆ