ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರವೇ ಬಾಕಿ ಉಳಿಸಿದೆ.
ಇತ್ತೀಚಿನ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ವಿವರದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು 647736 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು 407678 ಪಡೆದಿದ್ದರು. JDS ಅಭ್ಯರ್ಥಿ ಕುಮಾರಸ್ವಾಮಿ 240158 ಮತಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದರು.
ಅಂತಿಮ ಮತಏಣಿಕೆ ಮಾತ್ರವೇ ಬಾಕಿ ಉಳಿದಿದ್ದು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರ ಬಿಜೆಪಿ-ಜೆಡಿಎಸ್ ತೆಕ್ಕೆಗೆ ಹೋದಂತೆ ಆಗಿದೆ.
BIG BREAKING: 25 ವರ್ಷಗಳ ಬಳಿಕ ‘ಕಾಂಗ್ರೆಸ್’ ತೆಕ್ಕೆಗೆ ಸಿಂ’ಹಾಸನ’: ‘ಪ್ರಜ್ವಲ್ ರೇವಣ್ಣ’ಗೆ ಹೀನಾಯ ಸೋಲು
Election Results 2024: ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ 54,658 ಮತಗಳಿಂದ ಮುನ್ನಡೆ