ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕನಕಪುರದ ಬಂಡೆಯನ್ನು ಛಿದ್ರ ಛಿದ್ರಗೊಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ.ಸಿಎನ್ ಮಂಜುನಾಥ್ ಅವರನ್ನು ಮತದಾರರು ಈ ಬಾರಿ ಕೈ ಹಿಡಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಭಾರಿ ಅಂತರದಿಂದ ಸೋಲು ಕಂಡಿದ್ದಾರೆ.
ಈ ಸೋಲಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಡಿ.ಕೆ ಸುರೇಶ್ ಅವರು, ನಾನು ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಮತದಾರರ ತೀರ್ಪಿಗೆ ತಲೆ ಭಾಗುತ್ತೇನೆ ಎಂದರು.
ರಾಜ್ಯಕ್ಕೆ ಒಳ್ಳೇದಾಗಲಿ. ಕ್ಷೇತ್ರಕ್ಕೆ ಒಳ್ಳೇದಾಗಲಿ. ನಾನು ನನ್ನ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತನಾಗಿ ಜೊತೆಗೆ ಇರುತ್ತೇನೆ. ನಾನು ನಿಮ್ಮಲ್ಲಿ ಬೆಳೆದವನು. ನಿಮ್ಮ ಜೊತೆಗೆ ಓಡಾಡಿದವನು. ಆ ಕೆಲಸ ನಿರಂತರವಾಗಿ ಇರುತ್ತೇನೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಇದ್ದದ್ದೇ ಎಂಬುದಾಗಿ ತಿಳಿಸಿದರು.
BIG NEWS : ಲೋಕಸಭೆ ಚುನಾವಣೆ ಫಲಿತಾಂಶ : ಕರ್ನಾಟಕದಲ್ಲಿ ಮೂವರು ಮಾಜಿ ಸಿಎಂಗಳಿಗೆ ಭರ್ಜರಿ ಗೆಲುವು
BREAKING : ಷೇರುಮಾರುಕಟ್ಟೆಯಲ್ಲಿ ಮತ್ತೆ ಭಾರೀ ಕುಸಿತ: ಹೂಡಿಕೆದಾರರಿಗೆ 26 ಲಕ್ಷ ಕೋಟಿ ನಷ್ಟ!