ನ್ಯೂಯಾರ್ಕ್ : ನ್ಯೂಯಾರ್ಕ್ ನಲ್ಲಿ ನಡೆದ ಪುರುಷರ ಟಿ 20 ವಿಶ್ವಕಪ್ 2024 ರಲ್ಲಿ ಕೆನಡಾ ತಂಡವು ಐರ್ಲೆಂಡ್ ವಿರುದ್ಧ ಮೊದಲ ವಿಶ್ವಕಪ್ ಪಂದ್ಯವನ್ನು ಜಯಿಸಿದೆ.
2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ವಿರುದ್ಧ ಕೆನಡಾ 12 ರನ್ಗಳ ಭರ್ಜರಿ ಜಯ ಸಾಧಿಸಿದೆ. 2024 ರ ಟಿ 20 ವಿಶ್ವಕಪ್ನಲ್ಲಿ ಸತತ ಎರಡನೇ ಸೋಲನ್ನು ಎದುರಿಸುತ್ತಿರುವ ಐರ್ಲೆಂಡ್ ತಂಡವನ್ನು ಯಶಸ್ವಿಯಾಗಿ ಕೆನಡಾ ತಂಡ ಸೋಲಿಸಿದೆ.
138 ರನ್ಗಳ ಗುರಿ ಬೆನ್ನತ್ತಿದ ಐರ್ಲೆಂಡ್ ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿತು. ಆರಂಭದಿಂದಲೂ ಶಿಸ್ತುಬದ್ಧ ಮತ್ತು ಪರಿಣಾಮಕಾರಿಯಾದ ಕೆನಡಾದ ಬೌಲರ್ಗಳು ಐರಿಷ್ ಆರಂಭಿಕ ಆಟಗಾರರಾದ ಪಾಲ್ ಸ್ಟಿರ್ಲಿಂಗ್ ಮತ್ತು ಆಂಡ್ರ್ಯೂ ಬಾಲ್ಬಿರ್ನಿ ಅವರನ್ನು ಬೇಗ ಔಟ್ ಮಾಡಿದರು. ಪವರ್ ಪ್ಲೇನ ಅಂತಿಮ ಓವರ್ ನಲ್ಲಿ ಸ್ಟಿರ್ಲಿಂಗ್ 17 ಎಸೆತಗಳಲ್ಲಿ ಒಂಬತ್ತು ರನ್ ಗಳಿಸಿ ಔಟ್ ಆದ್ರೆ,ಬಾಲ್ಬಿರ್ನಿ 17 ರನ್ ಗಳಿಸಿದರು. ಹ್ಯಾರಿ ಟೆಕ್ಟರ್ (7) ಮತ್ತು ಲಾರ್ಕಾನ್ ಟಕರ್ (10) ಬೇಗನೆ ವಿಕೆಟ್ ಒಪ್ಪಿಸಿದರು. ಐರ್ಲೆಂಡ್ 10 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿತು.
ಬಳಿಕ ಬಂದ ಕರ್ಟಿಸ್ ಕ್ಯಾಂಪರ್ (4) ಮತ್ತು ಗರೆತ್ ಡೆಲಾನಿ (3) ಕೂಡ ಬೇಗನೇ ವಿಕೆಟ್ ಒಪ್ಪಿಸಿದರು.ಆದಾಗ್ಯೂ, ಜಾರ್ಜ್ ಡಾಕ್ರೆಲ್ ಮತ್ತು ಮಾರ್ಕ್ ಅಡೈರ್ ಸ್ವಲ್ಪ ಪ್ರತಿರೋಧವನ್ನು ನೀಡಿದರು. ಏಳನೇ ವಿಕೆಟ್ ಗೆ 62 ರನ್ ಗಳ ಜೊತೆಯಾಟ ಐರ್ಲೆಂಡ್ ನ ಭರವಸೆಯನ್ನು ಪುನರುಜ್ಜೀವನಗೊಳಿಸಿತು. ಅಂತಿಮ ಓವರ್ನಲ್ಲಿ 17 ರನ್ಗಳ ಅವಶ್ಯಕತೆಯಿದ್ದಾಗ, ಜೆರೆಮಿ ಗಾರ್ಡನ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಅವರು ಎರಡನೇ ಎಸೆತದಲ್ಲಿ ಅಡೈರ್(34) ಅವರನ್ನು ಔಟ್ ಮಾಡಿದರು, ಮತ್ತು ಡಾಕ್ರೆಲ್ ಅಜೇಯ 30 ರನ್ ಗಳಿಸಿದರೂ, ಐರ್ಲೆಂಡ್ 12 ರನ್ಗಳಿಂದ ಸೋತಿತು. ಕೆನಡಾದ ಬೌಲರ್ಗಳು ಅದ್ಭುತ ಪ್ರದರ್ಶನ ನೀಡಿದರು. ಗೋರ್ಡನ್ ಮತ್ತು ದಿಲ್ಲಾನ್ ಹೇಲಿಗರ್ ತಲಾ ಎರಡು ವಿಕೆಟ್ ಪಡೆದರೆ, ಜುನೈದ್ ಸಿದ್ದಿಕಿ ಮತ್ತು ನಾಯಕ ಸಾದ್ ಬಿನ್ ಜಾಫರ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಕೆನಡಾ ತಂಡ 7 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತ್ತು. ಕೆನಡಾ ತಂಡದ ಪರ ಬಾರ್ಬಾಡಿಯನ್ ಮೂಲದ ನಿಕೋಲಸ್ ಕಿರ್ಟನ್ 35 ಎಸೆತಗಳಲ್ಲಿ 49 ರನ್ ಗಳಿಸಿದರು ಮತ್ತು ವಿಕೆಟ್ ಕೀಪರ್ ಶ್ರೇಯಸ್ ಮೊವ್ವಾ 36 ಎಸೆತಗಳಲ್ಲಿ 37 ರನ್ ಗಳಿಸಿದರು.
Canada WIN in New York! 🇨🇦
A superb bowling performance from them against Ireland sees them register their first Men's #T20WorldCup win 👏#CANvIRE | 📝: https://t.co/rYLPhX7ldC pic.twitter.com/axdtyEFrDg
— ICC (@ICC) June 7, 2024