ವಿಜಯನಗರ: ಬೆಳಿಗ್ಗೆ ಶಾಲೆ ಆರಂಭವಾದ ಕೂಡಲೇ ನಗು ನಗುತ್ತಲೇ ಖುಷಿಯಿಂದ ಶಾಲೆಗೆ ತೆರಳಿದ್ದಂತ ಬಾಲಕಿಯೊಬ್ಬಳಿಗೆ, ವಿದ್ಯುತ್ ಕಂಬ ಮುಟ್ಟಿದ ಪರಿಣಾಮ, ಕರೆಂಟ್ ಶಾಕ್ ಹೊಡೆದು ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ವಿಜಯಪುರದ ಕಾತ್ರಿಕಾಯನಹಟ್ಟಿಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾತ್ರಿಕಾಯನಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 2ನೇ ತರಗತಿ ಓದುತ್ತಿದ್ದಂತ ಬಾಲಕಿ ತೆರಳಿದ್ದಳು. ಶಾಲೆಗೆ ತೆರಳಿದ್ದಂತ ಬಾಲಕಿ ದಾರಿ ಮಧ್ಯದಲ್ಲಿ ವಿದ್ಯುತ್ ಕಂಬ ಸ್ಪರ್ಷಿಸಿದ್ದಾಳೆ. ಮಳೆ ಬಂದ ಕಾರಣ ಕಂಬದಿಂದ ವಿದ್ಯುತ್ ಶಾಕ್ ನಿಂದ ಕೆಲವೇ ಸಮಯದಲ್ಲಿ ಎಲ್ಲರ ಕಣ್ಣೆದುರೇ ಬಾಲಕಿ ಸಾವನ್ನಪ್ಪಿದ್ದಾಳೆ.
ಬಾಲಕಿ ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸರಿಯಾದ ರೀತಿಯಲ್ಲಿ ವಿದ್ಯುತ್ ಕಂಬ ಹಾಕದೇ, ವಿದ್ಯುತ್ ಇಲಾಖೆಯವರು ಎಡವಟ್ಟು ಮಾಡಿರೋದರಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ. ಈ ಕಾರಣದಿಂದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದಂತ ಬಾಲಕಿಗೆ ನ್ಯಾಯ ದೊರಕಿಸಿಕೊಡಬೇಕು ಅಂತ ಆಗ್ರಹಿಸಿದ್ದಾರೆ.
ಸೋ ಶಾಲಾ ಮಕ್ಕಳೇ ಮಳೆಗಾಲದಲ್ಲಿ ಯಾವುದೇ ವಿದ್ಯುತ್ ಕಂಬಗಳನ್ನು ಮುಟ್ಟಬೇಡಿ. ಶಾಲೆಗೆ ತೆರಳುತ್ತಿದ್ದರೇ ನೇರವಾಗಿ ಶಾಲೆಗೆ ಹೋಗಿ, ಮುಗಿಸಿಕೊಂಡು ಮನೆಗೆ ವಾಪಾಸ್ ಆಗಿ, ನಿಮಗಾಗಿ ನಿಮ್ಮ ಪೋಷಕರು ಕಾಯುತ್ತಿರುತ್ತಾರೆ. ಮಳೆಗಾಲದಲ್ಲಿ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಪ್ರವಹಿಸುತ್ತಿರೋ ಸಾಧ್ಯತೆ ಇರುತ್ತದೆ. ನೀವು ಮುಟ್ಟಿದ್ರೆ ಶಾಕ್ ಹೊಡೆದು ಜೀವ ಹಾನಿಯಾಗಬಹುದು. ಸೋ ಎಚ್ಚರಿಕೆ ವಹಿಸಿ, ಮಳೆಗಾಲದಲ್ಲಿ ಯಾವುದೇ ವಿದ್ಯುತ್ ಕಂಬ ಮುಟ್ಟಬೇಡಿ ಎಂಬುದು ನಮ್ಮ ಕಳಕಳಿಯ ವಿನಂತಿ ಕೂಡ ಆಗಿದೆ.