ಚಂಡೀಗಢ: ನೂತನ ಸಂಸದೆಯಾದ ಕಂಗನಾ ರಾಣಾವತ್ ಅವರು ಭದ್ರತೆಯನ್ನು ಮೀರಿ ಮೊಬೈಲ್ ಕೈಯಲ್ಲೇ ಹಿಡಿದು ತೆರಳೋದಕ್ಕೆ ವಿಮಾನ ನಿಲ್ದಾಣದಲ್ಲಿ ಮುಂದಾಗಿದ್ದಾರೆ. ಈ ವೇಳೆ ಪೊಲೀಸ್ ಪೇದೆಯೊಂದಿಗೆ ಕಿರಿಕ್ ತೆಗೆದಿದ್ದಾರೆ. ಆ ಬಳಿಕ ವಾಗ್ವಾದ ನಡೆದಿದೆ. ಈ ವೇಳೆಯಲ್ಲಿ ನೂತನ ಸಂಸದೆ ಕಂಗನಾ ರಾಣಾವತ್ ಗೆ ಪೊಲೀಸ್ ಪೇದೆ ಕಪಾಳ ಮೋಕ್ಷ ಮಾಡಿರೋದಾಗಿ ತಿಳಿದು ಬಂದಿದೆ.
ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಸೇರಿದ ಮಹಿಳಾ ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Kangana Ranaut slapped by CISF constable Kulwinder Kaur at Chandigarh airport for calling protesting farmers Khalistanis. pic.twitter.com/IGfXz2l4os
— Prayag (@theprayagtiwari) June 6, 2024
ಮೂಲಗಳ ಪ್ರಕಾರ, ಭದ್ರತಾ ತಪಾಸಣೆಯ ಸಮಯದಲ್ಲಿ ನಟ-ರಾಜಕಾರಣಿ ತನ್ನ ಫೋನ್ ಅನ್ನು ಟ್ರೇಯಲ್ಲಿ ಇಡಲು ನಿರಾಕರಿಸಿದ ನಂತರ ಭದ್ರತಾ ಸಿಬ್ಬಂದಿಯನ್ನು ತಳ್ಳಿದ್ದಕ್ಕಾಗಿ ಮಂಡಿಯಿಂದ ನಿಯೋಜಿತ ಸಂಸದರಿಗೆ ಭದ್ರತಾ ತಪಾಸಣೆಯಲ್ಲಿ ಕಪಾಳಮೋಕ್ಷ ಮಾಡಲಾಗಿದೆ.
ಕಂಗನಾ ರನೌತ್ ಮಧ್ಯಾಹ್ನ 3 ಗಂಟೆಗೆ ವಿಸ್ತಾರಾ ವಿಮಾನದಲ್ಲಿ ದೆಹಲಿಗೆ ತೆರಳಿದರು.