ಹಾಸನ: ಜಿಲ್ಲೆಯ ಲೋಕಸಭಾ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಎಂಬುದಾಗಿಯೇ ಬಿಂಬಿತವಾಗಿತ್ತು. ಕಳೆದ 25 ವರ್ಷಗಳಿಂದ ಜೆಡಿಎಸ್ ಪಕ್ಷದ ಹೊರತಾಗಿ ಬೇರೆ ಯಾರೂ ಸಂಸದರು ಆಗಿರಲಿಲ್ಲ. ಇಂತಹ ಕ್ಷೇತ್ರದಲ್ಲಿ ಜೆಡಿಎಸ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಛಿದ್ರ ಛಿದ್ರವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇಂದು ನಡೆದಂತ ಲೋಕಸಭಾ ಚುನಾವಣೆಯ ಮತಏಣಿಕೆಯ 18ನೇ ಸುತ್ತಿನಲ್ಲಿ, ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 6,64,848 ಮತಗಳನ್ನು ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು, 6,21,255 ಮತಗಳನ್ನು ಪಡೆದಿದ್ದರು. ಬರೋಬ್ಬರಿ 43,588 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ್ದಾರೆ.
ಅಂದಹಾಗೇ ಹಾಸನ ಲೋಕಸಭಾ ಕ್ಷೇತ್ರದ 2024ರ ಚುನಾವಣೆಯಲ್ಲಿ 13,48,966 ಮತಗಳು ಚಲಾವಣೆಯಾಗಿದ್ದವು. ಇದುವರೆಗೆ 13,28,820 ಮತಗಳ ಏಣಿಕೆ ಕಾರ್ಯ ಪೂರ್ಣಗೊಂಡಿದೆ. ಇನ್ನೂ ಕೇವಲ 26,146 ಮತಗಳ ಏಣಿಕೆ ಮಾತ್ರವೇ ಬಾಕಿ ಉಳಿದಿದೆ. ಇದರಲ್ಲಿ 42,187 ಮತಗಳ ಅಂತರವನ್ನು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಕಾಯ್ದುಕೊಂಡಿದ್ದು, ಗೆಲುವಿನ ನಗೆ ಬೀರಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಮಾತ್ರವೇ ಬಾಕಿ ಇದೆ.
ಲೋಕಸಭಾ ಚುನಾವಣೆ ಫಲಿತಾಂಶ: ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲುವು
BREAKING : ಷೇರುಮಾರುಕಟ್ಟೆಯಲ್ಲಿ ಮತ್ತೆ ಭಾರೀ ಕುಸಿತ: ಹೂಡಿಕೆದಾರರಿಗೆ 26 ಲಕ್ಷ ಕೋಟಿ ನಷ್ಟ!