ಬೆಂಗಳೂರು ಗ್ರಾಮಾಂತರ: ಐ20 ಕಾರಿನಲ್ಲಿ ತೆರಳುತ್ತಿದ್ದಂತ ಕಾರು ಚಾಲಕನೊಬ್ಬ ಕುಡಿದ ಮತ್ತಿನಲ್ಲಿ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದಾನೆ. ಇದರ ಪರಿಣಾಮ ಅಪಘಾತ ಉಂಟಾಗಿದೆ. ಆ ಅಪಘಾತದಿಂದ ತಪ್ಪಿಸಿಕೊಳ್ಳೋದಕ್ಕೆ ಹೋಗಿ ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಹೊಸಕೋಟೆ ಹೊರವಲಯದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ-ಚಿಂತಾಮಣಿ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಐ20 ಕಾರನ್ನು ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಚಾಲಕ ಪ್ರಗತೀಶ್ ರಾವ್ ಚಲಾಯಿಸಿದ್ದಾರೆ. ಈ ಪರಿಣಾಮ ಬೈಕ್ ಸವಾರರಿಗೆ ಢಿಕ್ಕಿಯಾಗಿ ಬೆಂಗಳೂರಿನ ಶಿವಾಜಿನಗರದ ನಿವಾಸಿ ಮೊಹಮ್ಮಧ್ ಫೈಜ್(18) ಹಾಗೂ ಜಗದೀಶ್ (30) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನೂ ಈ ಅಪಘಾತದಲ್ಲಿ ಅಬ್ಬಾರ್, ಪಾಷಾ, ಅಬುಜರ್ ಎಂಬುವರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕುಡಿದ ಅಮಲಿನಲ್ಲಿ ಪ್ರಗತೀಶ್ ರಾವ್ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ. ಮೃತ ಕುಟುಂಬಗಳಿಗೆ ನ್ಯಾಯ ಕೊಡಿಸುವಂತ ಜಗದೀಶ್ ಕುಟುಂಬಸ್ಥರು ಹೊಸಕೋಟೆಯ ಶವಾಗಾರದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ಹೊಸಕೋಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಜೂನ್.9ಕ್ಕೆ ಮುಂದೂಡಿಕೆ | PM Modi’s Swearing
ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್ : ಕೇವಲ 60 ಸೆಕೆಂಡ್ ನಲ್ಲಿ ʻಚಾರ್ಜ್ʼ ಆಗಲಿದೆ ಫೋನ್!