ನವದೆಹಲಿ: ನವದೆಹಲಿ: ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಹೊಸದಾಗಿ ಆಯ್ಕೆಯಾದ ಎಲ್ಲಾ ಸಂಸದರೊಂದಿಗೆ ಸಭೆ ನಡೆಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಮ್ಮಿಶ್ರ ಸರ್ಕಾರವನ್ನು ರಚಿಸುವ ಹಕ್ಕನ್ನು ಇಂದು ಮಂಡನೆ ಮಾಡಿದರು.
ಇದೇ ವೇಳೆ ಸಂವಿಧಾನ್ ಸದನದಲ್ಲಿ (ಹಳೆಯ ಸಂಸತ್ತು) ನಡೆದ ಎನ್ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಹೊಸದಾಗಿ ಆಯ್ಕೆಯಾದ ಸಂಸದರು, ಮುಖ್ಯಮಂತ್ರಿಗಳು ಮತ್ತು ಎನ್ಡಿಎಯ ಇತರ ನಾಯಕರು ‘ಮೋದಿ-ಮೋದಿ’ ಎಂದು ಘೋಷಣೆ ಕೂಗಿದರು. ಎನ್ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎನ್ಡಿಎ ನಾಯಕರು ಸ್ವಾಗತಿಸಿದರು. ಇದೇ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ರಾಜ್‌ನಾಥ್ ಸಿಂಗ್ ಅವರು ಪ್ರಸ್ಥಾಪ ಮಾಡಿದರು.