ಮೀರತ್: ಉತ್ತರ ಪ್ರದೇಶದ ಮೀರತ್ ನ ಈಜುಕೊಳದಲ್ಲಿ ವ್ಯಕ್ತಿಯೊಬ್ಬ 25 ವರ್ಷದ ಯುವಕನ ಮೇಲೆ ಗುಂಡು ಹಾರಿಸುತ್ತಿರುವ ಭಯಾನಕ ಸಿಸಿಟಿವಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ವರದಿಗಳ ಪ್ರಕಾರ, ಮೀರತ್ನ ಲೋಹಿಯಾನಗರ ಪ್ರದೇಶದ ಸಾರ್ವಜನಿಕ ಈಜುಕೊಳದ ಬಳಿ ಈ ಘಟನೆ ನಡೆದಿದೆ.
ಅರ್ಷದ್ ಮತ್ತು ಆರೋಪಿಗಳಾದ ಬಿಲಾಲ್ ಮತ್ತು ದಾನಿಶ್ ನಡುವೆ ವಿವಾದ ಉದ್ಭವಿಸಿದ ಎರಡು ದಿನಗಳ ನಂತರ ಈ ಆಘಾತಕಾರಿ ಘಟನೆ ನಡೆದಿದೆ. ಭದಾನಾ ಈಜುಕೊಳದಲ್ಲಿ ಸಾರ್ವಜನಿಕ ವೀಕ್ಷಣೆಯಲ್ಲಿ ಈ ಕೊಲೆ ನಡೆದಿದ್ದು, ಆ ಸಮಯದಲ್ಲಿ ಹಾಜರಿದ್ದ ಜನರನ್ನು ಬೆಚ್ಚಿಬೀಳಿಸಿದೆ.
ಜೈ ನಗರದ ಅಮೀರ್ ಅಹ್ಮದ್ ಅವರ ಪುತ್ರ ಅರ್ಷದ್ ಮಕ್ಕಳೊಂದಿಗೆ ಈಜುತ್ತಿದ್ದಾಗ ಈ ದಾಳಿ ನಡೆದಿದೆ. ಪೊಲೀಸ್ ಅಧಿಕಾರಿಗಳು ಅಪರಾಧದ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ತಲೆಮರೆಸಿಕೊಂಡಿರುವ ಶಂಕಿತರಿಗಾಗಿ ಶೋಧ ನಡೆಸುತ್ತಿದ್ದಾರೆ. ಕೊಲೆಯಾದವನು ಮತ್ತು ಆರೋಪಿಗಳ ನಡುವಿನ ಇತ್ತೀಚಿನ ವಿವಾದವು ಕೊಲೆಗೆ ಸಂಬಂಧಿಸಿರಬಹುದು ಎಂದು ಶಂಕಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
UP – मेरठ में Live मर्डर का Video –
स्विमिंग पूल में नहाने गए 25 वर्षीय अरशद की गोली मारकर हत्या। आरोपी बिलाल और दानिश फरार हैं। दोनों पक्षों में 2 दिन पहले कोई विवाद हुआ, उसी के चलते ये हत्या हुई।
🚨 Sensitive Visual 🚨 pic.twitter.com/YI5y6pTfIS
— Sachin Gupta (@SachinGuptaUP) June 5, 2024